2021ರ ವೇಳೆಗೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ 83 ಕೋಟಿ?
ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ 83 ಕೋಟಿ ದಾಟಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಸಿಸ್ಕೊ ವಿಷುವಲ್ ನೆಟ್‍ವರ್ಕಿಂಗ್ ಇಂಡೆಕ್ಸ್ (ವಿಎನ್‍ಐ ) ಎಂಬ ಹೆಸರಿನ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗ. ಭಾರತದಲ್ಲಿ ಈಗ ಸದ್ಯಕ್ಕೆ 37 ಕೋಟಿ
ನವದೆಹಲಿ, ಜೂನ್ 10: ಸದ್ಯಕ್ಕೆ ಭಾರತದಲ್ಲಿ ಇರುವ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಮುಂದಿನ ನಾಲ್ಕು ವರ್ಷಗಳಲ್ಲಿ ದುಪ್ಪಟ್ಟಾಗಲಿದ್ದು, 2012ರ ವೇಳೆ ಬಳಕೆದಾರರ ಸಂಖ್ಯೆ 83 ಕೋಟಿ ರು. ದಾಟಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಸಿಸ್ಕೊ ವಿಷುವಲ್ ನೆಟ್‍ವರ್ಕಿಂಗ್ ಇಂಡೆಕ್ಸ್ (ವಿಎನ್‍ಐ ) ಎಂಬ ಸಮೀಕ್ಷೆಯಲ್ಲಿ ಈ ಅನಿಸಿಕೆ ವ್ಯಕ್ತವಾಗಿದೆ. ಭಾರತದಲ್ಲಿ ಈಗ ಸದ್ಯಕ್ಕೆ 37 ಕೋಟಿ ಜನರು ಅಂತರ್ಜಾಲ ಸೇವೆಯನ್ನು ಬಳಸುತ್ತಿದ್ದಾರೆ. ಭಾರತದ ಜನಸಂಖ್ಯೆಗೆ ಹೋಲಿಸಿದರೆ, ಇದು ಶೇ. 28ರಷ್ಟಿದೆ.

ವರ್ಷದಿಂದ ವರ್ಷಕ್ಕೆ ಇದು ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲಿದ್ದು, ಹಂತ ಹಂತವಾಗಿ ಬಳಕೆದಾರರ ಸಂಖ್ಯೆಯೂ ಏರಲಿದೆ. 2012ರ ಹೊತ್ತಿಗೆ ಬಳಕೆದಾರರ ಸಂಖ್ಯೆ 83 ಕೋಟಿ ದಾಟಲಿದೆ ಎಂದು ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.
ಮೊಬೈಲ್ ಅಪ್ಲಿಕೇಷನ್‍ಗಳ ಬಳಕೆ, ಕನೆಕ್ಟಿವಿಟಿ(ಸಂಪರ್ಕ) ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಬರುವ ಐದು ವರ್ಷಗಳಲ್ಲಿ ಇಂಟರ್‍ನೆಟ್ ಪ್ರೊಟೊಕಾಲ್ ಟ್ರಾಫಿಕ್ ನಾಲ್ಕು ಪಟ್ಟು ಹೆಚ್ಚುವ ಸಾಧ್ಯತೆ ಇದೆ. ಅಂದರೆ ವಾರ್ಷಿಕ ಸಾರಾಸಗಟು ಶೇ.30ರ ಅಭಿವೃದ್ದಿ ಹೊಂದಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.












Click it and Unblock the Notifications