Cyclone Hamoon: ತೀವ್ರಗೊಂಡ ಹಮೂನ್ ಚಂಡಮಾರುತ: ಎಲ್ಲೆಲ್ಲಿ ಅಧಿಕ ಮಳೆ, ಬಲವಾದ ಗಾಳಿ ಎಚ್ಚರಿಕೆ..?
ದೆಹಲಿ ಅಕ್ಟೋಬರ್ 24: ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹಮೂನ್ (Hamoon) ಚಂಡಮಾರುತ ತೀವ್ರ ಸ್ವರೂಪ ತಾಳಿತುವುದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ. ಇದು ಉತ್ತರ-ಈಶಾನ್ಯ ದಿಕ್ಕಿನತ್ತ ಸಾಗಲಿದ್ದು ಅಕ್ಟೋಬರ್ 25ರಂದು ಮಧ್ಯಾಹ್ನದ ಸುಮಾರಿಗೆ ಬಾಂಗ್ಲಾದೇಶ ಕರಾವಳಿಯಲ್ಲಿ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದೆ. ವಿಶೇಷವಾಗಿ ಖೇಪುಪಾರಾ ಮತ್ತು ಚಿತ್ತಗಾಂಗ್ ನಡುವೆ ಭೂಕುಸಿತವಾಗುವ ಸಾಧ್ಯತೆಯಿದೆ ಎಂದು ಪ್ರಸ್ತುತ ಐಎಂಡಿ ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ರೂಪಗೊಂಡಿರುವ ಈ ಹಮೂನ್ ಚಂಡಮಾರುತದಿಂದಾಗಿ ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಜೋರಾಂ, ತ್ರಿಪುರಾ, ಮೇಘಾಲಯ ಮತ್ತು ದಕ್ಷಿಣ ಅಸ್ಸಾಂನ ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 24 ರಂದು ಮಿಜೋರಾಂನಲ್ಲಿ ಭಾರೀ ಮಳೆಯಾಗಲಿದ್ದು ಎಚ್ಚರ ವಹಿಸುವಂತೆ ಐಎಂಡಿ ತಿಳಿಸಿದೆ.

ಮಾತ್ರವಲ್ಲದೆ ತ್ರಿಪುರಾದಲ್ಲೂ ಇಂದು ಅಧಿಕ ಮಳೆಯಾಗುವ ನಿರೀಕ್ಷೆಯಿದ್ದು, ಅಕ್ಟೋಬರ್ 25 ರಂದು ತ್ರಿಪುರಾದ ಕೆಲ ಪ್ರದೇಶಗಳಲ್ಲಿ ಅಧಿಕ ಮಳೆಯಾಗಲಿದೆ. ಇಲ್ಲಿ ಅಕ್ಟೋಬರ್ 26 ರ ವೇಳೆಗೆ ಚಂಡಮಾರುತದ ತೀವ್ರತೆಯು ಕಡಿಮೆಯಾಗುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಅಕ್ಟೋಬರ್ 26 ರಂದೂ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸೂಚನೆ ಇದೆ.
ದಕ್ಷಿಣ ಅಸ್ಸಾಂ ಮತ್ತು ಪೂರ್ವ ಮೇಘಾಲಯದಲ್ಲೂ ಸಹ ಅಕ್ಟೋಬರ್ 24-25 ರಂದು ಮಧ್ಯಮ ಮಳೆಯನ್ನು ನಿರೀಕ್ಷಿಸಬಹುದು. ದಕ್ಷಿಣ ಅಸ್ಸಾಂನಲ್ಲಿ ಪ್ರತ್ಯೇಕವಾಗಿ ಅಧಿಕ ಮಳೆಯಾಗಲಿದ್ದು, ಅಕ್ಟೋಬರ್ 24 ರಂದು ಇಲ್ಲಿನ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿರುವುದರಿಂದ ಒಡಿಶಾದ ಕರಾವಳಿ ಜಿಲ್ಲೆಗಳು ಹಮೂನ್ ಚಂಡಮಾರುತದ ಪ್ರಭಾವಕ್ಕೆ ಗುರಿಯಾಗಲಿವೆ ಎಂದು ಹವಮಾನ ಇಲಾಖೆ ಹೇಳಿದೆ.

ಜೊತೆಗೆ ಪಶ್ಚಿಮ ಬಂಗಾಳವೂ ಹಮೂನ್ ಚಂಡಮಾರುತದ ಪ್ರಭಾವಕ್ಕೆ ಗುರಿಯಾಗಲಿದೆ. ಹೀಗಾಗಿ ಕರಾವಳಿ ಜಿಲ್ಲೆಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಗೆ ಸಿದ್ಧವಾಗಬೇಕು ಎಂದು ಐಎಂಡಿ ತಿಳಿಸಿದೆ. ಅಕ್ಟೋಬರ್ 24 ರಂದು ಬಂಗಾಳದ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯ ಮುನ್ಸೂಚನೆ ಐಎಂಡಿ ನೀಡಿದೆ. ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಬಂಗಾಳಕೊಲ್ಲಿ ಮತ್ತು ಪೂರ್ವ ಭಾರತದ ವಿವಿಧ ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಅದು ಹೇಳಿದೆ.
ಅಕ್ಟೋಬರ್ 24 ರಂದು ಒಡಿಶಾ ಕರಾವಳಿಯಲ್ಲಿ ಗಾಳಿ ಗಂಟೆಗೆ 40-50 ಕಿಮೀ ವೇಗವನ್ನು ತಲುಪುತ್ತದೆ. ಮಾತ್ರವಲ್ಲದೆ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಹೆಚ್ಚಾಗಿ ಬೀಸುವ ಸಾಧ್ಯತೆ ಇದೆ. ಬಳಿಕ ಮಾರುತಗಳು ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕರಾವಳಿಯಲ್ಲಿ ಮಳೆ ಪ್ರಾರಂಭಿಸುವ ನಿರೀಕ್ಷೆಯಿದೆ.
ಅಕ್ಟೋಬರ್ 24 ರ ಬೆಳಿಗ್ಗೆ ಅದು ನಿಧಾನವಾಗಿ ಹೆಚ್ಚಾಗುವ ಸಾಧ್ಯತೆಯಿದ್ದು ಬಾಂಗ್ಲಾದೇಶ ಕರಾವಳಿಯಲ್ಲಿ ಗಂಟೆಗೆ 55-65 ಕಿಮೀ ರಿಂದ 75 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಉತ್ತರ ಮ್ಯಾನ್ಮಾರ್‌ನಲ್ಲಿ ಗಾಳಿಯ ವೇಗ ಗಂಟೆಗೆ 45-55 ಕಿಮೀ ತಲುಪುವ ಸಾಧ್ಯತೆಯಿದ್ದರೆ ಅಕ್ಟೋಬರ್ 25 ರಂದು ಪಶ್ಚಿಮ ಬಂಗಾಳ ಕರಾವಳಿಯ ಉದ್ದಕ್ಕೂ ಮತ್ತು ಹೊರಗೆ 65 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಐಎಂಡಿ ಹೇಳಿದೆ.
ಜೊತೆಗೆ ಅಕ್ಟೋಬರ್ 25 ರಂದು ಮಿಜೋರಾಂ ಮತ್ತು ತ್ರಿಪುರಾದಲ್ಲಿ 40-50 ಕಿಮಿ ನಿಂದ 60 ಕಿಮಿ ವೇಗದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ. ಅದೇ ದಿನ ದಕ್ಷಿಣ ಅಸ್ಸಾಂ ಮತ್ತು ಮಣಿಪುರದಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ 50 ಕಿಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ.











Click it and Unblock the Notifications