ಜೈಲಿನಲ್ಲೇ ಛೋಟಾ ರಾಜನ್ ಮುಗಿಸಲು ಡಿ ಗ್ಯಾಂಗ್ ಸ್ಕೆಚ್!

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಡಿಸೆಂಬರ್ 27:ನಕಲಿ ಪಾಸ್ಪೋರ್ಟ್ ಪಡೆದ ಪ್ರಕರಣದಲ್ಲಿ ತಿಹಾರ್ ಜೈಲು ಪಾಲಾಗಿರುವ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಭೂಗತ ಪಾತಕಿ ಛೋಟಾ ರಾಜನ್ ನನ್ನು ಜೈಲಿನಲ್ಲೇ ಮುಗಿಸಲು ಡಿ ಗ್ಯಾಂಗ್ ಸ್ಕೆಚ್ ಹಾಕಿದ್ದ ಸುದ್ದಿ ಬಹಿರಂಗವಾಗಿದೆ.

ನಕಲಿ ಪಾಸ್ ಪೋರ್ಟ್ ಹಗರಣದಲ್ಲಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಪಡೆದಿರುವ ಛೋಟಾ ರಾಜನ್ ಸದ್ಯ ತಿಹಾರ್ ಜೈಲಿನಲ್ಲಿದ್ದಾನೆ.

ಛೋಟಾ ರಾಜನ್ : ಡಾನ್ ಆಗಿದ್ದು ಹೇಗೆ?

ಛೋಟಾ ರಾಜನ್ ನನ್ನು ಮುಗಿಸಲು ದಾವೂದ್ ಇಬ್ರಾಹಿಂ ಗ್ಯಾಂಗ್ ಸ್ಕೆಚ್ ಹಾಕಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿ, ಎಚ್ಚರಿಸಿವೆ.

Intel busts D-Gang’s plot to assassinate Chhota Rajan

ಹೀಗಾಗಿ, ಜೈಲಿನಲ್ಲಿ ಛೋಟಾ ಇರುವ ಸೆಲ್ ಗೆ ನೀಡಿರುವ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಕುಖ್ಯಾತ ದರೋಡೆಕೋರ ನೀರಜ್ ಭಾವಾ ವಿಚಾರಣೆಯ ಸಂದರ್ಭದಲ್ಲಿ ಈ ವಿಷಯ ಹೊರ ಹಾಕಿದ್ದಾನೆ.

ಕೊಲೆ, ಸುಲಿಗೆ, ಬೆದರಿಕೆ, ಬಾಂಬ್ ಸ್ಫೋಟದ ಸಂಚು ಸೇರಿದಂತೆ ರಾಜನ್ ವಿರುದ್ಧ ಮುಂಬೈನ ವಿವಿಧ ಠಾಣೆಗಳಲ್ಲಿ 75ಕ್ಕೂ ಅಧಿಕ ಕೇಸುಗಳಿವೆ. ದೆಹಲಿ ಪೊಲೀಸರು 6 ಪ್ರಮುಖ ಪ್ರಕರಣಗಳಲ್ಲಿ ರಾಜನ್ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A plot to kill Chhota Rajan inside the Tihar jail has been busted. It was found that a top gangster from New Delhi, Neeraj Bawana was tasked with the job of killing Rajan inside the Tihar jail.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ