9ನೇ ವಯಸ್ಸಲ್ಲಿ ಶಾಲೆ ಬಿಟ್ಟಿದ್ದ ಅಜ್ಜಿಗೆ 105ನೇ ವಯಸ್ಸಿನಲ್ಲಿ ಗಣಿತದಲ್ಲಿ 100ಕ್ಕೆ 100 ಅಂಕ: ಇದು ಭಗೀರಥಿ ಅಮ್ಮನ ಯಶಸ್ಸಿನ ಕಥೆ

ಕಲಿಯಲು ವಯಸ್ಸಿನ ಮಿತಿಯಿಲ್ಲ, ಸಾಧಿಸುವ ಛಲವೊಂದಿದ್ದರೆ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಯಶಸ್ಸಿನ ಶಿಖರವನ್ನ ಏರಬಹುದು ಎಂಬ ಮಾತನ್ನ ಸಾಬೀತುಪಡಿಸಿದವರು ಕೇರಳದ ಭಗೀರಥಿ ಅಮ್ಮ. ಇವರ ಜೀವನ ಪಯಣವನ್ನಾ ತಿಳಿಯಲು ತುಂಬ ಕುಕೂಹಲವಾಗಿದ್ದೀರಾ? ಹಾಗಾದ್ರೆ ಇಲ್ಲಿದೆ ಓದಿ..

ಜೀವನದಲ್ಲಿ ಎದುರಾದ ಒಂದಿಷ್ಟು ಸಂಕಷ್ಟಗಳಿಂದಾಗಿ, ಕುಟುಂಬದ ಜವಾಬ್ದಾರಿಗಳಿಂದಾಗಿ ಬಾಲ್ಯದಲ್ಲಿಯೇ ಶಿಕ್ಷಣದಿಂದ ವಂಚಿತರಾಗಿದ್ದ ಭಗೀರಥಿ ಅಮ್ಮ, ತಮ್ಮ 105ನೇ ವಯಸ್ಸಿನಲ್ಲಿ ಮತ್ತೆ ಅಕ್ಷರ ಕಲಿತು ಇತಿಹಾಸವನ್ನೇ ಬರೆದಿದ್ದಾರೆ. ಕೇವಲ ಪರೀಕ್ಷೆ ಬರೆಯುವುದು ಮಾತ್ರವಲ್ಲದೆ, ಎಲ್ಲರಿಗೂ ಕಷ್ಟ ಎನಿಸುವ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆಯುವ ಮೂಲಕ ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ.

Inspiring Tale of 105-Year-Old Bhageerathi Amma Scoring 100 in Maths amp amp Winning Nari Shakti Award

ಭಗೀರಥಿ ಅಮ್ಮ ಅವರ ಈ ಅದ್ಭುತ ಸಾಧನೆಗೆ ಪ್ರತಿಷ್ಠಿತ 'ನಾರಿ ಶಕ್ತಿ ಪುರಸ್ಕಾರ' ಒಲಿದು ಬಂದಿದೆ. ಭಗೀರಥಿ ಅಮ್ಮ ಅವರ ಈ ಕಥೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಮತ್ತು ಕಲಿಯುವ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಉತ್ತಮ ಮಾದರಿ.

ಬಾಲ್ಯದ ಸಂಕಷ್ಟ ಮತ್ತು ಕಮರಿದ ಶಿಕ್ಷಣದ ಕನಸು

ಭಗೀರಥಿ ಅಮ್ಮನವರ ಬಾಲ್ಯದ ದಿನಗಳು ಅತ್ಯಂತ ಕಷ್ಟಕರ ಮತ್ತು ಸವಾಲುಗಳಿಂದ ಕೂಡಿತ್ತು. ಆಟವಾಡುವ ವಯಸ್ಸಿನಲ್ಲಿಯೇ ತಮ್ಮ ಕಿರಿಯ ಸಹೋದರ ಸಹೋದರಿಯರನ್ನ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಅವರ ಹೆಗಲೇರಿತ್ತು. ಇದೇ ಕಾರಣಕ್ಕಾಗಿ ಅವರು ಕೇವಲ ತಮ್ಮ 9ನೇ ವಯಸ್ಸಿನಲ್ಲಿಯೇ ಶಾಲೆಯನ್ನ ಶಾಶ್ವತವಾಗಿ ಬಿಡಬೇಕಾಯಿತು. ಹಾಗೆಯೇ ಅವರ ಶಿಕ್ಷಣದ ಕನಸು ಅಲ್ಲಿಗೇ ಕಮರಿಹೋಯಿತು. ತದನಂತರ ಅವರಿಗೆ ವಿವಾಹವಾಯಿತು.

ಆದರೆ ದುರದೃಷ್ಟವಶಾತ್ ಚಿಕ್ಕ ವಯಸ್ಸಿನಲ್ಲಿಯೇ ಅವರ ಗಂಡ ವಿಧಿವಶರಾದರು. ಆಗ ಆರು ಜನ ಮಕ್ಕಳನ್ನ ಒಂಟಿಯಾಗಿ ಬೆಳೆಸುವ, ಪೋಷಿಸುವ ಜವಾಬ್ದಾರಿ ಸಂಪೂರ್ಣವಾಗಿ ಅವರ ಮೇಲಿತ್ತು. ದಶಕಗಳ ಕಾಲ ತಮ್ಮ ಕುಟುಂಬದ ಏಳಿಗೆಯಲ್ಲಿಯೇ ಮುಳುಗಿದ್ದ ಅವರಿಗೆ, ಮತ್ತೆ ಶಾಲೆಗೆ ಹೋಗುವುದು ಅಥವಾ ಶಿಕ್ಷಣ ಪಡೆಯುಬೇಕು ಎನ್ನುವ ಕನಸು ಕೇವಲ ಒಂದು ಕನಸ್ಸಾಗಿಯೇ ಉಳಿದಿತ್ತು. ಆದರೆ, ಅಕ್ಷರ ಕಲಿಯಬೇಕು ಎಂಬ ಅವರ ಒಳಗಿನ ತುಡಿತ ಮಾತ್ರ ಎಂದಿಗೂ ಸತ್ತಿರಲಿಲ್ಲ.

ಕೇರಳ ರಾಜ್ಯ ಸಾಕ್ಷರತಾ ಮಿಷನ್ ಮೂಲಕ ಮರುಕಳಿಸಿದ ಆಶಾಭಾವನೆ

ಶಾಲೆಯನ್ನ ತೊರೆದ ಸುಮಾರು ಒಂದು ಶತಮಾನದ ನಂತರ, ಭಗೀರಥಿ ಅಮ್ಮನವರ ಜೀವನದಲ್ಲಿ ಅದೊಂದು ಸುವರ್ಣಾವಕಾಶ ಒದಗಿ ಬಂತು. ಅವರ ಶಿಕ್ಷಣದ ಕನಸಿಗೆ ಮತ್ತೆ ಜೀವ ಬಂದಿತು. ಹೌದು, ಕೇರಳ ರಾಜ್ಯ ಸಾಕ್ಷರತಾ ಮಿಷನ್ ವತಿಯಿಂದ ನಡೆಸಲಾಗುವ 4ನೇ ತರಗತಿಯ ಸಮಾನತೆಯ ಕಾರ್ಯಕ್ರಮದಲ್ಲಿ ಅವರು ತಮ್ಮ 105ನೇ ವಯಸ್ಸಿನಲ್ಲಿ ಅತ್ಯಂತ ಉತ್ಸಾಹದಿಂದ ನೋಂದಾಯಿಸಿಕೊಂಡರು.

ಶಾಲೆಯ ಮೆಟ್ಟಿಲು ಇಳಿದು ಸುಮಾರು ನೂರು ವರ್ಷಗಳೇ ಉರುಳಿದರೂ, ಮತ್ತೆ ಪುಸ್ತಕ ಹಿಡಿದು ಓದಲು ಪ್ರಾರಂಭಿಸಿದಾಗ ಅವರಲ್ಲಿದ್ದ ಉತ್ಸಾಹ, ಆಸಕ್ತಿ ಯುವಜನರನ್ನ ನಾಚಿಸುವಂತಿತ್ತು. ಕಲಿಯುವ ಮನಸ್ಸಿದ್ದರೆ ಸಾಕು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನ ಅವರು ಇಡೀ ಜಗತ್ತಿಗೆ ಎತ್ತಿ ತೋರಿಸಿದರು.

ಗಣಿತದಲ್ಲಿ ಶೇ.100 ಅಂಕ

ಭಗೀರಥಿ ಅಮ್ಮನವರ ವಯಸ್ಸನ್ನು ಪರಿಗಣಿಸಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಅವರಿಗೆ ಮನೆಯಿಂದಲೇ ಪರೀಕ್ಷೆ ಬರೆಯಲು ವಿಶೇಷ ಅವಕಾಶ ಮಾಡಿಕೊಟ್ಟಿದ್ದರು. ವಯೋಸಹಜ ಆಯಾಸದ ನಡುವೆಯೂ ಸತತ ಮೂರು ದಿನಗಳ ಕಾಲ ಅವರು ಅತ್ಯಂತ ಶ್ರದ್ಧೆಯಿಂದ ಮನೆಯಿಂದಲೇ ಪರೀಕ್ಷೆಯನ್ನ ಎದುರಿಸಿದರು.

ಪರೀಕ್ಷೆ ಫಲಿತಾಂಶ ಹೊರಬಿದ್ದಾಗ ಅಧಿಕಾರಿಗಳು ಸೇರಿದಂತೆ ಎಲ್ಲರೂ ಅಕ್ಷರಶಃ ಮೂಕವಿಸ್ಮಿತರಾದರು. ಒಟ್ಟು 275 ಅಂಕಗಳ ಪೈಕಿ ಅವರು ಬರೋಬ್ಬರಿ 205 ಅಂಕಗಳನ್ನ ಗಳಿಸಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಅದರಲ್ಲಿಯೂ ವಿಶೇಷವಾಗಿ, ಗಣಿತ ವಿಷಯದಲ್ಲಿ 75ಕ್ಕೆ 75 (ಶೇ.100) ಅಂಕಗಳನ್ನ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದರು.

ಈ ಸಾಧನೆಯ ಮೂಲಕ ಅವರು ಕೇರಳ ರಾಜ್ಯ ಸಾಕ್ಷರತಾ ಮಿಷನ್ ಇತಿಹಾಸದಲ್ಲಿಯೇ ಪರೀಕ್ಷೆ ಬರೆದು ತೇರ್ಗಡೆಯಾದ ಅತ್ಯಂತ ಹಿರಿಯ ವಿದ್ಯಾರ್ಥಿನಿ ಎಂಬ ಅಗ್ಗಳಿಕೆಗೆ ಭಾಜನರಾದರು. ಭಗೀರಥಿ ಅಮ್ಮನವರ ಈ ಅಸಾಧಾರಣ ಸಾಧನೆಯನ್ನ ಗುರುತಿಸಿ ಗೌರವಿಸಿದ ಕೇಂದ್ರ ಸರ್ಕಾರವು, ಅವರಿಗೆ ಮಹಿಳಾ ಸಾಧಕಿಯರಿಗೆ ನೀಡುವ ಪ್ರತಿಷ್ಠಿತ ನಾರಿ ಶಕ್ತಿ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+