Inspiring Story: ಸೂರಿಲ್ಲದೆ ಬೀದಿಗೆ ಬಿದ್ದಿದ್ದ ಬಾಲಕನ ತಿಂಗಳ ಆದಾಯ ಇಂದು ಬರೋಬ್ಬರಿ ₹90,000.. ಲಸ್ಸಿ ಮಾರೋನ ಸ್ಪೂರ್ತಿ ಕಥೆ

Inspiring Story: ಬಹುತೇಕ ಶ್ರೀಮಂತರ ಮಕ್ಕಳು ತಮ್ಮ ಪೋಷಕರ ಹಣದಲ್ಲಿ ಮೋಜು, ಮಸ್ತಿ ಮಾಡುವುದಲ್ಲದೆ, ಕೊನೆಗೆ ಜೀವನ ಹಾಳುಮಾಡಿಕೊಳ್ಳುತ್ತಿರುವ ಘಟನೆಗಳನ್ನು ನೋಡುತ್ತಲಿರುತ್ತೇವೆ. ಆದರೆ ಇಲ್ಲೊಬ್ಬ ಯುವಕ ತಂದೆಯನ್ನ ಕಳೆದುಕೊಂಡು ಉಳಿದುಕೊಳ್ಳಲು ಸೂರಿಲ್ಲದೆ ಬೀದಿಗೆ ಬಿದ್ದಿದ್ದರೂ ಛಲ ಬಿಡದೆ ತನ್ನ ಗುರಿಯನ್ನ ತಲುಪಿ ಇದೀಗ ದಾಖಲೆ ಆದಾಯ ಗಳಿಸಿ ಮಾದರಿಯಾಗಿದ್ದಾನೆ. ಈ ಕುರಿತ ಇಂಟರೆಸ್ಟಿಂಗ್ ಸ್ಟೋರಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಸತತ ಪರಿಶ್ರಮ ಮತ್ತು ಛಲವಿದ್ದರೆ ಯಶಸ್ಸು ಸುಲಭವಾಗಿ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ದೆಹಲಿಯ ಲಸ್ಸಿ ಮಾರಾಟಗಾರನೊಬ್ಬನ ಜೀವನವೇ ಸಾಕ್ಷಿ. ಕೇವಲ 11ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡು ಸ್ವಂತ ಮನೆ ಕೂಡ ಇಲ್ಲದೆ ರಸ್ತೆಗೆ ಬಿದ್ದಿದ್ದ ಈ ವ್ಯಕ್ತಿ, ಇಂದು ತಮ್ಮ ಕಠಿಣ ಶ್ರಮದಿಂದ ತಿಂಗಳಿಗೆ ₹80,000 ದಿಂದ 90,000 ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅಂದರೆ ಕೋಟಿ ಸಮೀಪ.. ಅಷ್ಟೇ ಅಲ್ಲದೆ ತಮ್ಮ ಕುಟುಂಬಕ್ಕಾಗಿ ಸ್ವಂತ ಊರಿನಲ್ಲಿ ಎರಡು ಅಂತಸ್ತಿನ ಮನೆಯನ್ನೂ ಸಹ ನಿರ್ಮಿಸಿ ಗಮನ ಸೆಳೆದಿದ್ದಾರೆ.

Inspiring Story Delhi Lassi Seller Earns 90 000 Monthly After Losing Father at 11 Huge Viral

ಚಿಕ್ಕ ವಯಸ್ಸಿನಲ್ಲೇ ಹೆಗಲೇರಿದ ಕುಟುಂಬದ ಜವಾಬ್ದಾರಿ

ಡಿಜಿಟಲ್ ಕ್ರಿಯೇಟರ್ ಉಪೇನ್ ವರ್ಮಾ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋವೊಂದರಲ್ಲಿ ಈ ಲಸ್ಸಿ ಮಾರಾಟಗಾರ ತಮ್ಮ ಬಾಲ್ಯದ ಕಹಿ ನೆನಪುಗಳನ್ನು ಮತ್ತು ಸಾಗಿಬಂದ ಹಾದಿಯನ್ನು ಬಗ್ಗೆ ಮನದಾಳದ ಮಾತನ್ನ ಬಿಚ್ಚಿಟ್ಟಿದ್ದಾರೆ. ಇದು ಇದೀಗ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಚಿಕ್ಕ ವಯಸ್ಸಿನಲ್ಲಿ ತಂದೆ ಕಳೆದುಕೊಂಡ ಯುವಕ

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅವರು, 'ನನ್ನ ತಂದೆ ಬದುಕಿದ್ದಾಗ ದಿನಕ್ಕೆ ಕೇವಲ 250 ರೂಪಾಯಿ ಗಳಿಸುತ್ತಿದ್ದರು. ಆದರೆ ನಾನು 11 ವರ್ಷದವನಿದ್ದಾಗ ಅವರು ಇದ್ದಕ್ಕಿದ್ದಂತೆ ಸಾವನ್ನಪ್ಪಿದರು. ಆ ಸಮಯದಲ್ಲಿ ನಮಗೆ ವಾಸಿಸಲು ಸ್ವಂತ ಮನೆಯೂ ಇರಲಿಲ್ಲ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕುಟುಂಬವನ್ನು ನಿಭಾಯಿಸುವ ಜವಾಬ್ದಾರಿ ನನ್ನ ಹೆಗಲೇರಿತು,' ಎಂದು ಕಣ್ಣೀರಿಟ್ಟಿದ್ದಾರೆ.

ಕುಟುಂಬಕ್ಕೆ ಆಸರೆಯಾಗಿ ನಿಂತ ಲಸ್ಸಿ ವ್ಯಾಪಾರಿ

ತಂದೆಯ ಅಗಲಿಕೆಯ ನಂತರ ಕುಟುಂಬಕ್ಕೆ ಆಸರೆಯಾದ ಅವರು, ಚಿಕ್ಕ ವಯಸ್ಸಿನಿಂದಲೇ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು. ಹಗಲಿರುಳು ಶ್ರಮದ ಫಲವಾಗಿ ತಮ್ಮ ಸಹೋದರ ಮತ್ತು ಸಹೋದರಿಯರ ಮದುವೆಯನ್ನು ನೆರವೇರಿಸಿದರು. ಬಳಿಕ ತಾವು ಕೂಡ ವಿವಾಹವಾಗಿ ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಲಸ್ಸಿ ವ್ಯಾಪಾರದಿಂದ ಬದಲಾಯ್ತು ಲಕ್

ಹಲವು ವರ್ಷಗಳ ಕಾಲ ಕಷ್ಟಪಟ್ಟ ನಂತರ ಅವರು ದೆಹಲಿಯಲ್ಲಿ ಲಸ್ಸಿ ಮಾರಾಟದ ವ್ಯಾಪಾರವನ್ನು ಪ್ರಾರಂಭಿಸಿದರು. ಇವರ ಲಸ್ಸಿಯ ರುಚಿ ಮತ್ತು ಉತ್ತಮ ಸೇವೆಗೆ ಗ್ರಾಹಕರು ಮರುಳಾದರು. ಈ ಹಿನ್ನೆಲೆಯಲ್ಲಿ ಇಂದು ಅವರ ವ್ಯಾಪಾರವು ಉತ್ತಮವಾಗಿ ನಡೆಯುತ್ತಿದ್ದು, ತಿಂಗಳಿಗೆ 80,000 ದಿಂದ 90,000 ರೂಪಾಯಿವರೆಗೆ ಲಾಭ ಗಳಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಮುಂದುವರೆದು ಮಾತನಾಡಿದ ಅವರು, 'ದೇವರ ಕೃಪೆಯಿಂದ ಮತ್ತು ನನ್ನ ಶ್ರಮದಿಂದ ಇಂದು ನಾನು ಉತ್ತಮವಾಗಿ ಸಂಪಾದಿಸುತ್ತಿದ್ದೇನೆ. ಈ ಆದಾಯದಿಂದಲೇ ನಾನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನನ್ನ ಕುಟುಂಬಕ್ಕಾಗಿ ಎರಡು ಅಂತಸ್ತಿನ ಸ್ವಂತ ಮನೆಯನ್ನು ಕಟ್ಟಿಸಿದ್ದೇನೆ,' ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಭರವಸೆ ಕಳೆದುಕೊಂಡವರಿಗೆ ಮಹತ್ವದ ಸಂದೇಶ

ಡಿಜಿಟಲ್ ಕ್ರಿಯೇಟರ್ ಉಪೇನ್ ವರ್ಮಾ ಅವರು, ನೀವು ಜೀವನದಲ್ಲಿ ಇನ್ಮುಂದೆ ಏನೂ ಒಳ್ಳೆಯದು ನಡೆಯುವುದಿಲ್ಲ ಎಂದು ನಿರಾಶೆಯಲ್ಲಿರುವ ಜನರಿಗೆ ನೀವು ಏನು ಹೇಳಲು ಬಯಸುತ್ತೀರಿ? ಎಂದು ಕೇಳಿದಾಗ, ಲಸ್ಸಿ ಮಾರಾಟಗಾರ ನೀಡಿದ ಉತ್ತರ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದರದ್ದೇ ಚರ್ಚೆ ಜೋರಾಗಿದೆ.

'ಜೀವನದಲ್ಲಿ ನಿರಾಶರಾಗಲು ಏನೂ ಇಲ್ಲ. ನಿರಂತರವಾಗಿ ಕಠಿಣ ಪರಿಶ್ರಮ ಹಾಕಿ. ನೀವು ಪರಿಶ್ರಮ ಪಡುವುದನ್ನು ನಿಲ್ಲಿಸದಿದ್ದರೆ, ದೇವರು ಖಂಡಿತವಾಗಿಯೂ ನಿಮ್ಮನ್ನು ಹಾರೈಸುತ್ತಾನೆ. ಒಂದಲ್ಲ ಒಂದು ದಿನ ಖಂಡಿತ ದೊಡ್ಡ ಮಟ್ಟಕ್ಕೆ ತಲುಪುತ್ತೀರಿ,' ಯುವ ಪೀಳಿಗೆಗೆ ಕಿವಿಮಾತು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಸುರಿಮಳೆ

ಇನ್ನೂ ಉಪೇನ್ ವರ್ಮಾ ಅವರು ಹಂಚಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಕರ ಮನ ಗೆದ್ದಿದೆ. ವಾಸಿಸಲು ಮನೆಯಿಲ್ಲದ ಸ್ಥಿತಿಯಿಂದ ಸ್ವಂತ ದುಡಿಮೆಯಲ್ಲಿ ಎರಡು ಅಂತಸ್ತಿನ ಮನೆ ಕಟ್ಟುವ ಹಂತಕ್ಕೆ ಬೆಳೆದ ಈ ವ್ಯಕ್ತಿಯ ಆತ್ಮವಿಶ್ವಾಸ ಮತ್ತು ಶ್ರಮಕ್ಕೆ ನೆಟ್ಟಿಗರು ಮೆಚ್ಚುಗೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಕಷ್ಟಗಳು ಬಂದಾಗ ಕುಗ್ಗದೆ ಮುನ್ನುಗ್ಗುವ ಪ್ರತಿಯೊಬ್ಬರಿಗೂ ಈ ಲಸ್ಸಿ ಮಾರಾಟಗಾರನ ಕಥೆ ದೊಡ್ಡ ಪ್ರೇರಣೆಯಾಗಿದೆ ಎಂದರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+