65ನೇ ವಯಸ್ಸಿನಲ್ಲಿ ಆಟೋ ಚಾಲನೆ ಮಾಡಿ 21,000 ರೂ. ಸಂಪಾದಿಸುತ್ತಿರುವ ಅಜ್ಜಿಯ ಸ್ಫೂರ್ತಿದಾಯಕ ಸ್ಟೋರಿ

Inspiration Story: ಸಾಮಾನ್ಯವಾಗಿ ವಯಸ್ಸಾದ ಬಳಿಕ ಮಕ್ಕಳ ಮೇಲೆ ಅವಲಂಬಿತರಾಗಬೇಕೆಂಬ ಸಾಂಪ್ರದಾಯಿಕ ಕಲ್ಪನೆಯನ್ನು ಇಲ್ಲೊಬ್ಬ ಮಹಿಳೆಯೊಬ್ಬರು ಸುಳ್ಳು ಮಾಡಿದ್ದಾರೆ. ಈ ಮೂಲಕ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಇವರ ಜೀವನ ಶೈಲಿಯ ರೋಚಕ ಸ್ಟೋರಿ ಇಲ್ಲಿದೆ ತಿಳಿಯಿರಿ.

ವಯಸ್ಸು 60 ದಾಟಿದರೆ ಸಾಕು ಜೀವನದ ಜಂಜಾಟಗಳಿಂದ ದೂರವಾಗಿ ವಿಶ್ರಾಂತಿ ಪಡೆಯಬೇಕು ಅಥವಾ ಕುಟುಂಬದವರ ಮೇಲೆ ಅವಲಂಬಿತರಾಗಬೇಕು ಎಂಬುದು ಸಾಮಾನ್ಯ ನಂಬಿಕೆಯಾಗಿದೆ. ಆದರೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾಡ್ ತಾಲ್ಲೂಕಿನ ನಂದಗಾಂವ್ ಗ್ರಾಮದ 65 ವರ್ಷದ ಮಂಗಳ ಆವಳೆ ಎಂಬ ಮಹಿಳೆ ಈ ಮಾತನ್ನು ಸಂಪೂರ್ಣವಾಗಿ ಸುಳ್ಳು ಮಾಡಿದ್ದಾರೆ.

Inspiration Story 65-Year-Old Woman Drives Auto Earns 700 Daily in Nandgaon Village Huge Viral

ಎಲ್ಲರೂ ಪ್ರೀತಿಯಿಂದ ಮಂಗಳ ಮಂಗಲಾ ಅಜ್ಜಿ ಎಂದು ಕರೆಯುವ ಇವರು, ಈ ಇಳಿವಯಸ್ಸಿನಲ್ಲೂ ಆಟೋ ರಿಕ್ಷಾ ಚಾಲಕಿಯಾಗಿ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಾ ಸಾವಿರಾರು ಜನರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಜೀವನದ ಹಾದಿ ಎಂದಿಗೂ ಸುಲಭವಾಗಿರಲಿಲ್ಲ. ಮಕ್ಕಳು ಚಿಕ್ಕವರಿದ್ದಾಗಲೇ ಪತಿಯನ್ನು ಕಳೆದುಕೊಂಡ ಇವರು, (ಮೂವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ) ಮಕ್ಕಳನ್ನು ಸಾಕಲು ತುಂಬಾ ಶ್ರಮಪಟ್ಟರು.

ದಿನಗೂಲಿ ಕೆಲಸ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಅವರು ಸಮಾಜದಲ್ಲಿ ನೆಲೆನಿಲ್ಲುವಂತೆ ಮಾಡಿದರು.
ಇನ್ನೂ ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಮಗ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (MSRTC) ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈಗಿನ ಕಾಲದಲ್ಲೂ ಇಂತಹ ಶ್ರಮಜೀವಿಗಳು ಇದ್ದಾರಾ ಎನ್ನುವುದಕ್ಕೆ ಇವರೇ ಪ್ರಮುಖ ಕಾರಣರಾಗಿದ್ದಾರೆ.

ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿರುವ ಮಂಗಳಾ ಅಜ್ಜಿ

ಮಕ್ಕಳು ಸ್ವಾವಲಂಬಿಗಳಾಗಿದ್ದರೂ, ಮಧುಮೇಹ (ಸಕ್ಕರೆ ಕಾಯಿಲೆ) ಮುಂತಾದ ವಯೋಸಹಜ ಆರೋಗ್ಯ ಸಮಸ್ಯೆಗಳಿದ್ದರೂ ಮಂಗಳಾ ಅಜ್ಜಿ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲು ಬಯಸಲಿಲ್ಲ. ಮಗನ ಸಂಸಾರದ ವೆಚ್ಚಕ್ಕೆ ನೆರವಾಗಲು ಮತ್ತು ತಮ್ಮ ವೈದ್ಯಕೀಯ ವೆಚ್ಚಗಳನ್ನು ತಾವೇ ಭರಿಸಿಕೊಳ್ಳಬೇಕು ಎಂಬ ಸ್ವಾಭಿಮಾನ ಅವರಲ್ಲಿತ್ತು.

ಆಟೋ ಓಡಿಸಲು ತೀರ್ಮಾನ ಮಾಡಿದ್ದೇಕೆ?

ಅಷ್ಟೇ ಅಲ್ಲದೆ ಮನೆಯಲ್ಲಿ ಸುಮ್ಮನೆ ಕುಳಿತರೆ ಖರ್ಚಿಗೆ ಹಣ ಸಾಕಾಗುವುದಿಲ್ಲ ಹಾಗೂ ಆರೋಗ್ಯಕ್ಕೂ ಒಳ್ಳೆಯದಲ್ಲ. ಮಗನಿಗೆ ಆಸರೆ ಆಗಬೇಕು, ನನ್ನ ಖರ್ಚನ್ನು ನಾನೇ ನೋಡ್ಕೋಬೇಕು. ಇದರಿಂದ ಆರೋಗ್ಯವೂ ಕೂಡ ಸುಧಾರಿಸುತ್ತದೆ ಎಂಬ ಉದ್ದೇಶದಿಂದ ಅವರು ಆಟೋ ಓಡಿಸಲು ತೀರ್ಮಾನ ಮಾಡಿದರು ಎಂದು ತಿಳಿದುಬಂದಿದೆ.

15 ದಿನಗಳಲ್ಲಿ ಆಟೋ ಓಡಿಸುವುದನ್ನ ಕಲಿತ ಅಜ್ಜಿ

ಚಾಲಕನಾಗಿರುವ ಮಗನ ಮಾರ್ಗದರ್ಶನದಲ್ಲೇ ಮಂಗಲಾ ಅಜ್ಜಿ ಕೇವಲ 15 ದಿನಗಳ ಅಂತರದಲ್ಲಿ ಅತ್ಯಂತ ಸುಲಭವಾಗಿ ಆಟೋ ಚಾಲನೆ ಮಾಡುವುದನ್ನ ಕಲಿತುಕೊಂಡರು. ಯುವಕರೇ ವಾಹನ ಚಾಲನೆ ಕಲಿಯಲು ಹೆದರುವ ಈ ಕಾಲದಲ್ಲಿ, 65ರ ಇಳಿವಯಸ್ಸಿನಲ್ಲಿ ಧೈರ್ಯವಾಗಿ ಸ್ಟೀರಿಂಗ್ ಹಿಡಿದು ರಸ್ತೆಗಿಳಿದರು.

ಪ್ರತಿನಿತ್ಯ ಮಂಗಳಾ ಅಜ್ಜಿಯ ಆದಾಯ ಎಷ್ಟು?

ಪ್ರಸ್ತುತ ಇವರು ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಕರಾಡ್ ಮತ್ತು ಉಂಡಾಳೆ ಮಾರ್ಗದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ. ನಿತ್ಯ ₹500ರಿಂದ 700 ರೂಪಾಯಿ ಗಳಿಸುವ ಇವರು, ಆ ಹಣದಿಂದ ತಮ್ಮ ಔಷಧಿಯ ವೆಚ್ಚಗಳನ್ನು ಭರಿಸುವುದಲ್ಲದೆ, ಮಗನ ಕುಟುಂಬಕ್ಕೂ ಆಸರೆ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ದಿನಕ್ಕೆ ಇವರು 700 ರೂ. ಗಳಿಸಿದರೆ, ತಿಂಗಳಿಗೆ ಬರೋಬ್ಬರಿ 21,000 ರೂಪಾಯಿ ಆದಂತಾಗಲಿದೆ.

ಇತರ ಆಟೋ ಚಾಲಕರಿಂದ ಅಪಾರ ಗೌರವ

ಆರಂಭದಲ್ಲಿ ಪರವಾನಗಿ ವಿಚಾರದಲ್ಲಿ ಕೆಲ ತಾಂತ್ರಿಕ ಸವಾಲುಗಳು ಎದುರಾದವು. ಆದರೂ ಸರ್ಕಾರದ ನಿಯಮಗಳಂತೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಧಿಕೃತ ಲೈಸೆನ್ಸ್ ಪಡೆದುಕೊಂಡರು. ಈಗ ರಸ್ತೆಯಲ್ಲಿ ಆಟೋ ಓಡಿಸುವಾಗ ಅವರಿಗೆ ಇತರ ಚಾಲಕರಿಂದ ಮತ್ತು ಸಾರ್ವಜನಿಕರಿಂದ ಅಪಾರ ಗೌರವ ಸಿಗುತ್ತಿದೆ. 'ಇತರ ಆಟೋ ಚಾಲಕರು ನನಗೆ ತುಂಬಾ ಗೌರವ ನೀಡುತ್ತಾರೆ. ಅಜ್ಜಿಗೆ ಮೊದಲು ದಾರಿ ಬಿಡಿ ಎಂದು ಪ್ರೀತಿಯಿಂದ ಸಹಕರಿಸುತ್ತಾರೆ,' ಎಂದು ಮಂಗಲಾ ಅವರು ಹೆಮ್ಮೆಯಿಂದ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ಈಗಿನ ಪೀಳಿಗೆಗೆ ಮತ್ತು ವಯಸ್ಸಾಗಿದೆ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬರಿಗೂ ಮಂಗಲಾ ಅಜ್ಜಿಯ ಜೀವನ ಒಂದು ಸ್ಫೂರ್ಯಿಯಾಗಿದೆ. ಶ್ರಮ, ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಇದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಇವರು ಜಗತ್ತಿಗೆ ಸಾಬೀತುಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+