ಕನ್ವಲೆಸೆಂಟ್ ಪ್ಲಾಸ್ಮಾ ಥೆರಪಿ ಉತ್ತಮ ಆಯ್ಕೆಯಲ್ಲ: ಐಸಿಎಂಆರ್
ನವದೆಹಲಿ, ನವೆಂಬರ್ 18: ಕನ್ವಲೆಸೆಂಟ್ ಪ್ಲಾಸ್ಮಾ ಥೆರಪಿ ಉತ್ತಮ ಆಯ್ಕೆಯಲ್ಲ ಎಂದು ಐಸಿಎಂಆರ್ ಹೇಳಿದೆ.
ಕೊವಿಡ್ 19 ರೋಗಿಗಳಲ್ಲಿ ಮರಣ ಕಡಿಮೆ ಮಾಡಲು ಪ್ಲಾಸ್ಮಾ ಥೆರಪಿ ಸಹಕಾರಿಯಲ್ಲ ಹಾಗಾಗಿ ಅದು ಸೂಕ್ತವಲ್ಲ ಎಂದು ಹೇಳಿದೆ.
ಇದೇ ಮಾದರಿಯ ಅಧ್ಯಯನಗಳು ಚೀನಾ ಹಾಗೂ ನೆದರ್ಲ್ಯಾಂಡ್ ಗಳಲ್ಲಿ ನಡೆದಿದ್ದು, ಮಹತ್ವದ ಸಂಗತಿಗಳು ಕಂಡುಬಂದಿಲ್ಲ ಆದ್ದರಿಂದ ಸಿಪಿಟಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದು ಸೂಕ್ತವಲ್ಲ ಎಂದು ಐಸಿಎಂಆರ್ ಹೇಳಿದೆ.

ಪ್ಲಾಸ್ಮಾ ಥೆರೆಪಿಯೆಡೆಗೆ ಎಸ್ಒಪಿಯನ್ನು ಬಿಡುಗಡೆ ಮಾಡಿರುವ ಐಸಿಎಂಆರ್ ಈ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಮಾ ಥೆರೆಪಿ ಮೊರೆ ಹೋಗುವುದು ಬೇಡ ಎಂದು ಹೇಳಿದೆ.
ಕನ್ವೆಲೆಸೆಂಟ್ ಪ್ಲಾಸ್ಮಾ ಕುರಿತಂತೆ ದೇಶದ 39 ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಟ್ರಯಲ್ ಗಳನ್ನು ಐಸಿಎಂ ಆರ್ ನಡೆಸಿದ್ದು, ಸಿಪಿಟಿಯಿಂದಾಗಿ ಕೋವಿಡ್-19 ಮರಣ ಪ್ರಮಾಣ ಸುಧಾರಣೆ ಕಾಣದೇ ಇರುವುದನ್ನು ಗಮನಿಸಿದ್ದು ಈ ಆದೇಶ ಹೊರಡಿಸಿದೆ.












Click it and Unblock the Notifications