ಟೇಕಾಫ್ ಆಗಬೇಕಿದ್ದ ವಿಮಾನದಿಂದ ಮಹಿಳೆ ಕೆಳಗಿಳಿಸಿದ ಇಂಡಿಗೋ ಏರ್‌ಲೈನ್ಸ್: ಆಗಿದ್ದೇನು?
ಎರಡು ರಾಜ್ಯಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಬಸ್ ಯೋಜನೆ ಜಾರಿಯಾದ ಬಳಿಕ ಬಸ್‌ಗಳಲ್ಲಿ ಆಸನಕ್ಕಾಗಿ ಜಗಳವ ಆಡಿದ್ದನ್ನು ನಾವು ನೋಡಿದ್ದೇವೆ. ಆದರೆ ಇಂತಹ ಘಟನೆ ವಿಮಾನದಲ್ಲೂ ನಡೆದಿದೆ. ಎನ್ನಲಾಗಿದೆ. ಈ ಕಾರಣದಿಂದಲೇ ಇನ್ನೇನು ಟೇಕಾಫ್ ಆಗಬೇಕಿದ್ದ ವಿಮಾನದಿಂದ ಸಿಬ್ಬಂದಿ ಮಹಿಳಾ ಪ್ರಯಾಣಿಕರೊಬ್ಬರನ್ನು ಕೆಳಗಿಳಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪುಣೆಯ ಲೋಹ್‌ಗಾಂವ್ ಏರ್‌ಪೋರ್ಟ್‌ನಲ್ಲಿ ಮಹಿಳೆಯೊಬ್ಬರು ವಿಮಾನದಲ್ಲಿ ಪ್ರಯಾಣಿಸಲು ಇಂಡಿಗೋ ವಿಮಾನ ಹತ್ತಿದ್ದಾರೆ. ಆದರೆ ಆ ಮಹಿಳೆಯ ವಿಮಾನದೊಳಗಿದ್ದ ಇಬ್ಬರು ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಸಿಐಎಸ್‌ಎಫ್ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹೀಗಾಗಿ ಆ ಮಹಿಳೆಯನ್ನು ವಿಮಾನದಿಂದ ಕೆಳಗೆ ಇಳಿಸಲಾಗಿದೆ.

ಈ ಘಟನೆ ಬಳಿಕ ಏರ್‌ಪೋರ್ಟ್ ಪೊಲೀಸರು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಪುಣೆಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ (6E 5261) ಆಗಸ್ಟ್ 17 ರ ಶನಿವಾರ ಬೆಳಿಗ್ಗೆ 7.45 ಹೊತ್ತಿಗೆ ಪ್ರಯಾಣಿಕರ ಬೋರ್ಡಿಂಗ್ ನಡೆಯುತ್ತಿತ್ತು. ಈ ವೇಳೆ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನದಲ್ಲಿ ಆಗಿದ್ದೇನು?
ಮಹಿಳೆ ವಿಮಾನ ಹತ್ತಿ ನೋಡಿದರೆ ತಮಗೆ ನಿಗದಿಪಡಿಸಿದ ಸೀಟಿನಲ್ಲಿ ಇಬ್ಬರು ಕುಳಿತಿದ್ದಾರೆ. ಆಗ ಆಸನಕ್ಕಾಗಿ ಸಹಪ್ರಯಾಣಿಕರ ಜೊತೆಗೆ ಮಹಿಳೆ ಜಗಳವಾಡಿದ್ದಾರೆ. ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಇತರ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಜಗಳದ ಮಧ್ಯಪ್ರವೇಶ ಮಾಡಿದ್ದಾರೆ. ನಂತರ ಸಿಐಎಸ್‌ಎಫ್ ಕಾನ್‌ಸ್ಟೆಬಲ್‌ಗಳಾದ ಪ್ರಿಯಾಂಕಾ ರೆಡ್ಡಿ ಮತ್ತು ಸೋನಿಕಾ ಪಾಲ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಗಿದೆ.

ಸಿಬ್ಬಂದಿ ತಿಳಿ ಹೇಳಿದರು ಕೇಳದ ಮಹಿಳೆಯ ಜಗಳ ವಾಗ್ವಾದಕ್ಕೆ ತಿರುಗಿದೆ. ಇದೇ ವೇಳೆ ಮಹಿಳೆ ಕಾನ್‌ಸ್ಟೆಬಲ್ ರೆಡ್ಡಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಸಿಬ್ಬಂದಿ ಕೈ ಕಚ್ಚಿದ್ದಾರೆ. ಕೂಡಲೇ ಪರಿಸ್ಥಿತಿ ನಿಯಂತ್ರಿಸಿ ಮಹಿಳೆಯನ್ನು ಹಾಗೂ ಅವರ ಪತಿಯನ್ನು ವಿಮಾನದಿಂದ ಕೆಳಗೆ ಇಳಿಸಿ, ಅನುಚಿತವಾಗಿ ವರ್ತಿಸಿದ್ದಕ್ಕೆ ಏರ್‌ಪೋರ್ಟ್ ಪೊಲೀಸರಿಗೆ ನೀಡಿದ್ದಾರೆ.
ಹಿಂದೆಯೂ ಇದೇ ಮಹಿಳೆಯಿಂದ ಅನುಚಿತ ವರ್ತನೆ
ಈ ಹಿಂದೆಯೂ ಹೀಗೆ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರ ಜೊತೆಗೆ ಇದೇ ಮಹಿಳೆಯು ಲಕ್ನೋ-ಮುಂಬೈ ವಿಮಾನ ನಿಲ್ದಾಣದಲ್ಲಿ ಗಲಾಟೆ ಮಾಡಿಕೊಂಡಿದ್ದರು. ಆಗಲೂ ಆಕಾಶ ಏರ್ ವಿಮಾನದಿಂದ ಇವರನ್ನು ಇದೇ ರೀತಿ ಕೆಳಗಿಳಿಸಲಾಗಿತ್ತು ಎಂದು ವರದಿ ಆಗಿದೆ.
ಏರ್‌ಪೋರ್ಟ್ ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 504 ರ ಅಡಿಯಲ್ಲಿ ಈ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications