India & Russia: ರಷ್ಯಾ ತೈಲ ಆಮದು ಕಡಿಮೆ ಮಾಡುತ್ತಿರುವ ಭಾರತ?
ಭಾರತ ಈಗ ರಷ್ಯಾ ದೇಶಕ್ಕೆ ಇಡೀ ಜಗತ್ತಿನಲ್ಲಿ ಇರುವ ಏಕೈಕ ನಂಬಿಕಸ್ಥ ಗೆಳೆಯ ಅಂತಾ ಹೇಳಬಹುದು. ಯಾಕೆ ಅಂದ್ರೆ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿದ ನಂತರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಹೋಗಿದೆ. ರಷ್ಯಾ ವಿರುದ್ಧ ಅಮೆರಿಕ ಸೇರಿದಂತೆ, ಇಡೀ ಪಾಶ್ಚಿಮಾತ್ಯ ದೇಶಗಳ ಒಕ್ಕೂಟ ತಿರುಗಿ ಬಿದ್ದು ಹಲವು ನಿಷೇಧ ಹೇರಿದೆ. ಇಂತಹ ಕಠಿಣಾತಿ ಕಠಿಣ ಸಮಯದಲ್ಲಿ ಕೂಡ ರಷ್ಯಾ ಬೆನ್ನಿಗೆ ನಿಂತಿದ್ದು ಭಾರತ!
ಹೌದು, ಭಾರತ ಈಗಾಗಲೇ ಹಲವು ರೀತಿಯಲ್ಲಿ ರಷ್ಯಾಗೆ ನೆರವಾಗಿ ನಿಂತಿದೆ. ಅದರಲ್ಲಿಯೂ ಉಕ್ರೇನ್ ವಿರುದ್ಧ ಯುದ್ಧ ಶುರುವಾದ ನಂತರ ರಷ್ಯಾ ದೇಶದಿಂದ ತೈಲ ಅಂದ್ರೆ, ಪೆಟ್ರೋಲ್ ಮತ್ತು ಡೀಸೆಲ್ ಸೇರಿ ಗ್ಯಾಸೋಲಿನ್ ಉತ್ಪನ್ನಗಳ ಖರೀದಿ ಅಥವಾ ಆಮದು ಮೇಲೆ ನಿರ್ಬಂಧ ಹೇರಿದ್ದವು ಪಾಶ್ಚಿಮಾತ್ಯ ದೇಶಗಳು. ಹೀಗಿದ್ದಾಗ, ರಷ್ಯಾ ಕಡೆಯಿಂದ ಡಿಸ್ಕೌಂಟ್ ಮೂಲಕ ಭಾರತ ಕಚ್ಚಾ ತೈಲ ಖರೀದಿ ಮಾಡುತ್ತಿತ್ತು. ಆದರೆ ದಿಢೀರ್ ಈ ಪ್ರಕ್ರಿಯೆಯಲ್ಲಿ ಈಗ ಭಾರಿ ಕುಸಿತ ಕಂಡಿದೆಯಂತೆ!

ರಷ್ಯಾದಿಂದ ತೈಲ ಆಮದು ಕುಸಿತ?
ಅಂದಹಾಗೆ, ರಷ್ಯಾ ಒಂದು ತೈಲ ಸಮೃದ್ಧ ದೇಶವಾಗಿದ್ದು. ರಷ್ಯಾ ದೇಶದಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ತೈಲ ಸಂಪತ್ತು ಇದೆ. ಹೀಗಾಗಿಯೇ ರಷ್ಯಾ ಕೂಡ ತೈಲ ಸಂಪತ್ತು ನಂಬಿಯೇ ಜೀವನ ನಡೆಸುತ್ತದೆ. ಆದರೆ ಯಾವಾಗ ರಷ್ಯಾ ದೇಶ ಉಕ್ರೇನ್ ವಿರುದ್ಧ ಯುದ್ಧ ಶುರು ಮಾಡಿ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ವಿರುದ್ಧ ತೊಡೆತಟ್ಟಿ ನಿಂತಿತ್ತೋ, ಅಲ್ಲಿಂದಲೇ ನೋಡಿ ದೊಡ್ಡ ಸಮಸ್ಯೆ ಶುರುವಾಗಿತ್ತು. ಹೀಗೆ ಸಮಸ್ಯೆ ಶುರುವಾಗಿ, ರಷ್ಯಾ ತೈಲ ಖರೀದಿ ಮಾಡುವ ದೇಶಗಳೇ ಇಲ್ಲವಾಗಿ ಹೋದವು. ಆಗ ಭಾರತವೇ ರಷ್ಯಾಗೆ ನೆರವಾಗಿತ್ತು.
2022ರ ನಂತರ ಭರ್ಜರಿ ಒಪ್ಪಂದ!
ರಷ್ಯಾ ಮೂಲಕ ಭಾರತ 2022ರ ನಂತರ ಭಾರಿ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಖರೀದಿ ಮಾಡಿತ್ತು. ಈ ಮೂಲಕ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮಾಡುವಾಗ ಭಾರತ ಕೈಗೊಂಡ ಈ ನಿರ್ಧಾರ ದೊಡ್ಡ ಮಟ್ಟದಲ್ಲಿ ರಷ್ಯಾಗೆ ಲಾಭ ನೀಡಿತ್ತು. ಆದರೆ ಈಗ ದಿಢೀರ್ ರಷ್ಯಾ & ಭಾರತದ ನಡುವೆ ತೈಲ ವ್ಯವಹಾರ ಕಡಿಮೆ ಆಗಿದೆಯಂತೆ, ಅದು ಯಾಕೆ? ಏನು ಕಾರಣ? ಮುಂದೆ ಓದಿ.
ಭಾರತದ ಮೂಲಕ ರಷ್ಯಾಗೆ ಸಹಾಯ!
ಯುರೋಪ್ ದೇಶಗಳು ಬದುಕುತ್ತಿರುವುದು ರಷ್ಯಾ ತೈಲವನ್ನು ನಂಬಿಕೊಂಡು. ಯಾಕಂದ್ರೆ ರಷ್ಯಾ ಮೂಲಕ ಬರುವ, ಪೆಟ್ರೋಲ್ & ಡೀಸೆಲ್ ಸೇರಿದಂತೆ ಗ್ಯಾಸ್ ಇನ್ನಿತರ ಪೆಟ್ರೋಲಿಯಂ ಉತ್ಪನ್ನಗಳು ಯುರೋಪ್ ದೇಶಗಳಿಗೆ ಅತ್ಯಗತ್ಯ. ಆದರೆ ಯಾವಾಗ ರಷ್ಯಾ ಮೂಲಕ ಇದನ್ನ ಖರೀದಿ ಮಾಡಲು ಬ್ರೇಕ್ ಬಿತ್ತೋ ಅಲ್ಲಿಂದ ಶುರುವಾಗಿತ್ತು ಹೊಸ ತಿಕ್ಕಾಟ.
ಇದೇ ಸಮಯಕ್ಕೆ ಭಾರತ ಹೆಚ್ಚು ಪ್ರಮಾಣದಲ್ಲಿ ಡಿಸ್ಕೌಂಟ್ ಮೂಲಕ ರಷ್ಯಾ ತೈಲ ಖರೀದಿ ಮಾಡಿತ್ತು. ಆದ್ರೆ ಈಗ ರಷ್ಯಾ ತನ್ನ ಕಚ್ಚಾ ತೈಲಕ್ಕೆ ನೀಡುತ್ತಿದ್ದ ಡಿಸ್ಕೌಂಟ್ ಅಂದ್ರೆ ರಿಯಾಯಿತಿ ಕಡಿಮೆ ಮಾಡಿದೆ ಎನ್ನಲಾಗಿದೆ. ಈ ಕಾರಣಕ್ಕೆ ಸುಮಾರು ಶೇಕಡಾ 55 ರಷ್ಟು ತೈಲ ಆಮದು ಈಗ ಕುಸಿದಿದೆ ಎನ್ನಲಾಗಿದ್ದು, ಇಷ್ಟಾದರೂ ಈಗಲೂ ಭಾರತವೇ ರಷ್ಯಾ ಮೂಲಕ ಕಚ್ಚಾತೈಲ ಖರೀದಿ ಮಾಡುತ್ತಿರುವ ನಂಬರ್ 1 ದೇಶವಾಗಿದೆ!












Click it and Unblock the Notifications