India Passport: ಭಾರತದ ಪಾಸ್ಪೋರ್ಟ್ ರ‍್ಯಾಂಕಿಂಗ್ ದಿಢೀರ್ 85ನೇ ಸ್ಥಾನಕ್ಕೆ ಕುಸಿತ, ಏನಿದರ ಪರಿಣಾಮ?
ಭಾರತ ವಿಶ್ವಗುರು ಆಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ಬಹುದೊಡ್ಡ ಶಕ್ತಿಯಾಗಿ ಹೊರಹೊಮ್ಮಿ ಆರ್ಥಿಕವಾಗಿ ಕೂಡ ಬಲಿಷ್ಠವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಜಾಗತಿಕ ಮನ್ನಣೆ ಕೂಡ ಸಿಗುತ್ತಿದೆ ಎನ್ನುವಾಗಲೇ ಬೇಸರದ ಸಂಗತಿ ಹೊರಬಿದ್ದಿದೆ. ಜಾಗತಿಕ ಪಾಸ್ಪೋರ್ಟ್ ರ‍್ಯಾಂಕಿಂಗ್ ವಿಚಾರ ಇದೀಗ ತಲ್ಲಣ ಸೃಷ್ಟಿ ಮಾಡಿದ್ದು, ಭಾರತದ ಪಾಸ್ಪೋರ್ಟ್ ರ‍್ಯಾಂಕಿಂಗ್ ದಿಢೀರ್ 85ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಹಾಗಾದರೆ ಏನಿದರ ಪರಿಣಾಮ?
ಹೌದು, ಇದೀಗ ಹೆನ್ಲಿ & ಪಾರ್ಟ್ನರ್ಸ್ ಸಂಸ್ಥೆ ಪ್ರಕಟಿಸಿದ 2025ನೇ ಸಾಲಿನ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಭಾರತದ ಪಾಸ್ಪೋರ್ಟ್ ರ‍್ಯಾಂಕಿಂಗ್ ದಿಢೀರ್ ಕುಸಿತ ಕಂಡಿದೆ. ಪ್ರಪಂಚದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್ ಪಟ್ಟಿಯಲ್ಲಿ ಭಾರತವು ಜುಲೈ ತಿಂಗಳಲ್ಲಿ 77ನೇ ಸ್ಥಾನದಿಂದ ಕುಸಿದು ಈಗ 199 ದೇಶಗಳ ಪೈಕಿ 85ನೇ ಸ್ಥಾನದಲ್ಲಿ ನಿಂತಿದೆ. ಈ ಮೂಲಕ ಭಾರತ ಜಾಗತಿಕ ಶಕ್ತಿಯಾಗಿ & ಆರ್ಥಿಕ ಶಕ್ತಿಯಾಗೂ ಹೊರ ಹೊಮ್ಮುವ ಸಮಯದಲ್ಲೇ ಬೇಸರದ ಸಂಗತಿ ಒಂದು ಹೊರಬಿದ್ದಂತೆ ಆಗಿದೆ. ಇದು ತ್ರೈಮಾಸಿಕ ವರದಿ ಆಗಿದ್ದು, ಭಾರತ ಈ ಹಿಂದೆ 77ನೇ ಸ್ಥಾನದಲ್ಲಿ ಇತ್ತು. ಇದೀಗ 85ನೇ ಸ್ಥಾನಕ್ಕೆ ಕುಸಿದಿದ್ದು, ಈ ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನವಿದೆ? ಮುಂದೆ ಓದಿ.

ಹೀನಾಯ ಪರಿಸ್ಥಿತಿ ತಲುಪಿದ ಪಾಕಿಸ್ತಾನ!
ಭಾರತದ ಪ್ರಜೆಗಳು ಈಗಿನ ವಾತಾವರಣದಲ್ಲಿ ಒಟ್ಟು 57 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು. ಕಳೆದ ವರ್ಷ ಈ ಪಟ್ಟಿಯಲ್ಲಿ ಭಾರತ 80ನೇ ಸ್ಥಾನದಲ್ಲಿದ್ದು, 62 ದೇಶಗಳಿಗೆ ವೀಸಾ ರಹಿತ ಪ್ರವೇಶಕ್ಕೂ ಅವಕಾಶ ಇತ್ತು. ಇನ್ನು ಭಾರತದ ಶತ್ರು ದೇಶ ಎಂದೇ ಗುರುತಿಸಿಕೊಂಡಿರುವ ಪಾಪಿ ಪಾಕಿಸ್ತಾನ ಈಗ 103ನೇ ಸ್ಥಾನಕ್ಕೆ ಕುಸಿದು ಬಿದ್ದಿದ್ದು, ಹಾಗೇ ಬಾಂಗ್ಲಾದೇಶ 100ನೇ ಸ್ಥಾನದಲ್ಲಿ ಇದೆ. ಈ ಮೂಲಕ ಎರಡು ದೇಶಗಳು ಜಾಗತಿಕ ಮಟ್ಟದಲ್ಲಿ ಭಾರಿ ಕುಸಿತ ಕಂಡಿವೆ. ಮತ್ತೊಂದು ಕಡೆ ಭಾರತ ಈ ಸ್ಥಾನದಲ್ಲಿ ಹಿನ್ನಡೆ ಕಂಡಿದ್ದು, ಮತ್ತೆ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ.
20 ವರ್ಷ ಇತಿಹಾಸದಲ್ಲಿ ಅಮೆರಿಕಗೆ ಆಘಾತ!
ಹೆನ್ಲಿ & ಪಾರ್ಟ್ನರ್ಸ್ ಸಂಸ್ಥೆ ಪ್ರಕಟಿಸಿದ 2025ನೇ ಸಾಲಿನ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಸಿಂಗಪೂರ್ ನಂಬರ್ 1 ಆಗಿದ್ದು, ಈ ದೇಶದ ಜನ 193 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ ಮಾಡಬಹುದು. ಇನ್ನು ದಕ್ಷಿಣ ಕೊರಿಯಾ ವೀಸಾ ರಹಿತವಾಗಿ ಒಟ್ಟು 190 ದೇಶಗಳಿಗೆ ಪ್ರಯಾಣ ಮಾಡಬಹುದು. ಜಪಾನ್ 189 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣ ಮಾಡಬಹುದು. ಈ ಮೂಲಕ ಸಿಂಗಪೂರ್, ದಕ್ಷಿಣ ಕೊರಿಯಾ & ಜಪಾನ್ ದೇಶಗಳು ಮೊದಲ 3 ಸ್ಥಾನ ಆಕ್ರಮಿಸಿಕೊಂಡಿವೆ. ಆದರೆ ಈ ಬಾರಿ ಮತ್ತೊಂದು ಸಂಚಲನ ಸೃಷ್ಟಿಸುವ ಸುದ್ದಿ ಏನೆಂದರೆ, ಹೆನ್ಲಿ ಸೂಚ್ಯಂಕದ 20 ವರ್ಷದ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಅಮೆರಿಕ ಟಾಪ್ 10 ಪಾಸ್‌ಪೋರ್ಟ್ ಪಟ್ಟಿಯಿಂದ ಹೊರಬಿದ್ದು ಹೀನಾಯ ಮುಖಭಂಗ ಅನುಭವಿಸಿದೆ.












Click it and Unblock the Notifications