Indian Railways: ವಂದೇ ಭಾರತ್, ಶತಾಬ್ದಿ, ತೇಜಸ್, ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ಭಾರತದಲ್ಲಿ ಅತೀ ಹೆಚ್ಚು ಹಣ ಗಳಿಸುವ ರೈಲು
ಭಾರತದಲ್ಲಿ ಹಲವಾರು ಎಕ್ಸ್‌ಪ್ರೆಸ್ ರೈಲುಗಳು ಪ್ರಯಾಣ ಮಾಡುತ್ತವೆ. ಅವುಗಳಲ್ಲಿ ವಂದೇ ಭಾರತ್, ಶತಾಬ್ದಿ ಎಕ್ಸ್‌ಪ್ರೆಸ್, ತೇಜಸ್ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್ ಪ್ರಮುಖ ರೈಲುಗಳು. ಈ ರೈಲುಗಳು ಅತೀ ವೇಗವಾಗಿ ಪ್ರಯಾಣಿಸಿ ಬಹುಬೇಗ ಗಮ್ಯ ಸ್ಥಳಗಳಿಗೆ ತಲುಪುತ್ತವೆ. ಹೀಗಾಗಿ ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ಈ ರೈಲುಗಳ ಟಿಕೆಟ್ ದರ ಕೊಂಚ ಹೆಚ್ಚು. ಆದರೆ ಈ ಎಲ್ಲಾ ರೈಲುಗಳಿಗಿಂತ ಹೆಚ್ಚು ಗಳಿಸುವ ರೈಲು ಒಂದಿದೆ. ಆ ರೈಲು ಯಾವುದು? ಅದರಿಂದ ಬರುವ ಆದಾಯ ಎಷ್ಟು? ಎಲ್ಲಿಂದ ಎಲ್ಲಿಗೆ ಸಂಚಾರ ಮಾಡುತ್ತದೆ? ಯಾವ ರೈಲುಗಳು ಎಷ್ಟು ಗಳಿಸುತ್ತವೆ? ಇದೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ..
ಸಾಮಾನ್ಯವಾಗಿ ಜನರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅತೀ ಹೆಚ್ಚು ಗಳಿಸುತ್ತದೆ ಎಂಬ ನಂಬಿಕೆ ಇದೆ. ಆದರೆ ದೇಶದ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳಿಗಿಂತ ಹೆಚ್ಚು ಗಳಿಸುವ ರೈಲು ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್. ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ (12417/12418) ರೈಲು ಪ್ರಯಾಗ್‌ರಾಜ್ ಮತ್ತು ನವದೆಹಲಿ ನಡುವೆ ಕಾರ್ಯನಿರ್ವಹಿಸುತ್ತದೆ. ಇದು ಪ್ರೀಮಿಯಂ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಮೀರಿಸುವ ಮೂಲಕ ಹಬ್ಬದ ಋತುವಿನಲ್ಲಿ ಹೆಚ್ಚು ಆದಾಯ ತಂದು ಕೊಡುವ ರೈಲು ಎಂದು ಪರಿಗಣಿಸಲಾಗಿದೆ. ನವೆಂಬರ್‌ನಲ್ಲಿ ಹೆಚ್ಚು ಗಳಿಸುವ ಮೂಲಕ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ದಾಖಲೆ ಸೃಷ್ಟಿಸಿದೆ. ಹಾಗಾದರೆ ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ನವೆಂಬರ್ ತಿಂಗಳ ಗಳಿಕೆ ಎಷ್ಟಿದೆ ಎಂದು ತಿಳಿಯೋಣ.

ನವೆಂಬರ್‌ನಲ್ಲಿ ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ಆದಾಯ ಹೀಗಿದೆ...
ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ರೈಲು ನವೆಂಬರ್ ತಿಂಗಳ ಗಳಿಕೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್, ಶತಾಬ್ದಿ ಎಕ್ಸ್‌ಪ್ರೆಸ್, ತೇಜಸ್ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳನ್ನು ಹಿಂದಿಕ್ಕಿದೆ. 2024ರ ನವೆಂಬರ್ ಒಂದೇ ತಿಂಗಳಿನಲ್ಲಿ ಈ ರೈಲು ಬರೋಬ್ಬರಿ 6.6 ಕೋಟಿ ರೂಪಾಯಿ ಗಳಿಸಿದೆ.
ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ಸಂಚಾರದ ಸಮಯ
ಈ ರೈಲು ವಾರದಲ್ಲಿ ಏಳು ದಿನಗಳು ಕಾರ್ಯನಿರ್ವಹಿಸುತ್ತದೆ. ನವದೆಹಲಿಯಿಂದ ಬೆಳಗ್ಗೆ 10:10ಕ್ಕೆ ಹೊರಡುತ್ತದೆ. ಮರುದಿನ ಬೆಳಗ್ಗೆ 7:00ಕ್ಕೆ ಪ್ರಯಾಗರಾಜ್ ಜಂಕ್ಷನ್‌ಗೆ ತಲುಪುತ್ತದೆ. ಈ ರೈಲು ಪ್ರಯಾಗರಾಜ್‌ನಿಂದ ನವದೆಹಲಿಗೆ ಹೋಗುವಾಗ 43,388 ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಹಿಂದಿರುಗುವ ಪ್ರಯಾಣದಲ್ಲಿ 47,040 ಪ್ರಯಾಣಿಕರನ್ನು ಸಾಗಿಸುತ್ತದೆ. ಇದು ಹಬ್ಬದ ಅವಧಿಯಲ್ಲಿ ಸಾಮಾನ್ಯ ಮತ್ತು ವಿಐಪಿ ಪ್ರಯಾಣಿಕರಿಗೆ ಉತ್ತಮ ಆಯ್ಕೆಯಾಗಿದ್ದು ಹೆಚ್ಚು ಜನ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಹಾಗಾದರೆ ಯಾವ ರೈಲುಗಳ ಗಳಿಕೆ ಎಷ್ಟಿದೆ ಎಂದು ತಿಳಿಯೋಣ.
ನವೆಂಬರ್‌ನಲ್ಲಿ ಇತರ ರೈಲುಗಳ ಆದಾಯ ಹೀಗಿದೆ...
ಪ್ರಯಾಗ್ರಾಜ್ ಹಮ್ಸಾಫರ್ ಎಕ್ಸ್ಪ್ರೆಸ್ (12275/12276)
ಆದಾಯ: 6.6 ಕೋಟಿ ರೂ.
ಪ್ರಯಾಣಿಕರು: 55,481
ಆನಂದ್ ವಿಹಾರ್ ಟರ್ಮಿನಲ್ ಹಮ್ಸಾಫರ್ ಎಕ್ಸ್ಪ್ರೆಸ್ (22437/22438):
ಆದಾಯ: 3.7 ಕೋಟಿ ರೂ.
ಪ್ರಯಾಣಿಕರು: 41,797
ವಂದೇ ಭಾರತ್ ಎಕ್ಸ್‌ಪ್ರೆಸ್ (22435/22436):
ಆದಾಯ: 2.2 ಕೋಟಿ ರೂ.
ಪ್ರಯಾಣಿಕರು: 16,899 (ನವದೆಹಲಿಯಿಂದ 8,098 ಮತ್ತು ಹಿಂದಿರುಗುವ ಪ್ರಯಾಣದಲ್ಲಿ 8,801)
ವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್:
ಆದಾಯ: 2.4 ಕೋಟಿ ರೂ.
ಪ್ರಯಾಣಿಕರು: 16,823 (ವಾರಣಾಸಿಯಿಂದ 7,902 ಮತ್ತು ಹಿಂದಿರುಗುವ ಪ್ರಯಾಣದಲ್ಲಿ 8,921). ಹಬ್ಬದ ಋತುವಿನಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಎಂದಿಗಿಂತ ದುಪ್ಪಟ್ಟಾಗಿರುತ್ತದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications