Hyperloop Train: ಭಾರತದ ಮೊದಲ ಹೈಪರ್‌ಲೂಪ್ ರೈಲು ಯೋಜನೆ ಅಪ್ಡೇಟ್: ಗಂಟೆಗೆ 1100 kmph ವೇಗ

ನವದೆಹಲಿ, ಡಿಸೆಂಬರ್ 06: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ 'ಹೈಪರ್‌ಲೂಪ್ ರೈಲು' ಯೋಜನೆಗೆ ಮತ್ತಷ್ಟು ವೇಗ ಸಿಕ್ಕಿದೆ. ವೇಗದ ಸಾರಿಗೆ ಆವಿಷ್ಕಾರದಲ್ಲಿ ಈ ಹೈಪರ್‌ಲೂಪ್ ರೈಲು ಸದ್ದು ಮಾಡುತ್ತಿದೆ. ಈ ರೈಲು ಸೇವೆ ಕನಸು ನನಸಾಗುವ ದಾರಿಗೆ ಸಮೀಪಿಸಿರುವ ಭಾರತವು ಗುರುವಾರ (ಡಿಸೆಂಬರ್ 05) 410 ಮೀಟರ್ ಉದ್ದದ ಹೈಪರ್‌ಲೂಪ್ ಟೆಸ್ಟ್ ಟ್ರ್ಯಾಕ್ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ಅಧಿಕೃತ ಹಂಚಿಕೊಂಡಿದ್ದಾರೆ. ದೇಶದ ಮೊದಲ ಹೈಪರ್ ಲೂಪ್ ರೈಲಿನ ಟೆಸ್ಟ್ ಟ್ರ್ಯಾಕ್ ಪೂರ್ಣಗೊಂಡಿದೆ. ಯಶಸ್ವಿಯಾಗಿ ಈ ಟ್ರ್ಯಾಕ್‌ ಅನ್ನು ಅಭವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

India s First Hyperloop Train Project Updates 410 Meter Test Track Completed Ashwini Vaishnav

ಕೇಂದ್ರ ರೈಲ್ವೆ ಇಲಾಖೆ ನೇತೃತ್ವದಲ್ಲಿ ಐಐಟಿ ಮದ್ರಾಸ್‌ನ ಐಐಟಿಯ 'ಆವಿಷ್ಕಾರ್ ಹೈಪರ್‌ಲೂಪ್' ಹಾಗೂ Tur Tur ಎಂಬ ವಿನೂತನ ಸ್ಟಾರ್ಟ್‌ ಅಪ್ ಸಂಸ್ಥೆಗಳು ದೇಶಕ್ಕೆ ಮೊದಲ ಆವಿಷ್ಕಾರಿ ಹೈಪರ್‌ಲೂಪ್ ರೈಲು ಸೇವೆ ಪರಿಚಯಿಸುವ ಜವಾಬ್ದಾರಿ ನಿರ್ವಹಿಸುತ್ತಿವೆ.

1100 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ

ಭಾರತದಲ್ಲಿ ಮೊದಲ ಹೈಪರ್‌ಲೂಪ್ ರೈಲು ಸೇವೆಯನ್ನು ಪುಣೆಯಿಂದ ಮುಂಬೈಗೆ ಕಲ್ಪಿಸಲು ರೈಲ್ವೆ ಇಲಾಖೆ ಉತ್ಸುಕವಾಗಿದೆ. ಈ ರೈಲು ಪ್ರತಿ ಗಂಟೆಗೆ 1100 ಕಿಲೋ ಮೀಟರ್‌ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ. IIT ಮದ್ರಾಸ್‌ನ ಆವಿಷ್ಕರ್ ಹೈಪರ್‌ಲೂಪ್ ತಂಡ ವರ್ಷಗಳಿಂದ ಸತತವಾಗಿ ಈ ರೈಲಿನ ವಿವಿಧ ಹಂತಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಗೊಳಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ.

ಟ್ವಿಟ್ಟರ್ ಎಕ್ಸ್ ಮಾಲೀಕ ಮತ್ತು ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ 2012 ರಲ್ಲಿ ಹೈಪರ್‌ಲೂಪ್ ತಂತ್ರಜ್ಞಾನ ಕುರಿತ ಸಂಶೋಧನೆ ಕುರಿತು ಘೋಷಣೆ ಮಾಡಿದಾಗಿನಿಂದ ಆವಿಷ್ಕಾರಗಳು ಹೆಚ್ಚಾಗತೊಡಗಿವೆ. ಎರಡು ಸಿಟಿಗಳ ಮಧ್ಯದ ಸಾರಿಗೆ ಸೇವೆ ಇದಾಗಿದ್ದು, ಒಮ್ಮೆ ಈ ರೈಲು ಸೇವೆ ಅನುಷ್ಠಾನಕ್ಕೆ ಬಂದರೆ, ಮುಂಬೈ-ಪುಣೆ 150 ಕಿಲೋ ಮೀಟರ್ ದೂರವನ್ನು ಕೇವಲ 25 ನಿಮಿಷಗಳಲ್ಲಿ ತಲುಪಬಹುದಾಗಿದೆ.

ಹೈಪರ್‌ಲೂಪ್ IIT ಮದ್ರಾಸ್‌ನ ಚೆನ್ನೈ ಸಂಶೋಧನಾ ತಂಡದಲ್ಲಿ ಸುಮಾರು 76 ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದು, ಅವರೆಲ್ಲರೂ ಅವಿಷ್ಕರ್ ಹೈಪರ್‌ಲೂಪ್‌ ಆವಿಷ್ಕಾರ್, ಟ್ರ್ಯಾಕ್ ವಿನ್ಯಾಸದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಹೈಪರ್‌ಲೂಪ್ ಸಂಚಾರ ಹೇಗೆ?

ಹೆಸರೇ ಹೇಳುವಂತೆ ಹೈಪರ್‌ಲೂಪ್ ಎಂಬ ಹಳಿಗಳನ್ನು ನಿರ್ವಾತ ಕೊಳವೆಯಲ್ಲಿ ನಿರ್ಮಿಸಲಾಗಿರುತ್ತದೆ. ಈ ರೈಲು ವಿದ್ಯುತ್ ಚಾಲಿತವಾಗಿ ಭಾರೀ ಗಾಳಿಯ ಒತ್ತಡದಿಂದ ಚಲಿಸುತ್ತದೆ. ಗಾಳಿಯ ಒತ್ತಡಕ್ಕೆ ರೈಲಿನ ಯಂತ್ರಗಳು ವೇಗವಾಗಿ ಚಲಿಸುತ್ತವೆ. ಇಂತಹ ರೈಲು ಸೇವೆ ದುಬೈ- ಅಬುಧಾಬಿ ಮಧ್ಯೆ ಸಂಚರಿಸುತ್ತದೆ. ಇದು ವಿಶ್ವದ ಮೊದಲ ಹೈಪರ್‌ಲೂಪ್ ರೈಲ್ವೆ ಯೋಜನೆ ಆಗಿದೆ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+