ಭಾರತದ ಮೊದಲ ಬಿರಿಯಾನಿ ಎಟಿಎಂ ಚೆನ್ನೈನಲ್ಲಿ ಆರಂಭ

ಭಾರತದ ಮೊದಲ ಬಿರಿಯಾನಿ ಎಟಿಎಂ ಅನ್ನು ತಮಿಳುನಾಡಿನ ಚೆನ್ನೈನಲ್ಲಿ ಆರಂಭಿಸಲಾಗಿದೆ. ಇದೇ ಮಾದರಿಯಲ್ಲಿ 12 ಎಟಿಎಂ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಚೆನ್ನೈ, ಮಾರ್ಚ್ 12; ಎಟಿಎಂನಲ್ಲಿ ಹಣ ಬರುತ್ತದೆ, ಬೆಂಗಳೂರಿನಲ್ಲಿ ಇಡ್ಲಿ ಎಟಿಎಂ ಆರಂಭವಾಗಿದೆ. ಈಗ ಇದೇ ಮಾದರಿಯಲ್ಲಿ ಬಿರಿಯಾನಿ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಚೆನ್ನೈನಲ್ಲಿ ಬಿರಿಯಾನಿ ಎಟಿಎಂ ಪ್ರಾರಂಭ ಮಾಡಲಾಗಿದೆ. ಇದು ಭಾರತದ ಮೊದಲ ಬಿರಿಯಾನಿ ಎಟಿಎಂ ಆಗಿದೆ. ಈ ಎಟಿಎಂ ಸುದ್ದಿ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

ಇನ್‌ಸ್ಟಾಗ್ರಾಂನಲ್ಲಿ ಒಬ್ಬರು ಈ ಬಿರಿಯಾನಿ ಎಟಿಎಂ ಬಗ್ಗೆ ಮಾಹಿತಿ, ವಿಡಿಯೋ ಹಂಚಿಕೊಂಡಿದ್ದಾರೆ. ಚೆನ್ನೈ ಮೂಲದ ಸ್ಟಾರ್ಟ್‌ ಅಪ್‌ವೊಂದು ಚೆನ್ನೈನ ಕೊಳತ್ತೂರಿನಲ್ಲಿ ಈ ಬಿರಿಯಾನಿ ಎಟಿಎಂ ಆರಂಭ ಮಾಡಿದೆ. ಮುಂದಿನ ದಿನಗಳಲ್ಲಿ ನಗರದ 12 ಕಡೆ ಇದೇ ಮಾದರಿಯ ಎಟಿಎಂ ಪ್ರಾರಂಭ ಮಾಡಲು ಕಂಪನಿ ಉದ್ದೇಶಿಸಿದೆ.

Indias First ATM Biryani Now Opened At Chennai

ಒಬ್ಬರು ಬಿರಿಯಾನಿಗಾಗಿ ಆಯ್ಕೆಗಳನ್ನು ನೋಡುವುದರಿಂದ ಈ ವಿಡಿಯೋ ಆರಂಭವಾಗುತ್ತದೆ. ಬಿರಿಯಾನಿಗೆ ನಿಗದಿಯಾಗಿರುವ ದರವನ್ನು ಆತ ಪಾವತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಬಿಸಿ-ಬಿಸಿ ಬಿರಿಯಾನಿ ಆತನ ಕೈ ಸೇರುತ್ತದೆ. ಈ ಅಪರೂಪದ ಬಿರಿಯಾನಿ ಎಟಿಎಂ ಫೋಟೋ, ವಿಡಿಯೋಗಳು ಈಗ ಎಲ್ಲೆಡೆ ಹರಿದಾಡುತ್ತಿವೆ.

ಸದ್ಯ ಈ ಎಟಿಎಂನಲ್ಲ ಮಟನ್ ಬಿರಿಯಾನಿ ಬೆಲೆ 345 ರೂ. ಆಗಿದೆ. ನೀವು ಬಿರಿಯಾನಿಗೆ ಆರ್ಡರ್‌ ಮಾಡಿ, ಹಣ ಪಾವತಿ ಮಾಡಿದ ಬಳಿಕ ಎಷ್ಟು ಹೊತ್ತು ಕಾಯಬೇಕು ಎಂದು ಅದು ತೋರಿಸುತ್ತದೆ. ಕೆಲವೇ ಹೊತ್ತು ಕಾದ ಬಳಿಕ ಬಿರಿಯಾನಿ ಪ್ಯಾಕೆಟ್ ನಿಮ್ಮ ಕೈ ಸೇರಲಿದೆ. ನೀಟಾಗಿ ಪ್ಯಾಕ್ ಮಾಡಲಾದ ಬಿರಿಯಾನಿ ಹಿಡಿದು ವ್ಯಕ್ತಿಯೊಬ್ಬರು ಹೋಗುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ.

biryani

ವಿಡಿಯೋ ವೈರಲ್; 5 ದಿನಗಳ ಹಿಂದೆ ಪೋಸ್ಟ್ ಮಾಡಿರುವ ವಿಡಿಯೋವನ್ನು 60 ಸಾವಿರಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಮುನ್ನೂರಕ್ಕು ಅಧಿಕ ಜನರು ಕಮೆಂಟ್ ಮಾಡಿದ್ದಾರೆ. ಕೆಲವರು ಬಿರಿಯಾನಿ ಬೆಲೆ ಹೆಚ್ಚಾಯಿತು ಎಂದು ಹೇಳಿದರೆ, ಇನ್ನೂ ಕೆಲವರು ಬಿಸಿ-ಬಿಸಿ ಬಿರಿಯಾನಿ ಕ್ಷಣ ಮಾತ್ರದಲ್ಲಿ ಹೇಗೆ ಲಭ್ಯವಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಬಿವಿಕೆ ಹೆಸರಿನ ಬಿರಿಯಾನಿ ಸದ್ಯ ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಭಾರತದಲ್ಲಿ ಈ ಮಾದರಿಯ ಮೊದಲ ಎಟಿಎಂ ಇದಾಗಿದೆ.

Bai Veetu Kalyanam (BVK Biryani) ದೇಶದ ಮಾನವ ರಹಿತ ಮೊದಲ ಬಿರಿಯಾನಿ ಎಟಿಎಂ ಆಗಿದೆ. 32 ಇಂಚಿನ ಟಚ್ ಸ್ಕ್ರೀನ್ ಡಿಸ್‌ ಪ್ಲೇಯನ್ನು ನೀವು ಎಟಿಎಂನಲ್ಲಿ ನೋಡಬಹುದಾಗಿದೆ. ಈ ಎಟಿಎಂನ ಸ್ಕ್ರೀನ್‌ನಲ್ಲಿ ಹಲವು ಮಾದರಿಯ ಬಿರಿಯಾನಿ ಆಯ್ಕೆಯನ್ನು ನೋಡಬಹುದಾಗಿದೆ. ಕ್ಯೂರ್ ಕೋಡ್ ಸ್ಕ್ಯಾನ್ ಅಥವ ಡಿಜಿಟಲ್ ಮಾದರಿಯ ಮೂಲಕ ಪೇಮೆಂಟ್ ಮಾಡಲು ಸಹ ವ್ಯವಸ್ಥೆ ಮಾಡಲಾಗಿದೆ.

BVK Biryani ದಕ್ಷಿಣ ಭಾರತದಲ್ಲಿ ಈಗಾಗಲೇ ಆಹಾರ ಉದ್ಯಮದಲ್ಲಿ ತೊಡಗಿದೆ. ಮೆಟ್ರೋ ಪಾಲಿಟಿನ್ ನಗರಗಳಲ್ಲಿ 1 ಗಂಟೆಯಲ್ಲಿ ಬಿರಿಯಾನಿ ಆರ್ಡರ್‌ ತಲುಪಿಸುವ ಗುರಿಯೊಂದಿಗೆ ಕಂಪನಿ ಕೆಲಸ ಮಾಡುತ್ತಿದೆ. ಇದೇ ಮಾದರಿಯ 12 ಎಟಿಎಂ ಆರಂಭಿಸಲು ಕಂಪನಿ ಮುಂದಾಗಿದೆ. ಅಲ್ಲದೇ ಭಾರತದ ಎಲ್ಲಾ ನಗರದಲ್ಲಿಯೂ ಉದ್ಯಮಿ ವಿಸ್ತರಣೆ ಮಾಡಲು ಸಂಸ್ಥೆ ತೀರ್ಮಾನಿಸಿದೆ.

ಬಿರಿಯಾನಿಗಾಗಿ ಮಾಂಸವನ್ನು ಬೇರೆ ಅಂಗಡಿಗಳಿಂದ ಕೊಳ್ಳುವುದಿಲ್ಲ. ಅಲ್ಲದೇ ಮಸಾಲೆಯನ್ನು ಸಹ ಮನೆಯಲ್ಲೇ ತಯಾರು ಮಾಡುವುದು ಈ ಬಿರಿಯಾನಿ ಸರಬರಾಜು ಕಂಪನಿ ವಿಶೇಷತೆಯಾಗಿದೆ. ಮೊದಲೇ ಮಾಂಸ ಸಂಗ್ರಹ ಮಾಡುವುದಿಲ್ಲ, ಮೊದಲೇ ಮಸಾಲೆ ತಯಾರು ಮಾಡುವುದಿಲ್ಲ ಎಂದು ಕಂಪನಿ ಹೇಳಿದೆ. BVK Biryani ವೆಬ್‌ಸೈಟ್‌ನಲ್ಲಿನ ಮಾಹಿತಿಯಂತೆ ಕಂಪನಿ ಇಡೀ ಚೆನ್ನೈನಲ್ಲಿ 60 ನಿಮಿಷದಲ್ಲಿ ಬಿರಿಯಾನಿ ಸರಬರಾಜು ಮಾಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+