India Pakistan War: 32 ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಬಂದ್, ಪ್ರಯಾಣಿಕರಿಗೆ ಸಲಹೆಗಳು
ನವದೆಹಲಿ, ಮೇ 10: ಭಾರತ-ಪಾಕಿಸ್ತಾನ ಯುದ್ಧ ಮುಂದುವರಿದಿದೆ. ಪಾಕಿಸ್ತಾನ ಗಡಿಯಲ್ಲಿ ನಾಗರಿಕರ ಮೇಲೆ ದಾಳಿಗೆ ಮುಂದಾಗಿ ವಿಫಲಗೊಂಡಿದೆ. ಇದರ ಬೆನ್ನಲ್ಲೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಶನಿವಾರ ಮುಂಜಾನೆ ಸಾಮಾನ್ಯ ಕಾರ್ಯಾಚರಣೆ ಪುನರಾರಂಭಿಸಿದೆ. ಪ್ರಯಾಣಿಕರ ಭದ್ರತಾ ದೃಷ್ಟಿಯಿಂದ ಒಂದಷ್ಟು ಸಲಹೆ, ಸೂಚನೆಗಳನ್ನು ನೀಡಲಾಗಿದೆ.
ಸದ್ಯ ದೆಹಲಿ ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಸಾಮಾನ್ಯವಾಗಿವೆ. ಆಗಾಗ ವಾಯುಯಾನ ಪ್ರದೇಶಗಳಲ್ಲಿ ಸ್ಥಿತಿಗತಿ ಬದಲಾಗುತ್ತಿವೆ. ನಾಗರಿಕ ವಿಮಾನಯಾನ ಭದ್ರತಾ ತಂಡದ ನಿರ್ದೇಶನಗಳ ಪ್ರಕಾರ ಅಗತ್ಯ ಭದ್ರತೆ ಒದಗಿಸಲಾಗಿದೆ. ಹೀಗಿದ್ದರೂ ಸಹಿತ ಕೆಲವು ವಿಮಾನ ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರಲಿದೆ. ಭದ್ರತಾ ಪರಿಶೀಲನೆಯಲ್ಲಿ ಚೆಕ್‌ಪಾಯಿಂಟ್ ಪ್ರಕ್ರಿಯೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳಲಾಗುತ್ತಿದೆ.

32 ವಿಮಾನ ನಿಲ್ದಾಣ ಸ್ಥಗಿತ
ಭದ್ರತೆ, ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಮತ್ತು ವಾಯುಯಾನ ಅಧಿಕಾರಿಗಳು ದೇಶದ ಉತ್ತರ ಮತ್ತು ಪಶ್ಚಿಮ ಭಾಗದ 32 ವಿಮಾನ ನಿಲ್ದಾಣಗಳ ನಾಗರಿಕ ವಿಮಾನ ಕಾರ್ಯಾಚರಣೆ ತಾತ್ಕಾಲಿಕವಾಗಿ ಬಂದ್ ಮಾಡುವುದಾಗಿ ಘೋಷಿಸಿ ನೋಟಿಸ್ ನೀಡಿದೆ. ಈ ಮಾಹಿತಿಯನ್ನು ವಾಯುಪಡೆ ಗಮನಕ್ಕೆ ತರಲಾಗಿದೆ. ಏರ್‌ಪೋರ್ಟ್ ಬಂದ್ ಮೇ 14ರವರೆಗೆ ಮುಂದುವರಿಯಲಿದೆ.
ಬಂದ್ ಆದ ಏರ್‌ಪೋರ್ಟ್‌ಗಳ ಪಟ್ಟಿ
ಬಟಿಂಡಾ, ಭುಜ್, ಬಿಕಾನೇರ್, ಅಧಂಪುರ್, ಅಂಬಾಲ, ಅಮೃತಸರ, ಅವಂತಿಪುರ, ಹಿಂದನ್, ಜೈಸಲ್ಮೇರ್, ಜಮ್ಮು, ಜಾಮ್‌ನಗರ, ಜೋಧ್‌ಪುರ, ಚಂಡೀಗಢ, ಹಲ್ವಾರಾ, ಕೇಶೋಡ್, ಕಿಶನ್‌ಗಢ, ಕುಲ್ಲು ಮನಾಲಿ (ಭುಂತರ್), ಲೇಹ್, ಲುಧಿಯಾನ, ಮುಂದ್ರಾ, ಕಾಂಡ್ಲಾ, ಕಾಂಗ್ರಾ (ಗಗ್ಗಲ್), ನಲಿಯಾ, ಪೋರ್ಬಂದರ್, ರಾಜ್‌ಕೋಟ್ (ಹಿರಾಸರ್), ಸರ್ಸಾವಾ, ಶಿಮ್ಲಾ, ಶ್ರೀನಗರ, ಪಠಾಣ್‌ಕೋಟ್, ಪಟಿಯಾಲ, ಥೋಯಿಸೆ ಹಾಗೂ ಉತ್ತರಲೈ ವಿಮಾನ ನಿಲ್ದಾಣಗಳು ಕಾರ್ಯಾಚರಣೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಿವೆ.
ಭಾರತದ ಪಾಕಿಸ್ತಾನದ ಗಡಿ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಈ ಮಧ್ಯೆ ಉತ್ತರದ ಬಾರಾಮುಲ್ಲಾದಿಂದ ದಕ್ಷಿಣದ ಭುಜ್‌ವರೆಗೆ, ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆ (ಎಲ್‌ಒಸಿ) ಎರಡರಲ್ಲೂ 26 ಸ್ಥಳಗಳಲ್ಲಿ ಡ್ರೋನ್‌ಗಳು ಪತ್ತೆಯಾಗಿವೆ. ಪಾಕ್ ನಾಗರಿಕರನ್ನು ಗುರಿಯಾಗಿಸಿ, ಏರ್‌ಪೋರ್ಟ್ ಗುರಿಯಾಗಿಸಿ ದಾಳಿ ಯತ್ನದ ಮಾಹಿತಿಯನ್ನು ರಕ್ಷಣಾ ಮೂಲಗಳು ಶುಕ್ರವಾರವೇ ತಿಳಿಸಿದ್ದವು.
ಪಾಕ್ ಡ್ರೋನ್‌ಗಳು ಶಸ್ತ್ರಸಜ್ಜಿತವಾಗಿದ್ದು, ಗಡಿ ಜನರಿಗೆ ಆತಂಕ ಉಂಟು ಮಾಡಿವೆ. ಭಾರತ ಕೇವಲ ಉಗ್ರರನ್ನಷ್ಟೇ ಟಾರ್ಗೆಟ್ ಮಾಡಿದ್ದರೂ ಸಹಿ ಪಾಕ್ ಮಿಲಿಟರಿ ಭಾರತೀಯ ನಾಗರಿಕರನ್ನು ಗುರಿಯಾಗಿಸಿದ್ದು, ಜಾಗತಿಕ ಖಂಡನೆಗೆ ಕಾರಣವಾಗಿದೆ. ಪಾಕ್ ಡ್ರೋನಗಳನ್ನು ಭಾರತವು ''ಬಾರಾಮುಲ್ಲಾ, ಶ್ರೀನಗರ, ಅವಂತಿಪೋರಾ, ಭುಜ್, ನಗ್ರೋಟಾ, ಜಮ್ಮು, ಫಿರೋಜ್‌ಪುರ, ಪಠಾಣ್‌ಕೋಟ್, ಫಜಿಲ್ಕಾ, ಜೈಸಲ್ಮೇರ್, ಬಾರ್ಮರ್, ಲಾಲ್‌ಗಢ್ ಜಟ್ಟಾ, ಕುರ್ಬೆಟ್ ಮತ್ತು ಲಖಿ ನಾಲಾ ಸೇರಿದಂತೆ ಡ್ರೋನ್‌ಗಳು ಪತ್ತೆ ಮಾಡಿದೆ. ಬಹುತೇಕ ಎಲ್ಲವುಗಳನ್ನು ನಿಷ್ಕ್ರಿಯಗೊಳಿಸಿ, ಪಾಕ್ ದಾಳಿ ವಿಫಲಗೊಳಿಸುವಲ್ಲಿ ಭಾರತ ಯಶಸ್ವಿಯಾಗಿದೆ.












Click it and Unblock the Notifications