Bullet train: ಸಿದ್ದವಾಯ್ತು ಭಾರತದ ಮೊದಲ ಅತ್ಯಾಧುನಿಕ ಬುಲೆಟ್ ಟ್ರೈನ್ ನಿಲ್ದಾಣ: ಎಲ್ಲಿ? ವಿಶೇಷತೆಗಳೇನು? ಮಾಹಿತಿ-ವಿವರ
ಬೆಂಗಳೂರು ಡಿಸೆಂಬರ್ 08: ಭಾರತದಲ್ಲಿ ರೈಲ್ವೆ ಜಾಲ ವಿಸ್ತರಣೆ ಆಗುವ ಜೊತೆಗೆ ಅತ್ಯಾಧುನಿಕ ವಿಶೇಷತೆ, ತಂತ್ರಜ್ಞಾನದ ರೈಲುಗಳು ಸಾರ್ವಜನಿಕ ಸೇವೆ ಲಭ್ಯವಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಬುಲೆಟ್ ಟ್ರೈನ್ ಓಡಿಸಲು ಸಜ್ಜಾಗಿರುವ ಭಾರತ ಸರ್ಕಾರ ಅಮದಾಬಾದ್‌ನಲ್ಲಿ ಆಧುನಿಕ ವಾಸ್ತುಶಿಲ್ಪದ ಸುಸಜ್ಜಿ ಬುಲೆಟ್ ರೈಲು ನಿಲ್ದಾಣ ನಿರ್ಮಿಸಿದೆ. ಇದರ ವಿಶೇಷತೆಗಳೇನು, ಎಲ್ಲಿದೆ, ಕಾಮಗಾರಿಯ ಎಲ್ಲ ಮಾಹಿತಿ ಇಲ್ಲಿದೆ.
ಅಹಮದಾಬಾದ್‌ನ ಸಬರಮತಿ ಮಲ್ಟಿಮೋಡಲ್ ಸಾರಿಗೆ ಕೇಂದ್ರದಲ್ಲಿ ನಿರ್ಮಿಸಲಾದ ಭಾರತದ ಮೊದಲ ಬುಲೆಟ್ ರೈಲು ಟರ್ಮಿನಲ್‌ನ ಅದ್ಭುತ ವೀಡಿಯೊವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಈ ಬುಲೆಟ್ ರೈಲು ನಿಲ್ದಾಣವು ಸಬರಮತಿಯಲ್ಲಿ ಕಂಗೊಳಿಸುತ್ತಿದೆ. ಪ್ರಯಾಣಿಕರಿಗೆ ಅತ್ಯುತ್ತಮ ಸೌಕರ್ಯ ಕಲ್ಪಿಸುವ ಜೊತೆಗೆ ಹೊಸ ರೀತಿಯ ಪ್ರಯಾಣದ ಅನುಭವ ಒದಗಿಸಲು ನೆರವಾಗುವಂತೆ ಟರ್ಮಿನಲ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಕಾರ್ಯಾಚರಣೆ ಮಾರ್ಗ ಯಾವುದು?
ಬುಲೆಟ್ ರೈಲು ಅಹಮದಾಬಾದ್ ಮತ್ತು ಮುಂಬೈ ನಡುವೆ ಕಾರ್ಯ ನಿರ್ವಹಣೆ ಮಾಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಜಪಾನ್ ಸರ್ಕಾರದಿಂದ ತಾಂತ್ರಿಕ ಮತ್ತು ಆರ್ಥಿಕ ಬೆಂಬಲ ಜೊತೆಗೆ ಕೇಂದ್ರ ಸರ್ಕಾರ ಈ ಬುಲೆಟ್ ರೈಲು ಕಾರ್ಯಾಚರಣೆ, ರೈಲು ನಿಲ್ದಾಣ ಅಭಿವೃದ್ಧಿ ಮಾಡುತ್ತಿದೆ. ಇದು ಭಾರತ ಮೊಲದು ಬುಲೆಟ್ ರೈಲಿನ ಟರ್ಮಿನಲ್ ಆಗಿದೆ ಎಂದು ಸಚಿವರು ಬರೆದುಕೊಂಡಿದ್ದಾರೆ.

ಬುಲೆಟ್ ಟ್ರೈನ್ ವಿಡಿಯೋ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆ
43 ಸೆಕೆಂಡುಗಳ ಈ ವಿಡಿಯೋ 642,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮತ್ತು 24,000 ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರದಲ್ಲದೇ 4.4 ಸಾವಿರ ಕಾಮೆಂಟುಗಳು ಈ ವಿಡಿಯೋಗೆ ಬಂದಿವೆ. ನೆಟ್ಟಿಗರು ಈ ಟರ್ಮಿನಲ್ ಅನ್ನು ಗ್ಲೋರಿಯಸ್ ಎಂದು ಕರೆದಿದ್ದಾರೆ. ಅತ್ಯಂತ ಸುಂದರವಾಗಿದೆ ಎಂದು ಬಣ್ಣಿಸಿದ್ದಾರೆ.
Terminal for India's first bullet train!
— Ashwini Vaishnaw (@AshwiniVaishnaw) December 7, 2023
📍Sabarmati multimodal transport hub, Ahmedabad pic.twitter.com/HGeoBETz9x
ದೇಶಕ್ಕೆ ಬುಲೆಟ್ ಟ್ರೈನ್/ನಿಲ್ದಾಣ ಹೆಮ್ಮೆ
ಆಧುನಿಕತೆ ಜೊತೆಗೆ ದೇಶದ ಪರಂಪರೆ ಸಂಕೇತ ರೂಪದಲ್ಲಿ ಅದ್ಭುತವಾಗಿ ಬುಲೆಟ್ ಟ್ರೈನ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಇದು ಭಾರತ ದೇಶವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ ಎಂದು ನೆಟ್ಟಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ಮಾರ್ಟ್ ನಗರ, ಮೆಟ್ರೋ ಸಂಪರ್ಕ, ನದಿ ಮುಂಭಾಗ ಬುಲೆಟ್ ರೈಲು, ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ, ಸರ್ದಾರ್ ಸರೋವರ, ಬೃಹತ್ ಪ್ರತಿಮೆಯಂತವುಗಳ ದೇಶವನ್ನು ಮತ್ತಷ್ಟು ಎತ್ತರ ಕೊಂಡೊಯ್ಯುತ್ತಿವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ 2026ರಲ್ಲಿ ಭಾರತದ ಮೊದಲ ಬುಲೆಟ್ ರೈಲನ್ನು ಓಡಿಸಲು ನಿರ್ಧರಿಸಿದೆ. ಈ ರೈಲು ಗುಜರಾತ್‌ನ ಬಿಲಿಮೋರಾ ಮತ್ತು ಸೂರತ್ ಮಧ್ಯೆದ 50 ಕಿ.ಮೀ ಉದ್ದದ ಹಳಿ ನಿರ್ಮಾಣ ಕಾಮಗಾರಿ 2026 ರ ಆಗಸ್ಟ್‌ನಲ್ಲಿ ಪೂಣ್ಗೊಳ್ಳಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ವಯಾಡಕ್ಸ್ ಕೆಲಸಗಳು ಚುರುಕು
ಮುಂದಿನ ದಿನಗಳಲ್ಲಿ 100 ಕಿಮೀ ಮತ್ತು 230 ಕಿಮೀ ವಯಾಡಕ್ಟ್‌ಗಳನ್ನು ಪೂರ್ಣಗೊಳಿಸಲಾಗುವುದು. ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಕಾರಿಡಾರ್ ಆಗಿ ತೆಗೆದುಕೊಳ್ಳಲಾಗಿದೆ. ಸದ್ಯ ಅಹಮದಾಬಾದ್ ಸಬರಮತಿಯಲ್ಲಿ ಬುಲೆಟ್ ರೈಲು ಟರ್ಮಿನಲ್ ಸಿದ್ಧವಾಗಿದೆ. ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ನವೆಂಬರ್ 2021 ರಲ್ಲಿ ಕೆಲಸ ಪ್ರಾರಂಭವಾದಾಗಿನಿಂದ ಮುಂಬೈ-ಅಹಮದಾಬಾದ್ ಕಾರಿಡಾರ್ ಸ್ಥಿರ ಪ್ರಗತಿಯನ್ನು ಸಾಧಿಸುತ್ತಿದೆ. ಬುಲೆಟ್ ಟ್ರೈನ್ ಯೋಜನೆಗೆ ಸೆಪ್ಟೆಂಬರ್ 2017 ರಲ್ಲಿ ಅಹಮದಾಬಾದ್‌ನಲ್ಲಿ ಅಡಿಪಾಯ ಬಿದ್ದಿದೆ.
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್‌ಗೆ ಅಂದಾಜು ₹ 1.08 ಲಕ್ಷ ಕೋಟಿ ವೆಚ್ಚವಾಗಿದ್ದು, ಇದರಲ್ಲಿ ಕೇಂದ್ರವು ₹ 10,000 ಕೋಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications