ರೈಲಿನಲ್ಲಿ ಪ್ರಯಾಣಿಕರಿಗೆ ಧಮ್ಕಿ ಹಾಕುವುದಲ್ಲದೆ, ಟಿಕೆಟ್‌ ರಹಿತ ಪ್ರಯಾಣಿಸಿದ 400ಕ್ಕೂ ಅಧಿಕ ಪೊಲೀಸರು-ಮುಂದೇನಾಯ್ತು?

Indian Railways: ನಿಯಮದ ಪ್ರಕಾರ ರೈಲುಗಳಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣ ಮಾಡುವುದು ಅಪರಾಧ. ಈಗಾಗಲೇ ನಿಯಮ ಬ್ರೇಕ್‌ ಮಾಡಿದವರ ವಿರುದ್ಧ ರೈಲ್ವೆ ಅಧಿಕಾರಿಗಳು ದಂಡ ವಿಧಿಸುವ ಮೂಲಕ ಸೂಕ್ತ ಕ್ರಮ ಜರುಗಿಸುತ್ತಾ ಬಂದಿದ್ದಾರೆ. ಆದರೆ, ಇದೀಗ ವಿಚಿತ್ರ ಎಂಬಂತೆ ಸಾಮಾಜವನ್ನು ತಿದ್ದುವಂತಹ ಪೊಲೀಸರೇ ಟಿಕೆಟ್‌ ರಹಿತ ಪ್ರಯಾಣ ಮಾಡಿ ತಗ್ಲಾಕೊಂಡಿರುವ ಘಟನೆ ನಡೆದಿದಿದೆ.

ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ 400ಕ್ಕೂ ಹೆಚ್ಚು ಪೊಲೀಸರಿಗೆ ದಂಡ ವಿಧಿಸಲಾಗಿದೆ. ವಿಶೇಷ ಎಂದರೆ, ಒಂದೇ ತಿಂಗಳಿನಲ್ಲಿ ಈ ದಂಡ ವಿಧಿಸಲಾಗಿದೆ. ಗಾಜಿಯಾಬಾದ್‌-ಕಾನ್ಪುರ್‌ ನಡುವೆ ಸಂಚಾರ ಮಾಡುತ್ತಿದ್ದ ಹಲವು ರೈಲುಗಳಲ್ಲಿ ಇತ್ತೀಚೆಗೆ ಟಿಕೆಟ್‌ ಇಲ್ಲದೆ, ಪೊಲೀಸರು ಪ್ರಯಾಣ ಮಾಡುತ್ತಿರುವುದು ಹೆಚ್ಚುತ್ತಾ ಬಂದಿತ್ತಯ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಯಾಗರಾಜ್‌ ವಿಭಾಗದ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ.

Indian Railways Over 400 Police Officials Fined for Traveling Without Tickets on Train

ರೈಲ್ವೆ ಸಂಚಾರ ದಳದ ಅಧಿಕಾರಿಗಳು ವಿಶೇಷ ಕಾರ್ಯಾಚರಣೆಗೆ ಮುಂದಾಗಿದ್ದು, ಒಂದೇ ತಿಂಗಳಿನಲ್ಲಿ ಟಿಕೆಟ್‌ ಇಲ್ಲದೆ ರೈಲಿನಲ್ಲಿ 400ಕ್ಕೂ ಅಧಿಕ ಪೊಲೀಸರು ಪ್ರಯಾಣ ಮಾಡುತ್ತಿದ್ದುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಈ ಪೊಲೀಸರು ಬೇರೆ ಪ್ರಯಾಣಿಕರು ಕಾಯ್ದಿರಿಸಿದ ಸೀಟ್‌ಗಳನ್ನು ಆಕ್ರಮಿಸುವುದಲ್ಲದೆ, ಬೆದರಿಕೆ ಹಾಕುತ್ತಿದ್ದರು ಎಂದು ಪ್ರಯಾಗರಾಜ ವಿಭಾಗದ ರೈಲ್ವೆ ಅಧಿಕಾರಿಗಳಿಂದ ತಿಳಿದುಬಂದಿದೆ.

ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರಿಗೆ ರೈಲ್ವೆ ಶಾಕ್‌: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ನಿಯಮಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಆದರೆ, ಇದೀಗ ಶಾಕಿಂಗ್‌ ಸುದ್ದಿಯೊಂದನ್ನು ನೀಡಿದೆ. ಇಲ್ಲಿಯವರೆಗೂ 120 ದಿನಗಳ ಮುಂಚೆಯೇ ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸಲು ಅವಕಾಶ ಕಲ್ಪಿಸಿತ್ತು. ಆದರೆ ಇದೀಗ ಈ ಅವಧಿಯನ್ನು ಕಡಿಮೆ ಮಾಡಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.

120 ದಿನಗಳಿಗೂ ಮುಂಚಿತವಾಗಿ ರೈಲು ಸೀಟು ಕಾಯ್ದಿರಿಸಲು ಇದೀಗ ಇರುವ ನಿಯಮವನ್ನು ಇದೇ ನವೆಂಬರ್‌ 1ರಿಂದ 60 ದಿನಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಮಂಡಳಿ ಇಂದು (ಅಕ್ಟೋಬರ್ 17) ಪ್ರಕಟ ಮಾಡಿದೆ.

ಮುಂಗಡ ಟಿಕೆಟ್‌ ಕಾಯ್ದಿರಿಸುವಿಕೆ ಅವಧಿ ನಿಯಮದಂತೆ ಅಕ್ಟೋಬರ್ 31ರ ವರೆಗೆ ಕಾಯ್ದಿರಿಸಿದ ಎಲ್ಲಾ ಟಿಕೆಟ್‌ಗಳಿಗೆ 120 ದಿನಗಳ ಅವಕಾಶ ಇರುತ್ತದೆ. ಆದರೆ ಟಿಕೆಟ್‌ ಕಾಯ್ದಿರಿಸುವುಕೆಯ ಅವಧಿ ಕಡಿತಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರೆಬೇಕಿದೆ. ಆದರೆ ವಿದೇಶಿ ಪ್ರವಾಸಿಗರಿಗೆ ಕಲ್ಪಿಸಲಾಗಿರುವ 365 ದಿನಗಳ ಅವಕಾಶದಲ್ಲಿ ಯಾವುದೇ ಬದಲಾವಣೆಯಿಲ್ಲ. ರೈಲ್ವೆ ಇಲಾಖೆಯು, ಎಪಿಆರ್‌ ಮಿತಿಯನ್ನು 2015ರ ಮಾರ್ಚ್‌ 25ರಂದು 60 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಿತ್ತು. ಆದರೆ ಇದೀಗ ಮತ್ತೆ ಕಡಿತಕ್ಕೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+