Indian Railways: ಭಾರತೀಯ ರೈಲ್ವೆಗೆ ₹2.40 ಲಕ್ಷ ಕೋಟಿ ದಾಖಲೆಯ ಆದಾಯ ಸಂಗ್ರಹ, ವರ್ಷವಾರು ಮಾಹಿತಿ ಇಲ್ಲಿದೆ

ನವದೆಹಲಿ, ಏಪ್ರಿಲ್ 18: ಪ್ರಯಾಣಿಕರ ಸ್ನೇಹಿ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆ ಇಲಾಖೆಯು ಈ ವರ್ಷ ದೊಡ್ಡ ಮಟ್ಟದಲ್ಲಿ ಆದಾಯ ಗಳಿಸಿದೆ. ಅಲ್ಲದೇ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನಲ್ಲಿ ರೈಲ್ವೆ ಇಲಾಖೆ ಸಾವಿರಾರು ಕೋಟಿ ರೂಪಾಯಿಗಳಷ್ಟು ಆದಾಯವನ್ನು ಹೆಚ್ಚಿಸಿಕೊಂಡಿದೆ.

ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ವೇಗದ ಹಾಗೂ ಸುರಕ್ಷಿತ ಸೇವೆ ನೀಡುತ್ತಾ ಬಂದಿರುವ ರೈಲ್ವೆ ಇಲಾಖೆ ಸರಕು ಸಾಗಾಣಿಕೆ ವಲಯದಲ್ಲೂ ಸಹ ಅತ್ಯಧಿಕ ಆದಾಯ ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟೂರಿಂಗ್ ಪ್ಯಾಕೇಜ್‌ಗಳನ್ನು ಜಾರಿಗೊಳಿಸಿದ್ದು, ಅವುಗಳು ಸಹ ಸಹ ಹೆಚ್ಚಿನ ಆದಾಯ ಗಳಿಕೆಗೆ ಕೊಡುಗೆ ನಿಡಿದೆ ಎಂದು ಮೂಲಗಳು ತಿಳಿಸಿವೆ.

Indian Railways Is On A Profitable Path With Revenue Of Rs 2.40 Lakh Crore In 2022-2023 years

ಅಂಕಿ ಸಂಖ್ಯೆಗಳನ್ನು ನೋಡುವುದಾದರೆ ಭಾರತೀಯ ರೈಲ್ವೆ 2022 ಹಾಗೂ 2023ನೇ ಸಾಲಿನಲ್ಲಿ ಹೆಚ್ಚು ಆದಾಯ ಸಂಗ್ರಹಿಸಿದೆ. ಈ ಎರಡು ವರ್ಷಗಳ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆಯು 2.40 ಲಕ್ಷ ಕೋಟಿ ರೂಪಾಯಿಗಳ ದಾಖಲೆ ಮಟ್ಟದ ಆದಾಯ ವನ್ನು ಸಂಗ್ರಹಿಸಿದೆ.

ಕೇಂದ್ರ ರೈಲ್ವೆ ಸಚಿವಾಲಯವು ಸೋಮವಾರ ಈ ಕುರಿತು ಮಾಹಿತಿ ಪ್ರಕಟಿಸಿದೆ. ಈ ಆದಾಯವು ಹಿಂದಿನ ವರ್ಷಗಳ ಗಳಿಕೆಗೆ ಹೋಲಿಕೆ ಮಾಡಿದರೆ ಒಟ್ಟು ಸರಿಸುಮಾರು 49 ಸಾವಿರ ಕೋಟಿ ರೂಪಾಯಿಗಳಷ್ಟು ಏರಿಕೆ ಆಗಿದೆ ಎಂದು ಮಾಹಿತಿ ನೀಡಿದೆ. ಈ ಮೂಲಕ ಭಾರತೀಯ ರೈಲ್ವೆಯು ಲಾಭದ ಹಾದಿಯಲ್ಲಿದೆ.

ಲಾಭದ ಹಾದಿಯಲ್ಲಿ ಭಾರತೀಯ ರೈಲ್ವೆ

ಇನ್ನೂ ಅದೇ ವರ್ಷದಲ್ಲಿ (2022-23 ರಲ್ಲಿ) ಸರಕು ಮತ್ತು ಸಾಗಣೆ ಆದಾಯ ಸಹ 1.62 ಲಕ್ಷ ಕೋಟಿಗೆ ಸಂಗ್ರಹವಾಗಿದೆ. ಈ ಆದಾಯವನ್ನು ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಸುಮಾರು 15 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

Indian Railways Is On A Profitable Path With Revenue Of Rs 2.40 Lakh Crore In 2022-2023 years

ನಿತ್ಯ ಓಡಾಡುವ ಪ್ರಯಾಣಿಕರ ಸಂಚಾರದಿಂದ ಬರುವ ಆದಾಯದಲ್ಲಿ ಶೇಕಡಾ 61 ಪ್ರತಿಶತದಷ್ಟು ಏರಿಕೆ ಕಂಡಿದೆ. ಅದನ್ನು ಕೋಟಿಗಳಲ್ಲಿ ಹೇಳುವುದಾದರೆ ಒಟ್ಟು 63,300 ಕೋಟಿ ರೂಪಾಯಿ ಆಗಿದ್ದು, ಇದೇ ಇದುವರೆಗಿನ ಸಾರ್ವಕಾಲಿಕ ದಾಖಲೆ ಎಂದು ಸಚಿವಾಲಯ ತಿಳಿಸಿದೆ.

ವೆಚ್ಚಕ್ಕೆ ಕಡಿವಾಣ, ಹೆಚ್ಚು ಗಳಿಕೆಗೆ ಕ್ರಮ

ಕೋವಿಡ್ ನಂತರದ ವರ್ಷಗಳಲ್ಲಿ ದೇಶ ರೈಲ್ವೆಯು ಪಿಂಚಣಿ ವೆಚ್ಚಗಳನ್ನು ಸಂಪೂರ್ಣವಾಗಿ ಪೂರೈಸಲು ಇಲಾಖೆ ಸಮರ್ಥವಾಗಿದೆ. ಒಂದು ಕಡೆ ಆದಾಯದಲ್ಲಿ ಏರಿಕೆ ಮಾಡಲು ಕ್ರಮ ವಹಿಸಿದ್ದರೆ, ಮತ್ತೊಂದೆಡೆ ವೆಚ್ಚದ ಮೇಲೆ ಹಿಡಿತ ಸಾಧಿಸಲಾಗಿದೆ. ಇದರಿಂದ ವೆಚ್ಚ ನಿರ್ವಹಣೆಯ ಸುಸೂತ್ರವಾಗಿದ್ದು, 98.14 ಶೇಕಡಾ ಕಾರ್ಯಾಚರಣಾ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ.

ಅದೇ ರೀತಿ ವರ್ಷವಾರು ರೈಲ್ವೆ ಆದಾಯ ನೋಡುವುದಾದರೆ, ಪ್ರಯಾಣಿಕರ ಮೂಲದಿಂದ (2022-23ರಲ್ಲಿ) ರೈಲ್ವೆಗೆ 63,300 ಕೋಟಿ ರೂಪಾಯಿ, 2021-22ರಲ್ಲಿ 39,214 ಕೋಟಿ ರೂ. ಗಳಿಸಿದೆ. ಅಂದರೆ 61% ಆದಾಯ ಗಳಿಕೆ ಏರಿಕೆ ಆಗಿದೆ. 2021-22ರಲ್ಲಿ ಒಟ್ಟಾರೆ ಆದಾಯ 1,91,278 ಕೋಟಿ ರೂ. ಇದ್ದರೆ 2022-23ರಲ್ಲಿ 2,39,803 ಕೋಟಿ ರೂಪಾಯಿ ಆಗಿದೆ. ರೈಲ್ವೆ ಸೇಫ್ಟಿ ಫಂಡ್‌ನಲ್ಲಿ 2022-23ರಲ್ಲಿ 30,001 ಕೋಟಿ ರೂಪಾಯಿ ಖರ್ಚು ಮಾಡಿದ್ದರ ಬಗ್ಗೆ ತಿಳಿಸಿದೆ.

ಎಲ್ಲ ಆದಾಯ ವೆಚ್ಚಗಳ ನಿರ್ವಹಣೆ ಬಳಿಕ ರೈಲ್ವೆ 3000 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆ ಕೂಡ ಗಳಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+