IRCTC: ಕಾಯ್ದಿರಿಸಿದ ರೈಲಿನ 'ಇ-ಟಿಕೆಟ್' ರದ್ದತಿ ವಿಧಾನ, ಗಡುವು, ಶುಲ್ಕದ ಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರು, ನವೆಂಬರ್ 19: ಇತ್ತೀಚಿನ ದಿನಗಳಲ್ಲಿ ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ಬಳಿಕ ರೈಲುಗಳ ಸಂಖ್ಯೆಯಲ್ಲೂ ಏರಿಕೆ ಆಗಿದೆ. ಪ್ರಯಾಣಿಕರು ಆನ್‌ಲೈನ್ ಮೂಲಕ IRCTC ಆಪ್ ಇಲ್ಲವೇ ವೆಬ್‌ಸೈಟ್ ಮೂಲಕ ರೈಲು ಪ್ರಯಾಣದ ಟಿಕೆಟ್ ಬುಕ್ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಪ್ರಯಾಣ ಬೇಡವಾಗಿದ್ದಲ್ಲಿ, ಇಲ್ಲವೇ ಟಿಕೆಟ್ ರದ್ದು ಮಾಡಬೇಕಾದಲ್ಲಿ ಅನುಸರಿಸಬೇಕಾದ ಕ್ರಮಗಳು ಏನು? ಏನೇನು ಮಾಡಬೇಕು, ರದ್ದಿನ ಬಳಿಕ ಕಡಿತ ಹಣ ಯಾವಾಗ ಮರಲುತ್ತದೆ ಎಂಬೆಲ್ಲ ಮಾಹಿತಿ ಇಲ್ಲಿದೆ.
ಭಾರತೀಯ ರೈಲ್ವೆಯ ರದ್ದಾದ ಇ-ಟಿಕೆಟ್‌ಗಳಿಗೆ IRCTC ಮೂಲಕ ಎರಡು ವಿಭಾಗಗಳಾಗಿ ಹಣ ಮರುಪಾವತಿಗೆ ಮಾಡುತ್ತದೆ. ಟಿಕೆಟ್ ರದ್ದು ಮಾಡಿದ ಬಳಿಕ ರೈಲ್ವೆ ಇಲಾಖೆಯು ಸಂಚರಿಸುವ ಪ್ರಯಾಣಿಕರ ಚಾರ್ಟ್ ಸಿದ್ದಪಡಿಸುವ ಮೊದಲೇ ಹಣ ಹಿಂತಿರುಗಿಸುತ್ತಾರೆ. ಎರಡನೇ ವಿಭಾಗದಲ್ಲಿ ಚಾರ್ಟ್ ಸಿದ್ಧವಾದ ನಂತರ ಹಣ ಹಿಂತಿರುಗಿಸುತ್ತದೆ.ಒಟ್ಟು ಈ ಮರುಪಾವತಿಯ ಹಣ 5 ರಿಂದ 7 ಕೆಲಸದ ದಿನಗಳಲ್ಲಿ ಹಿಂತಿರುಗಿಸುತ್ತದೆ.

ಟಿಕೆಟ್ ರದ್ದುಗೊಳಿಸುವ ಪ್ರಕ್ರಿಯೆ, ವಿಧಾನ
IRCTC ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಟಿಕೆಟ್ ಕಾಯ್ದಿರಿಸುವ (ಬುಕ್ಕಿಂಗ್) ಇ-ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ರದ್ದುಗೊಳಿಸಲು ಆಗುವುದಿಲ್ಲ. ಅದನ್ನು ಆನ್‌ಲೈನ್‌ನಲ್ಲಿ ಮಾತ್ರವೇ ರದ್ದುಗೊಳಿಸಬೇಕು. ನೀವು ಟಿಕೆಟ್ ಬುಕ್ ಮಾಡಿದ ಬಳಿಕ ಅಂತಿಮವಾಗಿ ಇಲಾಖೆ ಸಂಚರಿಸುವ ಪ್ರಯಾಣಿಕರ ಚಾರ್ಟ್ ಸಿದ್ದಪಡಿಸುತ್ತದೆ. ಈ ಚಾರ್ಟ್ ಸಿದ್ಧವಾಗುವ ಮೊದಲೇ ಆನ್‌ಲೈನ್ ಮೂಲಕ ಟಿಕೆಟ್ ರದ್ದುಗೊಳಿಸಬೇಕಿದೆ.
* ಬುಕ್ ಮಾಡಿರುವ ಟಿಕೆಟ್‌ಗಳನ್ನು ಮೊದಲು www.irctc.co.inಗೆ ಭೇಟಿ ನೀಡಿ. ಹೆಸರು-ಪಾಸವರ್ಡ್ ಹಾಕಿ ಲಾಗಿನ್ ಆಗಿ.
* ಬುಕ್ ಮಾಡಿದ ಟಿಕೆಟ್‌ಗಳು ಟ್ಯಾಬ್‌ಗೆ ಹೋಗಿ ಮತ್ತು ನೀವು ರದ್ದುಗೊಳಿಸಲು ಬಯಸುವ ನಿರ್ದಿಷ್ಟ ರೈಲು ಟಿಕೆಟ್ ಅನ್ನು ಆಯ್ಕೆ ಮಾಡಿ. ಆಯ್ಕೆ ಮಾಡಿದ ನಂತರ ಅದನ್ನು ದೃಢೀಕರಿಸಿದ ಬಳಿಕ ಆ ಟಿಕೆಟ್‌ಗಳು ರದ್ದಾಗಲಿವೆ.

ಮೊಬೈಲ್ ಅಪ್ಲಿಕೇಶನ್ ಇ-ಟಿಕೆಟ್ ರದ್ದು
*ಮೊದಲು ನೀವು IRCTC ಅಪ್ಲಿಕೇಷನ್ ಲಾಗಿನ ಆಗಿ. ಹೋಮ್ ಸ್ಕ್ರೀನ್‌ನಿಂದ 'ಟ್ರೇನ್' ಆಯ್ಕೆಮಾಡಿ.
* ನಂತರ 'ನನ್ನ ಬುಕಿಂಗ್' ಆಯ್ಕೆ ಮಾಡಿಕೊಂಡು ಅಲ್ಲಿ ಎರಡು ಟ್ಯಾಬ್‌ಗಳು ಕಾಣುತ್ತವೆ. ಅಪ್‌ಕಮಿಂಗ್ ಮತ್ತು ಕಂಪ್ಲಿಟ್ ಎಂಬುದರ ಮೇಲೆ ಕ್ಲಿಕ್ ಮಾಡಿ.
* ನೀವು ರದ್ದುಗೊಳಿಸಲು ಬಯಸುವ ರೈಲು ಟಿಕೆಟ್‌ಗಳನ್ನು ಅಲ್ಲಿ ಆಯ್ಕೆ ಮಾಡಿ. ನಂತರ ಮೂರು ಚುಕ್ಕೆಗಳಿಂದ ಪ್ರತಿನಿಧಿಸುವ ಮೆನು ಬಟನ್ ಕ್ಲಿಕ್ ಮಾಡಿ (...). ಇಲ್ಲಿ ಐದು ಆಯ್ಕೆಗಳು ಲಭ್ಯವಿರುತ್ತವೆ. 'ಕ್ಯಾನ್ಸೆಲ್ ಟಿಕೆಟ್' ಮೇಲೆ ಕ್ಲಿಕ್ ಮಾಡಿ, ರದ್ದತಿ ದೃಢೀಕರಿಸಿದರೆ ನಿಮ್ಮ ಬುಕ್ಕಿಂಗ್ ಟಿಕೆಟ್ ರದ್ದಾಗುತ್ತದೆ.
ಟಿಕೆಟ್ ರದ್ದು ಶುಲ್ಕದ ಮಾಹಿತಿ
ರೈಲು ಹೊರಡುವ ಮೊದಲು ಅಂದರೆ ನಿಗದಿತ ರೈಲು ಹೊರಡುವ 48 ಗಂಟೆಗಳ ಮೊದಲು ದೃಢೀಕರಿಸಿದ ಇ-ಟಿಕೆಟ್ ಅನ್ನು ರದ್ದುಗೊಳಿಸಿದರೆ ಮಾತ್ರ ಶುಲ್ಕ ಮರುಪಾವತಿಗೆ ಅನ್ವಯಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
ಟಿಕೆಟ್ ದರಗಳ ಮಾಹಿತಿ
ಎಸಿ ಪ್ರಥಮ ದರ್ಜೆ/ಕಾರ್ಯನಿರ್ವಾಹಕ ವರ್ಗ - 240 ರೂಪಾಯಿ.
ಎಸಿ 2 ಶ್ರೇಣಿ/ಪ್ರಥಮ ದರ್ಜೆ- 200 ರೂಪಾಯಿ.
AC 3 ಶ್ರೇಣಿ/AC ಚೇರ್ ಕಾರ್/AC 3 ಆರ್ಥಿಕತೆ 180 ರೂಪಾಯಿ.
ಸ್ಲೀಪರ್ ಕ್ಲಾಸ್‌ಗೆ 120 ರೂಪಾಯಿ
ಎರಡನೇ ದರ್ಜೆಗೆ 60 ರೂಪಾಯಿ ಇರುತ್ತದೆ.
ದೃಢೀಕರಿಸಿದ ಇ-ಟಿಕೆಟ್ ಅನ್ನು 48 ಗಂಟೆಗಳ ಒಳಗೆ ಮತ್ತು ರೈಲಿನ ನಿಗದಿತ ನಿರ್ಗಮನದ ಮೊದಲು 12 ಗಂಟೆಗಳವರೆಗೆ ರದ್ದುಗೊಳಿಸಿದರೆ. ರದ್ದಾದ ಸಮಯದ ಮೇಲೆ ಇ-ಟಿಕೆಟ್ ದರಕ್ಕೆ ಅನುಗುಣವಾಗಿ ಶೇಕಡಾ 25ರಷ್ಟು ಹಣ ಕಡಿತಗೊಂಡು ಬಾಕಿ ಹಣ ವಾರದೊಳಗೆ ಕಡಿತಗೊಂಡ ಖಾತೆಗೆ ಮರುಪಾವತಿ ಆಗುತ್ತದೆ.












Click it and Unblock the Notifications