Indian Railway Jobs: ಸಿಹಿ ಸುದ್ದಿ: ಖಾಲಿ ಹುದ್ದೆ ನೇಮಕಾತಿಗಾಗಿ ಹೊಸ ವ್ಯವಸ್ಥೆ ಪರಿಚಯಿಸಿದ ರೈಲ್ವೆ, ಗಮನಿಸಿ
ಭುವನೇಶ್ವರ, ಜನವರಿ 29: ದೇಶದ ಜನರಿಗೆ ಅತ್ಯುತ್ತಮ ಸಾರಿಗೆ ನೀಡಲು ಸಾವಿರಾರು ಕಿಲೋ ಮೀಟರ್ ಜಾಲ ಹೊಂದಿರುವ ಭಾರತೀಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿ ಆಗಾಗ ಖಾಲಿ ಆಗುವ ಸಿಬ್ಬಂದಿ ನೇಮಕಾತಿಗೆ ಹೊಸ ವ್ಯವಸ್ಥೆಯನ್ನು ಇಲಾಖೆ ಪರಿಚಯಿಸುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರೈಲ್ವೆ ವ್ಯಾಪ್ತಿಯಲ್ಲಿ ಹುದ್ದೆಗಳು ಖಾಲಿ ಇದ್ದಾಗ ಮತ್ತು ಪಾರದರ್ಶಕ ರೀತಿಯಲ್ಲಿ ಜನರನ್ನು ನಿಯಮಿತವಾಗಿ ಸಂಸ್ಥೆಗೆ ನೇಮಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ 'ವಾರ್ಷಿಕ ನೇಮಕಾತಿ ಪ್ರಕ್ರಿಯೆ'ಯನ್ನು ಪರಿಚಯಿಸಿದೆ ಎಂದು ಅವರು ಮಾಹಿತಿ ನೀಡಿದರು.

ಓಡಿಶಾ ರಾಜ್ಯದ ಕಟಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ಲೈವ್ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮತ್ತು ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದರು. ಸಹಾಯಕ ಲೋಕೋ ಪೈಲಟ್‌ಗಳ ಆಯ್ಕೆಗಾಗಿ ಹೊಸ ನೇಮಕಾತಿ ಚಾಲನೆಯನ್ನು ಪ್ರಾರಂಭಿಸಲಾಗಿದೆ.
ಹೆಚ್ಚಿನ ಉದ್ಯೋಗವಕಾಶಗಳು
ಇದರ ಜೊತೆ ಜೊತೆಗೆ ರೈಲ್ವೆ ನೇಮಕಾತಿಗಾಗಿ ಹೊಸ ವಾರ್ಷಿಕ ಪ್ರಕ್ರಿಯೆಯನ್ನು ಪರಿಚಯಿಸಲಾಗಿದೆ. ಇದು ಮೊದಲ ಹೆಜ್ಜೆ. ತಾಂತ್ರಿಕ ಮತ್ತು ತಾಂತ್ರಿಕೇತರ ಜನಪ್ರಿಯ ವಿಭಾಗಗಳಲ್ಲಿ ಮತ್ತು ಗ್ರೂಪ್ ಡಿ ಯಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳಿವೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಇತ್ತೀಚೆಗೆ ಭಾರತದ ರೈಲ್ವೆ ಇಲಾಖೆಯು ಒಟ್ಟು 1.5 ಲಕ್ಷ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಅಲ್ಲದೇ ವಿವಿಧ ರೈಲ್ವೇ ವಲಯಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಯೋಜಿಸಲಾಗಿದೆ. ಇದರ ಬಳಿಕವೇ ಸಹಾಯಕ ಲೋಕೋ ಪೈಲಟ್‌ಗಳ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ರೈಲ್ವೆಯಡಿ 2.5ಲಕ್ಷಕ್ಕೂ ಹೆಚ್ಚು ಹುದ್ದೆ
ಭಾರತೀಯ ರೈಲ್ವೇಯು ವಿವಿಧ ವರ್ಗಗಳ ಅಡಿಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಹೊಂದಿದೆ. ಇದರಲ್ಲಿ ಸ್ಟೇಷನ್ ಮಾಸ್ಟರ್‌ಗಳು, ಜೂನಿಯರ್ ಇಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ಒಳಗೊಂಡಿರುವ ಗುಂಪಿನ ಸಿ (ಗೆಜೆಟೆಡ್ ಅಲ್ಲದ) ಗರಿಷ್ಠ ಶೇಕಡಾ 98ಕ್ಕಿಂತ ಹೆಚ್ಚಿದೆ. ಸಿಗ್ನಲ್ ಮತ್ತು ದೂರಸಂಪರ್ಕ ವಿಭಾಗದ ಹುದ್ದೆಗಳು ಸೇರಿದಂತೆ 50,000 ಕ್ಕೂ ಹೆಚ್ಚು ಸುರಕ್ಷತಾ ಸಿಬ್ಬಂದಿ ಹುದ್ದೆಗಳೂ ಖಾಲಿ ಇವೆ ಎಂದು ಅವರು ಮುಂದಿನ ದಿನಗಳಲ್ಲಿ ಮಾಡಿಕೊಳ್ಳಬಹುದಾದ ನೇಮಕಾತಿ ಕುರಿತು ವಿವರಿಸಿದರು.

ಪ್ರತಿ ವರ್ಷ ನೇಮಕಾತಿ ಅಭಿಯಾನ
ಮೇಲಿನ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಒಟ್ಟೊಟ್ಟಿಗೆ ಸೇರಿಸುವ ಬದಲು, ನಿಯಮಿತವಾಗಿ ವಾರ್ಷಿಕ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವುದು ನಮ್ಮ ಉದ್ದೇಶವಾಗಿದೆ. ಹೆಚ್ಚು ಹೆಚ್ಚು ಜನರು ಅವಕಾಶಗಳನ್ನು ಪಡೆಯಲು ಪ್ರತಿ ವರ್ಷ ನೇಮಕಾತಿ ಅಭಿಯಾನ ನಡೆಸಲಿದ್ದೇವೆ ಎಂದರು.
ಸದ್ಯ ಈ ವರ್ಷ ವಾರ್ಷಿಕ ನೇಮಕಾತಿ ಚಾಲನೆಯ ಅಂಗವಾಗಿ ರೈಲ್ವೇಯು ಜನವರಿ 20 ರಿಂದ 5,696 ಸಹಾಯಕ ಲೋಕೋ ಪೈಲಟ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈಗ ರೈಲ್ವೇ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವವರು ಈ ಹಿಂದಿನ ಅಭ್ಯಾಸದಂತೆ ಮೂರರಿಂದ ನಾಲ್ಕು ವರ್ಷಗಳವರೆಗೆ ಕಾಯುವ ಬದಲು ಪ್ರತಿ ವರ್ಷವೂ ಉದ್ಯೋಗಕ್ಕಾಗಿ ಪರೀಕ್ಷೆ ಎದುರಿಸಿ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಇದರಿಂದ ಅವಕಾಶ ಸಿಗಲಿದೆ.
1.39 ಲಕ್ಷ ಹುದ್ದೆಗಳ ಭರ್ತಿ ಪ್ರಕ್ರಿಯೆ
ಕಳೆದ ಎರಡು ವರ್ಷಗಳಲ್ಲಿ ನಾನ್ ಗೆಜೆಟೆಡ್ ಹುದ್ದೆಗಳ 1.39 ಲಕ್ಷ ಹುದ್ದೆಗಳ ಭರ್ತಿಯ ಕೊನೆಯ ಮೆಗಾ ಡ್ರೈವ್ ಅಂತ್ಯಗೊಂಡಿದೆ. ಡಿಸೆಂಬರ್ 2020 ಮತ್ತು ಅಕ್ಟೋಬರ್ 2022 ರ ನಡುವೆ 12 ಹಂತಗಳಲ್ಲಿ 200 ಕ್ಕೂ ಹೆಚ್ಚು ನಗರಗಳಲ್ಲಿ 15 ಭಾಷೆಗಳಲ್ಲಿ ನಡೆಸಿದ ಎರಡು ಪ್ರಮುಖ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಲ್ಲಿ 2.37 ಕೋಟಿ ಅರ್ಜಿದಾರರು ಭಾಗವಹಿಸಿದ್ದರು ಎಂದು ಸಚಿವರು ಹೇಳಿದರು.
2014-15 ರಿಂದ 2023-24 ರ ಅವಧಿಯಲ್ಲಿ (ಸೆಪ್ಟೆಂಬರ್ 2023 ರವರೆಗೆ) ಲೆವೆಲ್-1 ಮತ್ತು ಭದ್ರತೆ ಸಂಬಂಧಿತ ಹುದ್ದೆಗಳು ಸೇರಿದಂತೆ ವಿವಿಧ ಗ್ರೂಪ್ ಸಿ ಹುದ್ದೆಗಳ ವಿರುದ್ಧ ರೈಲ್ವೆ ನೇಮಕಾತಿ ಏಜೆನ್ಸಿಗಳು 4.89 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಕೆಲವು ದಿವಸಗಳ ಹಿಂದೆ ಸಂಸತ್ತಿಗೆ ಸಚಿವರು ಮೌಖಿಕವಾಗಿ ತಿಳಿಸಿದ್ದರು.












Click it and Unblock the Notifications