"ಈ" ಮಾರ್ಗಗಳಲ್ಲಿ ಮಾರ್ಚ್ 4 ರವರೆಗೆ ರೈಲುಗಳನ್ನು ರದ್ದು ಮಾಡಿದ ಭಾರತೀಯ ರೈಲ್ವೆ, ಏಕೆ?, ಇಲ್ಲಿದೆ ವಿವರ
ಭಾರತೀಯ ರೈಲ್ವೆಯು ಇತ್ತೀಚೆಗಷ್ಟೇ ಹೋಳಿ ಹಬ್ಬಕ್ಕೆಂದು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿತ್ತು. ಆದರೆ ಇದೀಗ ಕಾರಣಾಂತರಗಳಿಂದ ಕೆಲವು ಮಾರ್ಗಗಳ ಬದಲಾವಣೆ ಮಾಡಿದೆ. ಹಾಗಾದರೆ ಯಾವ ಮಾರ್ಗಗಳಲ್ಲಿ ರೈಲುಗಳ ಸಂಚಾರ ರದ್ದಾಗಿದೆ ಎಂದು ಇಲ್ಲಿ ಗಮನಿಸಿ.
ನವದೆಹಲಿ, ಫೆಬ್ರವರಿ, 22: ಲಕ್ನೋ ಮತ್ತು ಗೋರಖ್‌ಪುರ ರೈಲು ವಿಭಾಗಗಳಲ್ಲಿ ಇಂಟರ್‌ಲಾಕಿಂಗ್ ಮತ್ತು ಡಬ್ಲಿಂಗ್ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಭಾರತೀಯ ರೈಲ್ವೇಯು ಮೈಲಾನಿ-ಗೋರಖ್‌ಪುರ ಮಾರ್ಗದಲ್ಲಿ ಹಲವಾರು ರೈಲುಗಳನ್ನು ರದ್ದುಗೊಳಿಸಿ ಅವುಗಳನ್ನು ಬೇರೆಡೆಗೆ ತಿರುಗಿಸಿದೆ.
ಈಶಾನ್ಯ ರೈಲ್ವೆಯ ಲಕ್ನೋ ಮತ್ತು ಗೋರಖ್‌ಪುರ ವಿಭಾಗದ ದಲಿಗಂಜ್-ಬಾದ್‌ಶಾನಗರ-ಗೋಮ್ತಿನಗರ-ಮಲ್ಹೌರ್ ನಿಲ್ದಾಣಗಳ ಹಳಿಗಳನ್ನು ದ್ವಿಗುಣಗೊಳಿಸುವ ಕಾರ್ಯ ನಡೆಯಲಿದೆ. ಆದ್ದರಿಂದ ಕೆಲವು ರೈಲುಗಳ ಮಾರ್ಗಗಳನ್ನು ಬದಲಾಯಿಸಲು ರೈಲ್ವೇ ಇಲಾಖೆ ಮುಂದಾಗಿದೆ. ಲಕ್ನೋ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹೇಶ್ ಗುಪ್ತಾ ಈ ಬಗ್ಗೆ ಮಾತನಾಡಿ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.
ರೈಲು ಸಂಖ್ಯೆ, ರದ್ದಾಗುವ ಮಾರ್ಗಗಳು, ದಿನಾಂಕ
1. ರೈಲು ನಂಬರ್ 05492: ಮೈಲಾನಿ- ಸೀತಾಪುರ್ ಎಕ್ಸ್‌ಪ್ರೆಸ್ (ಮಾರ್ಚ್ 1 ರಿಂದ ಮಾರ್ಚ್ 3ರವರೆಗೆ ಸಂಚಾರ ರದ್ದಾಗಲಿದೆ)
2. ರೈಲು ನಂಬರ್ 22531: ಛಪ್ರಾ-ಮಥುರಾ ಎಕ್ಸ್‌ಪ್ರೆಸ್ (20, 24, 27 ಫೆಬ್ರವರಿ, 01 ಮತ್ತು ಮಾರ್ಚ್ 3ರಂದು ರದ್ದಾಗಲಿದೆ)

3. ರೈಲು ನಂಬರ್ 22532: ಮಥುರಾ-ಛಾಪ್ರಾ ಎಕ್ಸ್‌ಪ್ರೆಸ್ (20, 24, 27 ಫೆಬ್ರವರಿ, 01 ಮತ್ತು ಮಾರ್ಚ್ 03)
4. ರೈಲು ನಂಬರ್ 15010: ಮೈಲಾನಿ- ಗೋರಖ್‌ಪುರ ಎಕ್ಸ್‌ಪ್ರೆಸ್ (ಫೆಬ್ರವರಿ 21- ಮಾರ್ಚ್ 4)
5. ರೈಲು ನಂಬರ್ 15009: ಗೋರಖ್‌ಪುರ- ಮೈಲಾನಿ ಎಕ್ಸ್‌ಪ್ರೆಸ್ (ಫೆಬ್ರವರಿ 20 ರಿಂದ ಮಾರ್ಚ್ 3)
6. ರೈಲು ನಂಬರ್- 05085: MLN-LJN ಎಕ್ಸ್‌ಪ್ರೆಸ್ (ಮಾರ್ಚ್ 1 ರಿಂದ ಮಾರ್ಚ್ 3)
7. ರೈಲು ನಂಬರ್ 05086: LJN-MLN ಎಕ್ಸ್‌ಪ್ರೆಸ್ (ಮಾರ್ಚ್ 1 ರಿಂದ ಮಾರ್ಚ್ 3)
8. ರೈಲು ನಂಬರ್ 05491: ಮೈಲಾನಿ- ಸೀತಾಪುರ್ ಎಕ್ಸ್‌ಪ್ರೆಸ್ (ಮಾರ್ಚ್ 1 ರಿಂದ ಮಾರ್ಚ್ 3)
9. ರೈಲು ನಂಬರ್ 15069: ಗೋರಖ್‌ಪುರ-ಐಶ್‌ಬಾಗ್ ಎಕ್ಸ್‌ಪ್ರೆಸ್ (ಫೆಬ್ರವರಿ 20 ರಿಂದ ಮಾರ್ಚ್ 4)
10. ರೈಲು ನಂಬರ್ 12532: ಲಕ್ನೋ Jn-ಗೋರಖ್‌ಪುರ ಎಕ್ಸ್‌ಪ್ರೆಸ್ (ಫೆಬ್ರವರಿ 20 ರಿಂದ ಮಾರ್ಚ್ 3)
11. ರೈಲು ನಂಬರ್ 15054: ಲಕ್ನೋ Jn - ಛಪ್ರಾ ಎಕ್ಸ್‌ಪ್ರೆಸ್ (ಫೆಬ್ರವರಿ 26 ರಿಂದ ಮಾರ್ಚ್ 2)
12. ರೈಲು ನಂಬರ್09566: ಭಾವನಗರ ಟರ್ಮಿನಸ್ -ಜೆಟಲ್‌ಸರ್ ಪ್ಯಾಸೆಂಜರ್ (ಫೆಬ್ರವರಿ 20)
13. ರೈಲು ನಂಬರ್ 09565: ಜೆಟಲ್‌ಸರ್ - ಭಾವನಗರ ಟರ್ಮಿನಸ್ ಪ್ಯಾಸೆಂಜರ್ (ಫೆಬ್ರವರಿ 20)

ರೈಲುಗಳು ಸಂಚರಿಸುವ ಮಾರ್ಗಗಳ ವಿವರ
1. ರೈಲು ನಂಬರ್ 02564: ನವದೆಹಲಿ-ಬರೌನಿ ವಿಶೇಷ ರೈಲು (ಫೆಬ್ರವರಿ 20 ರಿಂದ ಮಾರ್ಚ್ 02)
2. ರೈಲು ನಂಬರ್ 02570: ದರ್ಭಾಂಗ ವಿಶೇಷ ರೈಲು (ಫೆಬ್ರವರಿ 21 ರಿಂದ ಮಾರ್ಚ್ 03)
3. ರೈಲು ನಂಬರ್ 02569: ದರ್ಭಾಂಗಾ-ನವದೆಹಲಿ ವಿಶೇಷ ರೈಲು (ಫೆಬ್ರವರಿ 21 ರಿಂದ ಮಾರ್ಚ್ 03)
4. ರೈಲು ನಂಬರ್ 02563: ಬರೌನಿ-ನವದೆಹಲಿ ವಿಶೇಷ ರೈಲು (ಫೆಬ್ರವರಿ 20 ರಿಂದ ಮಾರ್ಚ್ 02)
5. ರೈಲು ನಂಬರ್12591: ಗೋರಖ್‌ಪುರ-ಯಶವಂತಪುರ ಎಕ್ಸ್‌ಪ್ರೆಸ್ (25 ಫೆಬ್ರವರಿ 2023)
6. ರೈಲು ನಂಬರ್ 12566: ನವದೆಹಲಿ-ದರ್ಬಂಗಾ ಎಕ್ಸ್‌ಪ್ರೆಸ್ (ಫೆಬ್ರವರಿ 27 ರಿಂದ ಮಾರ್ಚ್ 02, 2023)
7. ರೈಲು ನಂಬರ್ 22922: ಗೋರಖ್‌ಪುರ-ಬಾಂದ್ರಾ ಟರ್ಮಿನಸ್ ಎಕ್ಸ್‌ಪ್ರೆಸ್ (28 ಫೆಬ್ರವರಿ)
8. ರೈಲು ನಂಬರ್ 05087: ಮೈಲಾನಿಯಿಂದ ಡಾಲಿಗಾನಿ ಎಕ್ಸ್‌ಪ್ರೆಸ್ (ಮಾರ್ಚ್ 1 ರಿಂದ 3)
ಕಾರಗಾರಿ ನಡೆಯುವ ಕಾರಣ ಕೆಲವೊಂದು ರೈಲುಗಳ ಸಂಚಾರವನ್ನು ರದ್ದು ಮಾಡಿ, ಹಾಗೆಯೇ ರದ್ದು ಮಾಡಿದ ರೈಲುಗಳನ್ನು ಬೇರೆಡೆಗೆ ಓಡಿಸಲು ಭಾರತೀಯ ರೈಲ್ವೇ ನಿರ್ಧಾರ ಮಾಡಿದೆ.












Click it and Unblock the Notifications