Kavacha: ಭಾರತೀಯ ರೈಲುಗಳಿಗೆ ಸ್ವಯಂಚಾಲಿತ ಸಂರಕ್ಷಣಾ ವ್ಯವಸ್ಥೆ ಅಳವಡಿಕೆ: ಅಶ್ವಿನಿ ವೈಷ್ಣವ್

ನವದೆಹಲಿ, ಜುಲೈ 25: ಭಾರತೀಯ ರೈಲ್ವೆ ಜಾಲವು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ದ್ವಿಪಥ ಹಳಿ, ವಿದ್ಯುದೀಕರಣ, ಮೂಲಸೌಕರ್ಯ ಅಭವೃದ್ಧಿ ಆಗುತ್ತಿದೆ. ಈ ಮಧ್ಯೆ ಮಾರ್ಗ, ರೈಲ್ವೆಗಳಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ಸಂರಕ್ಷಣಾ (ಎಟಿಪಿ) ವ್ಯವಸ್ಥೆ 'ಕವಚ' ಅಳವಡಿಸಲಾಗಿದೆ.

ಈ ಕುರಿತು ಖುದ್ದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ಸಂರಕ್ಷಣಾ (ಎಟಿಪಿ) ವ್ಯವಸ್ಥೆ 'ಕವಚ' ಅನ್ನು ಈವರೆಗೆ ದೇಶದ 1,465 ಕಿಮೀ ರೈಲ್ವೆ ಮಾರ್ಗ ಮತ್ತು ದಕ್ಷಿಣ ಮಧ್ಯ ರೈಲ್ವೆಯ 144 ಇಂಜಿನ್‌ಗಳಲ್ಲಿ ನಿಯೋಜಿಸಲಾಗಿದೆ.

Indian Railways Adopted Kavach on 1 465 KM Rail Route and 144 Train Engine

ಕವಚ ವ್ಯವಸ್ಥೆಯಲ್ಲಿ ಇಲ್ಲಿಯವರೆಗೆ 1,216.77 ಕೋಟಿ ರೂಪಾಯಿಗಳನ್ನು ಬಳಸಲಾಗಿದೆ. 2024-25 ನೇ ಸಾಲಿನಲ್ಲಿ 1,112.57 ಕೋಟಿ ರೂಪಾಯಿಗಳ ಹಣ ಹಂಚಿಕೆ ಮಾಡಲಾಗಿದೆ ಎಂದು ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ಮಾಹಿತಿ ಕೊಟ್ಟರು.

ಉನ್ನತ ತಂತ್ರಜ್ಞಾನದದ ಕವಚದ ಕಾರ್ಯವೇನು?

ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಸ್ವಯಂಚಾಲಿತ ರೈಲು ಸಂರಕ್ಷಣಾ (ಎಟಿಪಿ) ವ್ಯವಸ್ಥೆ 'ಕವಚ' ಒಂದು ಉನ್ನತ ತಂತ್ರಜ್ಞಾನ ಹೊಂದಿರುವ ವ್ಯವಸ್ಥೆ ಆಗಿದೆ. ಈ ಕವಚದ ಕೆಲಸ ನೋಡುವುದಾದರೆ, ಲೊಕೋ ಪೈಲಟ್ ರೈಲು ನಿಯಂತ್ರಿಸುವಲ್ಲಿ ವಿಫಲವಾದಲ್ಲಿ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ ನಿಗದಿತ ವೇಗದ ಮಿತಿಯಲ್ಲಿ ರೈಲನ್ನು ನಿಯಂತ್ರಿಸಲು, ಚಲಾಯಿಸಲು ಇದು ಸಹಾಯ ಮಾಡುತ್ತದೆ.

Indian Railways Adopted Kavach on 1 465 KM Rail Route and 144 Train Engine

ಸಂಭವನೀಯ ಅವಘಡ ತಪ್ಪಲಿದೆ

ಅಲ್ಲದೇ ಪ್ರತಿಕೂಲ ಹವಾಮಾನದಲ್ಲಿ ರೈಲು ಸುರಕ್ಷಿತವಾಗಿ ಓಡಲು ಸಹಾಯ ಮಾಡುತ್ತದೆ. ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕರಿಂದ ಅತ್ಯುನ್ನತ ಮಟ್ಟದ ಸುರಕ್ಷತಾ ಸಮಗ್ರತೆಯ ಮಟ್ಟ SIL4 ಗಾಗಿ ಕವಚ ಪ್ರಮಾಣೀಕರಿಸಲ್ಪಟ್ಟಿದೆ. ಮುಂದಿನ ನಿಲ್ದಾಣಗಳಲ್ಲಿ ಚಾಲನೆಯಲ್ಲಿರುವ ಮಾರ್ಗಗಳಲ್ಲಿ ಸಂಭವನಿಯ ಅವಘಡ ತಪ್ಪಿಲು ನೆರವಾಗುತ್ತದೆ ಎಂದರು.

ಸದ್ಯ ಭಾರತದಲ್ಲಿ ದೆಹಲಿ-ಮುಂಬೈ ಮತ್ತು ದೆಹಲಿ-ಹೌರಾ ಮಾರ್ಗದಲ್ಲಿ ಅಂದಾಜು 3,000 ರೂಟ್ ಕಿಮೀ ಮಾರ್ಗದಲ್ಲಿ ಈ ಕವಚ ವ್ಯವಸ್ಥೆ ಅಳವಡಿಸಲಾಗಿದೆ. 4,275 ಕಿಮೀಗೆ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲಾಗಿದೆ, 364 ಟೆಲಿಕಾಂ ರೋವರ್‌ಗಳನ್ನು ಹಾಕಲಾಗಿದೆ.

6,000 ಮಾರ್ಗದ ಕಿಮೀಯಲ್ಲಿ 'ಕವಚ' ಶೀಘ್ರ

ಇನ್ನೂ 285 ಯೂನಿಟ್‌ಗಳ ಕವಚ ಉಪಕರಣಗಳನ್ನು ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. 319 ಯೂನಿಟ್‌ಗಳು ಕವಚ ಉಪಕರಣಗಳನ್ನು ಒದಗಿಸಲಾಗಿದೆ ಮತ್ತು 1,384 ರೂಟ್ ಕಿಮೀ ನಲ್ಲಿ ಕವಚ್ ಟ್ರ್ಯಾಕ್‌ಸೈಡ್ ಉಪಕರಣಗಳ ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಭವಿಷ್ಯದಲ್ಲಿ ಉದ್ದೇಶಿತ 6,000 ಮಾರ್ಗದ ಕಿಮೀ ನಲ್ಲಿ ಈ ಕವಚ ಅಳವಡಿಸುವ ಪ್ಲಾನ್ ಇದೆ. ಅದಕ್ಕಾಗಿ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಿದ್ದು, ರೈಲ್ವೆ ಇಲಾಖೆ ಅದಕ್ಕೆ ಅನುಮೋದನೆ ನೀಡಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+