Indian railways: ದೇಶದ 8 ಪಾರಂಪರಿಕ ತಾಣಗಳಿಗೆ 35 ಹೈಡ್ರೋಜನ್ ಚಾಲಿತ ರೈಲು ಸಂಚಾರ: ಯಾವಾಗ? ಮಾರ್ಗಗಳ ಮಾಹಿತಿ

ನವದೆಹಲಿ, ಆಗಸ್ಟ್ 13: ಭಾರತೀಯ ರೈಲ್ವೇ ಇಲಾಖೆಯು ಸುದೀರ್ಘ ಕಾರ್ಯಸಾಧ್ಯತೆಯ ಅಧ್ಯಯನದ ನಂತರ ಪರಿಸರ ಸ್ನೇಹಿ ಇಂಧನ ಬಳಕೆಗಾಗಿ 'ಹೈಡ್ರೋಜನ್ ಫಾರ್ ಹೆರಿಟೇಜ್' ಎಂಬ ಯೋಜನೆಯಡಿ ಕೆಲಸ ಮಾಡಲು ಆರಂಭಿಸಿದೆ.

ಇದರ ಅಡಿಯಲ್ಲಿ ಪಾರಂಪರಿಕ ಎಂಟು ತಾಣಗಳಿಗೆ ಹೈಡ್ರೋಜನ್ ರೈಲುಗಳಿಗೆ ಖರೀದಿಗೆ ಪ್ರಸ್ತಾವನೆ ಸಲ್ಲಿಸಿದೆ.

Indian Railway Will Start 35 Hydrogen Powered Trains To 8 Heritage Routes Of Country

ಭಾರತೀಯ ರೈಲ್ವೆಇಯು ಈ ಪರಿಸರ ಸ್ನೇಹಿ ಕ್ರಮವನ್ನು ಸಾಧಿಸುವ ಮೂಲಕ ದೇಶದ ಪ್ರವಾಸೋದ್ಯಮದಲ್ಲಿ ಮೈಲಿಗಲ್ಲು ಸಾಧಿಸಲಿದೆ. ಪರಿಸರ ಸೂಕ್ಷ್ಮ ಗುಡ್ಡಗಾಡು ಪ್ರದೇಶಗಳಲ್ಲಿ ನೀರಿನ ಮಾರ್ಗಗಳಲ್ಲಿ ಹೈಡ್ರೋಜನ್ ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ.

2022-23ರ 17ನೇ ಲೋಕಸಭೆಯ ರೈಲ್ವೇ ಸ್ಥಾಯಿ ಸಮಿತಿಯು ವರದಿಯಲ್ಲಿ ಪ್ರತಿ ರೈಲಿಗೆ 80 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 35 ಹೈಡ್ರೋಜನ್ ರೈಲುಗಳನ್ನು ಓಡಿಸಲು ಯೋಜನೆ ರೂಪಿಸಿದೆ. ಈ ಸಂಬಂಧ ಪ್ರಸ್ತಾಪನೆ ಇಟ್ಟಿದ್ದು, ಒಂದೊಂದು ರೈಲು ಮಾರ್ಗಗಗಳಿಗೆ 70 ಕೋಟಿ ರೂ.ವೆಚ್ಚವಾಗಬಹುದೆಂದು ಅಂದಾಜು ಮಾಡಿದೆ.

ಬಹುಕೋಟಿ ವೆಚ್ಚದ ಯೋಜನೆ

ಸಮಿತಿ ವರದಿ ಪ್ರಕಾರ, ಪ್ರಸ್ತುತ ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್‌ಗಳಲ್ಲಿ (DIMU) ಹೈಡ್ರೋಜನ್ ಇಂಧನ ಕೋಶದ ರೆಟ್ರೋ ಫಿಟ್‌ಮೆಂಟ್‌ಗಾಗಿ ಪೈಲಟ್ ಯೋಜನೆಯಾಗಿ, ನೆಲದ ಮೂಲಸೌಕರ್ಯ ಸಹಿ ಯೋಜನೆಗಳ ಅನುಷ್ಠಾನಕ್ಕಾಗಿ ರೈಲ್ವೆ ವಲಯವೊಂದು ಸುಮಾರು 111.83 ಕೋಟಿ ರೂಪಾಯಿಯ ಕಾರ್ಯಕ್ರಮ ರೂಪಿಸಲಾಗಿದೆ. ಈ ಯೋಜನೆ ಒಮ್ಮೆ ಕಾರ್ಯರೂಪಕ್ಕೆ ಬಂದರೆ ಪರಿಸರ ಸ್ನೇಹಿ, ಸುಸ್ಥಿರತೆ ವಿಚಾರದಲ್ಲಿ ಭಾರತವು ಮತ್ತೊಂದು ಸ್ಥಾನಕ್ಕೆ ತಲುಪಲಿದೆ ಎಂದು ಭಾರತೀಯ ರೈಲ್ವೆ ವಿಶ್ವಾಸ ವ್ಯಕ್ತಪಡಿಸಿದೆ.

Indian Railway Will Start 35 Hydrogen Powered Trains To 8 Heritage Routes Of Country

ಈ ಹೈಡ್ರೋಜನ್ ರೈಲುಗಳು ಭವಿಷ್ಯದಲ್ಲಿ ಎಂಟು ಪಾರಂಪರಿಕ ತಾಣಗಳಾದ "ಮಾಥೆರಾನ್ ಹಿಲ್, ಡಾರ್ಜಿಲಿಂಗ್ ಹಿಮಾಲಯ, ಕಲ್ಕಾ ಶಿಮ್ಲಾ, ಕಾಂಗ್ರಾ ಕಣಿವೆ, ಬಿಲ್ಮೋರಾ ವಾಘೈ, ಪಾತಪಲ್ಪಾನಿ ಕಲಾಕುಂಡ್, ನೀಲಗಿರಿ ಮೌಂಟೇನ್ ರೈಲ್ವೇಸ್ ಮತ್ತು ಮಾರ್ವಾರ್-ಗೋರಂ ಘಾಟ್' ಗೆ ಸಂಚಾರ ನಡೆಸಲಿವೆ. ಮುಂದಿನ ವರ್ಷ ಜೂನ್‌ಗೆ ಪ್ರಾಯೋಗಿಕ ಯೋಜನೆ ಆರಂಭವಾಗಲಿದೆ.

ರೈಲ್ವೆ ಇಲಾಖೆಯ ಈ ಯೋಜನೆ ಮೆಚ್ಚಿರುವ ಸಮಿತಿಯು, ರೈಲ್ವೇ ಕೂಡ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಿ, ಯೋಜನೆ ಜಾರಿಗೆ ಕಾರ್ಯನಿರ್ವಹಿಸಲು ಸಜ್ಜಾಗುವಂತೆ ಸೂಚಿಸುವ ಮೂಲಕ ಗ್ರೀನ್ ಸಿಗ್ನಲ್ ನೀಡಿದೆ. ಪೂಣ್ ಮಾಹಿತಿ ದೊರೆಯಬೇಕಿದೆ.

2024 ಜೂನ್ ಪ್ರಾಯೋಗಿಕ ಯೋಜನೆ ಆರಂಭ

ಈ ಯೋಜನೆ ಆರಂಭಿಕ ಕೆಲಸಗಳು 2024 ಜೂನ್ ತಿಂಗಳಿನಿಂದ ಆರಂಭವಾಗಲಿದೆ. ಭಾರತೀಯ ರೈಲ್ವೇಯು ಹೈಡ್ರೋಜನ್ ಇಂಧನ ಕೋಶದಿಂದ ವಿದ್ಯುತ್ ಇಂಧನ ಕೋಶ ಆಧಾರಿತ ಪ್ರೊಪಲ್ಷನ್ ಸಿಸ್ಟಮ್ ರೈಲು ಸೆಟ್ ಅನ್ನು ಯೋಜಿಸಲಾಗಿದೆ ಎಂದು ಇತ್ತೀಚೆಗೆ ಸಂಸತ್‌ಗೆ ಸಲ್ಲಿಕೆಯಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟು ಖರೀದಿ ಉದ್ದೇಶಿತ 35 ರೈಲು-ಸೆಟ್ ರೇಕ್‌ಗಳು, ಪ್ರತಿಯೊಂದೂ ಆರು ಬೋಗಿಗಳನ್ನು ಹೊಂದಿವೆ. ಎಂಟು ಪಾರಂಪರಿಕ ಮಾರ್ಗಗಳಿಗಾಗಿ ರೋಲಿಂಗ್ ಸ್ಟಾಕ್ ಕಾರ್ಯಕ್ರಮವನ್ನು ಇದೇ ವರ್ಷ ಮಂಜೂರು ಮಾಡಲಾಗಿದೆ. ತಲಾ 6 ಬೋಗಿಗಳ ಒಟ್ಟು 35 ರೈಲುಗಳು 8 ಪಾರಂಪರಿಕ ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲವೂ ಅಂತಿಮಗೊಂಡ ಬಳಿಕ ಇನ್ನಷ್ಟು ಮಾಹಿತಿ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+