Reels Ban: ರೈಲ್ವೆ ಸ್ಟೇಷನ್ ಸೇರಿ ಎಲ್ಲೆಂದರಲ್ಲಿ ರೀಲ್ಸ್ ವಿಡಿಯೋ ಮಾಡುವವರೇ ಎಚ್ಚರ, ಜೈಲು ಗ್ಯಾರಂಟಿ!

Reels Video Ban: ಮೊಬೈಲ್, 4ಜಿ ಇಂಟರ್‌ನೆಟ್ ಬಂದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರು ಆಕ್ಟಿವ್ ಆಗಿಬಿಟ್ಟಿದ್ದಾರೆ. ಅದರಲ್ಲೂ ಕೆಲವರು ವಿವ್ಸ್ ಹೆಚ್ಚು ಪಡೆಯುವ ಗೀಳಿಗೆ ಬೀದ್ದವರಂತೆ ಆಡುತ್ತಾರೆ. ಅಂತವರಲ್ಲಿ ಕೆಲವರು ತಮ್ಮ ದಿನದಿತ್ಯ ಖಾಸಗಿ ಬದುಕಿನ ಎಲ್ಲ ವಿಷಯಗಳನ್ನು ರೀಲ್ಸ್ ವಿಡಿಯೋ ಮಾಡಿ ಪೋಸ್ಟ್ ಮಾಡಿ ವಿವ್ಸ್ ಗಳಿಸುತ್ತಾರೆ. ಇವರದ್ದ ಒಂದು ವರ್ಗವಾದರೆ, ಗೊತ್ತಿಲ್ಲದ ವಿಷಯ, ಸ್ಥಳ, ಇತಿಹಾಸ, ಅರಿವು ಮೂಡಿಸಲು ಉತ್ತಮ ರೀಲ್ಸ್ ಮಾಡುವ ವರ್ಗ ಮತ್ತೊಂದು.

ಹೀಗೆ ರೀಲ್ಸ್ ಮಾಡುವವರ ಪೈಕಿ ಕೆಲವರಂತೂ ಎಲ್ಲೆ ಮೀರಿ ಬಿಟ್ಟಿರುತ್ತಾರೆ. ಬೇರೆಯವರೆಗೆ ತೊಂದರೆ ಆದರೂ ಪರವಾಗಿಲ್ಲ ಎಲ್ಲೆಂದರಲ್ಲಿ ಮೊಬೈಲ್ ಕೈಲಿ ಹಿಡಿದು ರೀಲ್ಸ್ ಮಾಡುತ್ತಾ ನಿಂತರೆ ಮುಗಿಯಿತು. ಇದರಿಂದ ಯುವ ಸಮೂಹ ಅದೆಷ್ಟೋ ಭಾರಿ ಅಪಾಯ ತಂದುಕೊಂಡಿದ್ದು ಇದೆ. ಇಂತಹ ರೀಲ್ಸ್ ಮಾಡುವುದನ್ನು ಕೆಲವು ಸ್ಥಳಗಳಲ್ಲಿ ಬ್ಯಾನ್ ಮಾಡಲು ಚಿಂತನೆ ನಡೆದಿದೆ.

Indian Railway will Action against Who Make Reels in Railway Station and Trains

ಈ ಪೈಕಿ ಭಾರತೀಯ ರೈಲ್ವೆ ನಿಲ್ದಾಣಗಳಲ್ಲಿ, ರೈಲುಗಳಲ್ಲಿ ನೀವು ಈಗಾಗಲೇ ರೀಲ್ಸ್ ಮಾಡಿದ್ದರೂ ಡಿಲೀಟ್ ಮಾಡಿಬಿಡಿ. ಇನ್ಮುಂದೆ ಇಲ್ಲೆಲ್ಲ ರೀಲ್ಸ್ ಮಾಡುವಂತಿಲ್ಲ. ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗುತ್ತದೆ ಎಂದು ರೀಲ್ಸ್ ಮಾಡುವವರ ವಿರುದ್ಧ ರೈಲ್ವೆ ರಕ್ಷಣಾ ಪಡೆ (RPF) ಮತ್ತು ಸರ್ಕಾರಿ ರೈಲ್ವೆ ಪೊಲೀಸ್ (GRP) ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ರೀಲ್ಸ್ ವಿಡಿಯೋ ಮಾಡುವಾಗ ಜೀವಕ್ಕೆ ಅಪಾಯ!

ರೈಲ್ವೆ ಟ್ರ್ಯಾಕ್‌ ಮೇಲೆ, ನಿಲ್ದಾಣ, ಬ್ರಿಡ್ಜ್, ಚಲಿಸುವ ರೈಲಿನ ಬಾಗಿಲ ಬಳಿಕ, ರೈಲು ಹಳಿ ಪಕ್ಕ ಹೀಗೆ ಎಲ್ಲೆಂದರಲ್ಲಿ ಮೊಬೈಲ್ ಹಿಡಿದು ರೀಲ್ಸ್‌ ನಲ್ಲಿ ಮಗ್ನವಾದಾಗ ಅವರ ಜೀವಕ್ಕೆ ಅಪಾಯವು ಇರುತ್ತದೆ. ಇಂತಹ ಘಟನೆಗಳನ್ನು ಈಗಾಗಲೇ ನೋಡಿರುತ್ತೇವೆ. ಮುಂದೆ ಇಂತಹ ಅವಘಡಗಳಿಗೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ರೈಲ್ವೆ ಅಧಿಕಾರಿಗಳು ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ರೀಲ್ಸ್ ವಿಡಿಯೋ ನಿಷೇಧಿಸಿದೆ. ಒಂದು ವೇಳೆ ಮಾಡಿದರೆ ಅಂತವರು ಜೈಲು ಸೇರಬಹುದು ಎನ್ನಲಾಗುತ್ತಿದೆ.

Indian Railway will Action against Who Make Reels in Railway Station and Trains

ನಿಯಮ ಮೀರಿದರೆ ಬಂಧನ ಸಾಧ್ಯತೆ

ಉತ್ತಮ ರೀಲ್ಸ್ ಮಾಡಿದರೆ ಯಾರು ನೋಡಲ್ಲ ಎಂದುಕೊಂಡು ಕೆಲವರು ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಇದೇ ಅವರ ಜೀವಕ್ಕೆ ಮುಳುವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಕರ್ತವ್ಯಕ್ಕೆ ಅಡ್ಡಿಪಡಿಸಿ ವಿಡಿಯೋ ಮಾಡುವ ಹುಚ್ಚಾಟ ಕಂಡು ಬಂದರೆ ಬಂಧಿಸಲೂಬಹುದು.

ರೀಲ್ಸ್ ಪೋಸ್ಟ್ ಆದ ಮೇಲೂ ಕಠಿಣ ಕ್ರಮ

ಒಂದು ವೇಳೆ ಅಧಿಕಾರಿಗಳು ನೋಡಿಲ್ಲ ಎಂದು ನೋವು ರೀಲ್ಸ್ ಮಾಡಿ, ಅಪ್ಲೋಡ್ ಮಾಡಿದರೆ, ಆ ವಿಡಿಯೋಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಪೋಸ್ಟ್ ಆಗಿದ್ದು ಯಾವಾಗ?, ಅಪ್ಲೋಡ್ ಆಗಿದ್ದ, ಯಾವ ನಿಲ್ದಾಣ, ರೈಲು ಎಂದು ನೋಡಿ ನಂತರವೂ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ರೈಲ್ವೆ ಅಭಿಪ್ರಾಯಪಟ್ಟಿದೆ. ಈ ಕುರಿತು ಶೀಘ್ರವೇ ಆದೇಶ ಬಂದರೂ ಅಚ್ಚರಿ ಪಡಬೇಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+