Indian Railway accidents: ಪ್ರಯಾಣಿಕರ ಸುರಕ್ಷತೆ ಮಧ್ಯೆ ರೈಲ್ವೆ ಅಪಘಾತಗಳು ಏರಿಕೆ, ಅಂಕಿ-ಸಂಖ್ಯೆ ಮಾಹಿತಿ ಇಲ್ಲಿದೆ
ನವದೆಹಲಿ, ನವೆಂಬರ್ 28: ಭಾರತದಾದ್ಯಂತ ರೈಲ್ವೆ ಜಾಲದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಂಡು ಬಂದಿದೆ. ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಇಲಾಖೆ ಗಮನ ಹರಿಸಿದರೂ ಸಹಿತ ಈ ದುರಂತಗಳು ನಡೆದಿವೆ. ನೂರಾರು ಜೀವಗಳು ಹಾನಿಯಾಗಿದೆ. ಈ ಪೈಕಿ ಒಂದು ವರ್ಷದ ಹಿಂದಿನ ಸಾಲಿನಲ್ಲಿ ರೈಲ್ವೆ ಅಪಘಾತಗಳ ಸಂಖ್ಯೆ ತುಸು ಏರಿಕೆ ಆಗಿದೆ. ಅದರ ಮಾಹಿತಿ ಇಲ್ಲಿದೆ.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಹೊರತಾಗಿಯೂ, ಭಾರತೀಯ ರೈಲ್ವೇ ತನ್ನ ಸಂಪೂರ್ಣ ನೆಟ್‌ವರ್ಕ್‌ನಾದ್ಯಂತ 2020-21 ಕ್ಕೆ ಹೋಲಿಸಿದರೆ 2021-22 ರಲ್ಲಿ ಪರಿಣಾಮವಾಗಿ ಅಪಘಾತಗಳ ಹೆಚ್ಚಳವನ್ನು ಕಂಡಿದೆ. ಇದರ ಪರಿಣಾಮವಾಗಿ ಕೋಟ್ಯಂತರ ರೂಪಾಯಿ ಹಾನಿಯಾಗಿದೆ.

ಹಣ ಮಾತ್ರವಲ್ಲದೇ ಜರುಗಿದ ರೈಲು ದುರಂತಗಳಿಂದ ನೂರಾರು ಜನರ ಜೀವಗಳಿಗೆ ಹಾನಿ ಆಗಿದೆ. ಅನೇಕ ಮಂದಿ ಗಾಯಗೊಂಡಿದ್ದಾರೆ. ರೈಲ್ವೆ ಆಸ್ತಿಯ ನಷ್ಟವಾಗಿದೆ, ಅಫಘಾತವಾದಾಗ ಇತರ ರೈಲು, ಪ್ರಯಾಣಿಕರ ಓಡಾಟಕ್ಕೆ ತೊಂದರೆ ಆಗಿದೆ ಎಂದು TNIE ವರದಿ ಮಾಡಿದೆ.
ಹಳಿತಪ್ಪಿ ನಡೆದ ಅಪಘಾತಗಳ ಮಾಹಿತಿ
ಲಭ್ಯ ಅಧಿಕೃತ ಅಂಕಿಅಂಶಗಳ ಪ್ರಕಾರ, 2020-21ರಲ್ಲಿ 21 ಅಪಘಾತಗಳು ಸಂಭವಿಸಿದ್ದರೆ, 2021-22ರಲ್ಲಿ ಒಟ್ಟು 35 ಪರಿಣಾಮವಾಗಿ ರೈಲು ಅಪಘಾತಗಳು ಸಂಭವಿಸಿವೆ. ಇನ್ನೂ ವಿವರವಾಗಿ ನೋಡುವುದಾದರೆ 2021-22ರಲ್ಲಿ 26 ಹಳಿತಪ್ಪಿದ ಘಟನೆಗಳು ನಡೆದಿವೆ. 2020-21 ರಲ್ಲಿ 16 ರೈಲುಗಳು ಹಳಿತಪ್ಪಿ ಅಪಘಾತ ಸಂಭವಿಸಿದ್ದವು.
2020-21ರಲ್ಲಿ ಒಂದು ಘರ್ಷಣೆ (ಡಿಕ್ಕಿ) ವರದಿಯಾಗಿದ್ದರೆ, 2021-22ರಲ್ಲಿ ಎರಡು ಘರ್ಷಣೆ ಸಂಭವಿಸಿದೆ. 2020-21ರಲ್ಲಿ ರೈಲುಗಳಲ್ಲಿ ಮೂರು ಬೆಂಕಿಯ ಘಟನೆಗಳು ವರದಿ ಆಗಿದ್ದು, 2021-22ರಲ್ಲಿ ರೈಲಿಗೆ ಬೆಂಕಿ ತಗುಲಿದ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದ್ದವು.
ರೈಲ್ವೆ ಸಿಬ್ಬಂದಿಯಿಂದಾ ತಪ್ಪಿಗೆ ಅನಾಹುತ
ಕಾರಣಗಳಲ್ಲಿ, ಅಪಘಾತಗಳು ಮತ್ತು ಹಳಿತಪ್ಪುವಿಕೆಗಳಿಗೆ ಕಾರಣವಾಗುವ ರೈಲ್ವೆ ಸಿಬ್ಬಂದಿಯ ಕಡೆಯಿಂದ 2021-22 ರಲ್ಲಿ 20 ಕ್ಕೆ ಏರಿದೆ, 2020-21 ರಲ್ಲಿ ಅಂತಹ 16 ಪ್ರಕರಣಗಳು 2021-22 ರಲ್ಲಿ ನಾಲ್ಕು ಉಪಕರಣಗಳ ವೈಫಲ್ಯದ ಪ್ರಕರಣಗಳು ವರದಿಯಾಗಿವೆ.

2020-21ರಲ್ಲಿ ಒಂದೇ ಒಂದು ವಿಧ್ವಂಸಕ ಘಟನೆ ವರದಿ ಆಗಿಲ್ಲ. ಆದರೆ 2021-22ರಲ್ಲಿ ಒಂದು ವಿಧ್ವಂಸಕ ಘಟನೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಎರಡು ಅಪಘಾತಗಳಲ್ಲಿ ಕಾರಣವನ್ನು ಇನ್ನೂ ಸ್ಥಾಪಿಸಲಾಗಿಲ್ಲ ಅಥವಾ ಯಾವುದನ್ನೂ ಹೊಣೆಗಾರರನ್ನಾಗಿ ಮಾಡಲಾಗಿಲ್ಲ ಎಂಬುದೇ ವಿಶೇಷ.
2021-22ರ ಅಪಘಾತದಲ್ಲಿ ಸಾವಿನ ಸಂಖ್ಯೆ
ಮುಖ್ಯವಾಗಿ 2021-22ರಲ್ಲಿ ನಡೆದ ಅಫಘಾತಗಳಲ್ಲಿ ಒಟ್ಟು ಸುಮಾರು 09 ಜನರು ಪ್ರಾಣ ಕಳೆದುಕೊಂಡಿದ್ದಾರೆ. 45 ಜನರು ಗಾಯಗೊಂಡಿದ್ದಾರೆ. ಆದರೆ 2020-21ರಲ್ಲಿ ಯಾವುದೇ ಜೀವಹಾನಿ ಅಥವಾ ಗಾಯಗಳು ವರದಿಯಾಗಿಲ್ಲ. 2021-22ರಲ್ಲಿ ಸಂತ್ರಸ್ತರಿಗೆ ಅಥವಾ ಮುಂದಿನ ಸಂಬಂಧಿಕರಿಗೆ ಪ್ರಯಾಣಿಕರ ಸಾವು ಅಥವಾ ಗಾಯಕ್ಕಾಗಿ ಭಾರತೀಯ ರೈಲ್ವೇ ಕಾಯಿದೆ, 1990 ರ ಸೆಕ್ಷನ್ 124 ರ ಅಡಿಯಲ್ಲಿ ರೈಲ್ವೆಯು 85.88 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸಿಲಾಗಿದೆ. ಇಂತದ್ದೆ ಪ್ರಕರಣಗಳಲ್ಲಿ 2020-21ರಲ್ಲಿ 104.38 ಕೋಟಿ ರೂಪಾಯಿ ಹಣ ಪಾವತಿಸಲಾಗಿದೆ.
2021-22ರಲ್ಲಿ ಸಂಭವಿಸಿದ ಅಪಘಾತಗಳ ಹೆಚ್ಚಳವು 2021-22ರಲ್ಲಿ 3,915.15 ಲಕ್ಷ ರೂಪಾಯಿ ಮೌಲ್ಯದ ರೋಲಿಂಗ್ ಸ್ಟಾಕ್‌ಗಳಿಗೆ ಹಾನಿ ಉಂಟಾಗಿದ. ಅದೇ 2020-21ರಲ್ಲಿ 1,765.85 ಲಕ್ಷ ರೂಪಾಯಿ ಹಾನಿ ಆಗಿದೆ ಎಂದು ವರದಿ ಆಗಿದೆ.












Click it and Unblock the Notifications