Rain Alert: ಈ ಭಾಗಗಳಲ್ಲಿ ಜೂನ್ 24ರವರೆಗೆ ಭಾರೀ ಮಳೆ: ರೆಡ್ ಅಲರ್ಟ್, ಹವಾಮಾನ ಮುನ್ಸೂಚನೆ

IMD Weather Forecast: ಮುಂಗಾರು ಮಳೆ ಆರ್ಭಟ ಸದ್ಯಕ್ಕೆ ಕಡಿಮೆ ಆಗುವಂತೆ ಕಾಣುತ್ತಿಲ್ಲ. ದಿನ ಬಿಟ್ಟು ದಿನ ಒಂದೊಂದು ಭಾಗದಲ್ಲಿ ಅತ್ಯಧಿಕ ಭಾರೀ ಮಳೆ ಆಗುತ್ತಿದೆ. 'ರೆಡ್ ಅಲರ್ಟ್' ಸಹ ನೀಡಲಾಗಿದೆ. ಹವಾಮಾನ ಇಲಾಖೆ ಪ್ರಕಾರ, ಮುಂದಿನ ಮೂರು ದಿನಗಳ ಕಾಲ 200 ಮಿಲಿ ಮೀಟರ್‌ಗೂ ಹೆಚ್ಚಿನ ಮಳೆ ಆಗಲಿದೆ. ಜೂನ್‌ಗೂ ಒಂದು ವಾರ ಮುನ್ನ ಬಂದ ಮಳೆಯು ಇನ್ನೂವರೆಗೆ ಮುಂದುವರಿದಿದೆ.

ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಮುಂಗಾರು ಆರ್ಭಟ ಮುಂದುವರಿದಿದೆ. ಕರ್ನಾಟಕದಲ್ಲಿ ಕಡಿಮೆ ಆಗಿರುವ ಮುಂಗಾರು ಇಂದು (ಜೂನ್ 21) ಗುಜರಾತ್‌ನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಸುತ್ತಿದ್ದು, ಅಲ್ಲಿ ರೆಡ್ ಅಲರ್ಟ್ ನೀಡಲಾಗಿದೆ. ಅದರೊಂದಿಗೆ ಅಸ್ಸಾಂ, ಮೇಘಾಲಯ, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಸಹ ಮುಂದಿನ ಮೂರು ದಿನ ಭಾರೀ ಮಳೆ ಆಗಲಿದ್ದು, 'ಆರೆಂಜ್ ಅಲರ್ಟ್' ನೀಡಲಾಗಿದೆ.

Indian Meteorological Department Predicts Heavy Rainfall in These States Next 3 Days Red Alert

ಅರಬ್ಬಿ ಸಮುದ್ರದ ಗುಜರಾತ್ ಭಾಗದಲ್ಲಿ ಹಾಗೂ ರಾಜಸ್ಥಾನ, ಬಿಹಾರದ ಕೆಲವು ಭಾಗಗಳಲ್ಲಿ ಸೈಕ್ಲೋನಿಕ್ ಸರ್ಕುಲೇಷನ್ (ಚಂಡಮಾರುತ ಪ್ರಸರಣ) ಉಂಟಾಗಿದೆ. ಇದರ ಗಾಳಿಯ ವೇಗವು ಪ್ರತಿ ಗಂಟೆಗೆ 50 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿದೆ. ಈ ಕಾರಣದಿಂದ ಉತ್ತರ ಭಾರತದ ಕೆಲವೆಡೆ ಧಾರಕಾರ ಮಳೆ ಆಗುತ್ತಿದೆ ಎಮದು ಹವಾಮಾನ ಇಲಾಖೆ ವಿಜ್ಞಾನಿಗಳು ವರದಿಯಲ್ಲಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಮಳೆ ಬರಲಿದೆ? ಮುನ್ಸೂಚನೆ

ಉತ್ತರ ಭಾರತದ ರಾಜ್ಯಗಳಲ್ಲಿ ಕಳೆದ ಮೂರು ವಾರಗಳಿಂದ ಮಳೆ ಸುರಿಸುವ ಮಾರುತಗಳ ಸಕ್ರಿಯವಾಗಿವೆ. ಮಣಿಪುರ, ಅರುಣಾಚಲಯ ಪ್ರದೇಶ, ಮೇಘಾಲಯ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಗೆ ಪ್ರಭಾವ, ಜನ ಜೀವಕ್ಕೆ ಹಾನಿಯಾಗಿದೆ. ಗುಡ್ಡ ಕುಸಿತ ಸಂಭವಿಸಿತ್ತು. ಇದೀಗ ಮಳೆ ಅದೇ ಭಾಗದಿಂದ ವಿವಿಧ ರಾಜ್ಯಗಳಿಗೂ ವ್ಯಾಪಿಸಿದೆ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ಭಾಗಗಳಲ್ಲಿ ಮಳೆ ಇಳಿಕೆ ಆಗಿದೆ. ಅಲ್ಲಲ್ಲಿ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ.

ಜೂನ್ 22ರಂದು ಗೋವಾ ಮತ್ತು ಕೊಂಕಣ, ಹಿಮಾಚಲ ಪ್ರದೇಶ, ದೆಹಲಿ, ಮಧ್ಯ ಪ್ರದೇಶ, ಹರಿಯಾಣ, ನಾಗಾಲ್ಯಾಂಡ್ ಮಣಿಪುರ, ಮಿಜೋರಾಂ, ತ್ರಿಪುರ, ಪಶ್ಚಿಮ ಬಂಗಾಳ, ಸಿಕ್ಕಿಂ, ಪಂಜಾಬ್, ಉತ್ತರಾಖಂಡ ಸೇರಿದಂತೆ ಇನ್ನೂ ವಿವಿಧೆಡೆ ಜೋರು ಗಾಳಿ ಸಮೇತ ಭಾರೀ ಮಳೆ ಆಗಲಿದೆ. ಈ ವೇಳೆ ಗಾಳಿಯ ವೇಗ 40 ರಿಂದ 50 ಕಿಲೋ ಮೀಟರ್ ವರೆಗೆ ವಿಸ್ತರಣೆ ಆಗಲಿದೆ.

ಜೂನ್ 23ಕ್ಕೆ ಮತ್ತೆ ಭಾರೀ ಮಳೆ ಎಚ್ಚರಿಕೆ: ರೆಡ್ ಅಲರ್ಟ್

ಜೂನ್ 23 ರಂದು (ಸೋಮವಾರ) ಗುಜರಾತ್‌ನಲ್ಲಿ ಮಳೆ ಕಡಿಮೆ ಆಗಲಿದ್ದು, ಮಧ್ಯ ಪ್ರದೇಶದಲ್ಲಿ ವಿಪರೀತ ಮಳೆ ಆಗಲಿದ್ದು ಐಎಂಡಿ ಅಂದು ರೆಡ್ ಅಲರ್ಟ್ ನೀಡಿದೆ. ಇದರೊಂದಿಗೆ ಗುಜರಾತ್, ರಾಜಸ್ಥಾನ ಪೂರ್ವ ಭಾಗ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವ್ಯಾಪಕ ಮಳೆ ಆಗಲಿದ್ದು, ಯೆಲ್ಲೋ ಎಚ್ಚರಿಕೆ ಕೊಡಲಾಗಿದೆ. ಮುಂದಿನ ಮೂರು ದಿನ ಇಲ್ಲವೇ ನಾಲ್ಕು ದಿನಗಳ ಕಾಲ ಇದೇ ರೀತಿ ವಾತಾವರಣ ಮುಂದುವರಿಯಲಿದೆ.

ಇನ್ನು ಕರ್ನಾಟಕದಲ್ಲಿ ಇದೇ ಸೋಮವಾರ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮಳೆ ಕೊಂಚ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆಯು (IMD) ಶನಿವಾರ ನೀಡಿದ ಹವಾಮಾನ ಇಲಾಖೆಯ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+