ದೇಶದಲ್ಲಿ 67 ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ ಸರ್ಕಾರ
ನವದೆಹಲಿ, ಸೆ.29: ದೇಶದಲ್ಲಿ ಅಶ್ಲೀಲ ವೆಬ್‌ಸೈಟ್‌ಗಳನ್ನು ನಿಷೇಧಿಸಲು ಭಾರತ ಸರ್ಕಾರ ತನ್ನ ಪ್ರಯತ್ನಗಳನ್ನು ಬಿಗಿಗೊಳಿಸಿದೆ. 2021 ರಲ್ಲಿ ಹೊರಡಿಸಲಾದ ಹೊಸ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ ದೇಶದಲ್ಲಿ 67 ಹೆಚ್ಚುವರಿ ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಕಂಪನಿಗಳಿಗೆ ತಿಳಿಸಲಾಗಿದೆ.
ಈ ಬಗೆಗಿನ ಇತ್ತೀಚಿನ ಆದೇಶವನ್ನು ದೂರಸಂಪರ್ಕ ಇಲಾಖೆ (DoT) ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಆದೇಶವು 63 ವೆಬ್‌ಸೈಟ್‌ಗಳನ್ನು ಉಲ್ಲೇಖಿಸಿದ್ದರೆ, ಉತ್ತರಾಖಂಡ ಹೈಕೋರ್ಟ್‌ನ ಆದೇಶ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊರಡಿಸಿದ ನಿರ್ದೇಶನಗಳ ಆಧಾರದ ಮೇಲೆ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲಾಗಿದೆ.
ದೇಶದಲ್ಲಿ ನಿರ್ಬಂಧಿಸಲಾದ ಹಿಂದಿನ ವೆಬ್‌ಸೈಟ್‌ಗಳ ಜೊತೆಗೆ, ಈ ಹೊಸ ವೆಬ್‌ಸೈಟ್‌ಗಳು ಕೂಡ ಶೀಘ್ರದಲ್ಲೇ ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು ಇತ್ಯಾದಿಗಳಲ್ಲಿ ಓಪನ್ ಆಗುವುದಿಲ್ಲ. ಆದೇಶದ ಪ್ರಕಾರ, ವೆಬ್‌ಸೈಟ್‌ಗಳನ್ನು ನಿಷೇಧಿಸುವ ಹೊಸ ಐಟಿ ನಿಯಮಗಳು 2021 ರ ಅಡಿಯಲ್ಲಿ ಇವುಗಳನ್ನು ನಿಷೇಧಿಸಲಾಗಿದೆ.

2018 ರಲ್ಲಿ, ಉತ್ತರಾಖಂಡ ಹೈಕೋರ್ಟ್‌ನ ಆದೇಶದ ನಂತರ ಸರ್ಕಾರವು ಸುಮಾರು 827 ಪೋರ್ನ್ ವೆಬ್‌ಸೈಟ್‌ಗಳನ್ನು ನಿಷೇಧಿಸಿತ್ತು. ಆ ಸಮಯದಲ್ಲಿ, ಉತ್ತರಾಖಂಡ್ ಹೈಕೋರ್ಟ್ 857 ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಸರ್ಕಾರಕ್ಕೆ ತಿಳಿಸಿದಾಗ ಅದರಲ್ಲಿ 30 ಪೋರ್ಟಲ್‌ಗಳಲ್ಲಿ ಯಾವುದೇ ಅಶ್ಲೀಲ ವಿಷಯಗಳಿಲ್ಲ ಎಂಬುದನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಗಮನಿಸಿತ್ತು.
ಈ ನಿಷೇಧವು ಭಾರತದಲ್ಲಿ ನಿಷೇಧಿತ ಅಶ್ಲೀಲ ವೆಬ್‌ಸೈಟ್‌ಗಳ ಒಟ್ಟು ಸಂಖ್ಯೆಯನ್ನು 900 ಸಮೀಪಕ್ಕೆ ಬಂದಿದೆ. ಆ ಸಮಯದಲ್ಲಿ ನಿಷೇಧಕ್ಕೆ ಒಳಗಾದ ಪಟ್ಟಿಯಲ್ಲಿರುವ ಅತ್ಯಂತ ಪ್ರಮುಖವಾದ ಹೆಸರು ಸಹಜವಾಗಿ Pornhub.com ಆಗಿತ್ತು, ಇದು ವಿಶ್ವದ ಅತಿದೊಡ್ಡ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಒಂದಾಗಿದೆ.
"ಭಾರತದಲ್ಲಿ ಅಶ್ಲೀಲತೆಯ ವಿರುದ್ಧ ಮತ್ತು ವಯಸ್ಕರ ವಿಷಯವನ್ನು ಖಾಸಗಿಯಾಗಿ ವೀಕ್ಷಿಸುವುದರ ವಿರುದ್ಧ ಯಾವುದೇ ಕಾನೂನುಗಳಿಲ್ಲ" ಎಂದು ಹಲವರು ಪುನರುಚ್ಚರಿಸಿದ್ದಾರೆ. ವಯಸ್ಕರ ವಿಷಯವನ್ನು ಹುಡುಕುವ ಭಾರತೀಯ ಬಳಕೆದಾರರು "ಕಾನೂನುಬಾಹಿರ ವಿಷಯವನ್ನು ಹೊಂದಿರುವ ಅಪಾಯಕಾರಿ ಪೋರ್ನ್ ಸೈಟ್‌ಗಳಿಗೆ" ಹೋಗುತ್ತಾರೆ ಎಂಬ ಭಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.
-
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
Gold Rate Today: ಮತ್ತೆ ಏರಿಕೆ ಕಂಡ ಚಿನ್ನದ ದರ: ಇಂದು 10 ಗ್ರಾಂ ಬಂಗಾರದ ಬೆಲೆ 1,58,620 ರೂಪಾಯಿ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್












Click it and Unblock the Notifications