ಪಾಕಿಸ್ತಾನದಲ್ಲೂ ಹಾರಾಡಿತು ಭಾರತದ ತ್ರಿವರ್ಣ ಧ್ವಜ
ನವದೆಹಲಿ, ಜನವರಿ, 27: ಪಾಕಿಸ್ತಾನದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಡಿದೆ. ಯಾಕೆ ಆಶ್ಚರ್ಯವಾಗುತ್ತಿದೆಯಾ? ಹೌದು ಕ್ರಿಕೆಟಿಗ ವಿರಾಟ್ ಕೊಹ್ಲಿಯ ಪಾಕಿಸ್ತಾನಿ ಅಭಿಮಾನಿಯೊಬ್ಬ ತನ್ನ ಮನೆ ಮೇಲೆ ಭಾರತದ ಧ್ವಜ ಹಾರಿಸಿದ್ದು ಆತನನ್ನು ಬಂಧಿಸಲಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕೊಹ್ಲಿ ಅಭಿಮಾನಿ ಉಮರ್ ಡ್ರಾಜ್ ಭಾರತದ ಧ್ವಜ ಹಾರಿಸಿದ್ದ. ಕೊಹ್ಲಿಯ ಕಟ್ಟಾ ಅಭಿಮಾನಿ ತನ್ನ ಪ್ರೀತಿಯನ್ನು ಭಾರತೀಯ ತ್ರಿವರ್ಣ ಧ್ವಜ ಹಾರಿಸುವ ಮೂಲಕ ವ್ಯಕ್ತಪಡಿಸಿದ್ದ. ಲಾಹೋರ್ ನಿಂದ 200ಕಿಲೋ ಮೀಟರ್ ದೂರದಲ್ಲಿರುವ ಪಂಜಾಬ್ ಪ್ರಾಂತ್ಯದ ಓಕಾರಾ ಜಿಲ್ಲೆಯಲ್ಲಿ ಧ್ವಜ ಹಾರಿಸಿದ್ದ ಎಂದು ಮಾಧ್ಯಮಗಳು ತಿಳಿಸಿವೆ.

ನಾವು ಉಮರ್ ಡ್ರಾಜ್ ಮನೆಗೆ ದಾಳಿ ನಡೆಸಿ, ಮನೆಯ ಮೇಲೆ ಹಾರಿಸಿದ್ದ ಭಾರತೀಯ ತ್ರಿವರ್ಣ ಧ್ವಜವನ್ನು ವಶಪಡಿಸಿಕೊಂಡಿದ್ದು ಆತನನ್ನು ಬಂಧಿಸಿದ್ದೇವೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 90 ರನ್ ಗಳಿಸಿ ಮಿಂಚಿದ್ದರು. ಪಂದ್ಯದಲ್ಲಿ ಭಾರತ ಆಸೀಸ್ ಗೆ ಸೋಲುಣಿಸಿತ್ತು. ಇದಾದ ಮೇಲೆ ಅಭಿಮಾನಿ ಬಾವುಟ ಹಾರಿಸಿದ್ದಾನೆ ಎನ್ನಲಾಗಿದೆ.












Click it and Unblock the Notifications