ದೋಷ ಕಂಡುಹಿಡಿದವಗೆ 10 ಲಕ್ಷ ಇನಾಮು ಕೊಟ್ಟ ಫೇಸ್ಬುಕ್
ಬೆಂಗಳೂರು, ಮಾರ್ಚ್, 09: ಸಾಮಾಜಿಕ ತಾಣ ಫೇಸ್ ಬುಕ್ ಸುರಕ್ಷಿತವೇ? ಇಂಥದ್ದೊಂದು ಪ್ರಶ್ನೆಯನ್ನು ಮತ್ತೆ ನಾವು ಕೇಳಿಕೊಳ್ಳಬೇಕಾಗಿದೆ. ಬೆಂಗಳೂರು ಮೂಲದ 22 ವರ್ಷದ ಕಂಪ್ಯೂಟರ್ ಪ್ರೋಗಾಮರ್ ಒಬ್ಬರು ಫೇಸ್ ಬುಕ್ ಬಗ್ ಅಥವಾ ದೋಷವನ್ನು ಕಂಡುಹಿಡಿದು ತಿಳಿಸಿದ್ದಲ್ಲದೇ 10 ಲಕ್ಷ ರು. ಬಹುಮಾನವನ್ನು ತಮ್ಮದಾಗಿರಿಸಕೊಂಡಿದ್ದಾರೆ.
ದೋಷ ಕಂಡುಹಿಡಿದವರಿಗೆ 10 ಲ್ಷ ರು. ನೀಡುತ್ತೇನೆ ಎಂದು ಹೇಳಿದ್ದ ಫೇಸ್ ಬುಕ್ ಸಹ ತನ್ನ ಮಾತನ್ನು ಉಳಿಸಿಕೊಂಡಿದೆ. ಫ್ಲಿಪ್ಕಾರ್ಟ್ ಸಂಸ್ಥೆಯಲ್ಲಿ ಭದ್ರತಾ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ್ ಪ್ರಕಾಶ್ ಫೇಸ್ ಬುಕ್ನ ಲಾಗ್ ಇನ್ ವೇಳೆ ಇದ್ದ ದೋಷವನ್ನು ಗುರುತಿಸಿದ್ದಾರೆ.[ಫೇಸ್ಬುಕ್, ಟ್ವಿಟ್ಟರ್ನಿಂದ ಡೈವೋರ್ಸ್ ತಗೊಳೋದು ಹೇಗೆ?]

ಫೇಸ್ ಬುಗ್ ಬಳಕೆದಾರರು ನಮೂದಿಸಿದ ಮಾಹಿತಿ, ಪೋಟೋ, ಡೆಬಿಟ್/ಕ್ರೆಡಿಟ್ ಕಾರ್ಡ್ನ ಮಾಹಿತಿ ಸೋರಿಕೆ ಆಗುತ್ತಿದ್ದು, ಸುಲಭವಾಗಿ ಹ್ಯಾಕರ್ಗಳು ಇದರ ಲಾಭ ಪಡೆಯಬಹುದಾಗಿದೆ ಎಂಬುದನ್ನು ವಿವರವಾಗಿ ಬಿಡಿಸಿಟ್ಟಿದ್ದಾರೆ.[ಮಗಳಿಗೆ ಬರೆದ ಪತ್ರದಲ್ಲಿ ಫೇಸ್‌ಬುಕ್ ಜನಕ ಹೇಳಿದ್ದೇನು?]
ಸಣ್ಣದೊಂದು ಸಾಫ್ಟ್ ವೇರ್ ಬಳಸಿ ಮಾಹಿತಿಯನ್ನು ಹೇಗೆ ಕಳ್ಳತನ ಮಾಡಬಹುದು ಎಂಬುದನ್ನು ತಿಳಿಸಿ ಕೊಟ್ಟಿದ್ದೇನೆ. ಕೇವಲ ಫೆಸ್ ಬುಕ್ ಮಾತ್ರವಲ್ಲದೇ ಟ್ವಿಟ್ಟರ್ ಸೇರಿದಂತೆ ಅನೇಕ ಸಾಮಾಜಿಕ ತಾಣಗಳ ದೋಷ ಕಂಡು ಹಿಡಿದು ನೀಡಿದ್ದೇನೆ. ಈ ಮೂಲಕ ಸುಮಾರು 1.2 ಕೋಟಿ ರು. ಹಣ ಸಂಪಾದನೆ ಮಾಡಿದ್ದೇನೆ ಎಂದು ಆನಂದ ಪ್ರಕಾಶ್ ಹೇಳಿದ್ದಾರೆ.












Click it and Unblock the Notifications