ಭಾರತ ರಕ್ಷಣಾ ಸಚಿವಾಲಯದ ವೆಬ್‌ಸೈಟ್ ಹ್ಯಾಕ್
ಭಾರತದ ರಕ್ಷಣಾ ಸಚಿವಾಲಯದ ವೆಬ್‌ಸೈಟ್ (mod.nic.in) ಹ್ಯಾಕ್ ಆಗಿದ್ದು, ವೆಬ್‌ಸೈಟ್ ತೆರೆದರೆ ಚೈನೀಸ್ ಅಕ್ಷರಗಳು ಕಾಣುತ್ತಿವೆ.
ರಕ್ಷಣಾ ಸಚಿವಾಲಯದ ವೆಬ್‌ಸೈಟ್ ದಾಳಿಗೆ ತುತ್ತಾಗಿರುವುದು ಎಲ್ಲೆಡೆ ಆತಂಕ ಮೂಡಿಸಿದೆ. ಚೈನೀಸ್ ಅಕ್ಷರಗಳು ವೆಬ್‌ಸೈಟ್‌ನ ಪುಟದಲ್ಲಿ ಮೂಡಿರುವ ಕಾರಣ ಇದು ಚೈನೀಸ್ ಕೃತ್ಯ ಎಂದು ಅಂದಾಜಿಸಬಹುದಾಗಿದೆಯಾದರೂ ಅಧಿಕೃತ ಮಾಹಿತಿ ಇನ್ನೂ ಲಭ್ಯವಿಲ್ಲ.

ವೆಬ್‌ಸೈಟ್ ಹ್ಯಾಕ್ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವೀಟ್ ಮಾಡಿದ್ದು, ವೆಬ್‌ಸೈಟ್ ಅನ್ನು ಆದಷ್ಟು ತ್ವರಿತವಾಗಿ ಪುನರ್ ಸ್ಥಾಪಿಸಲಾಗುತ್ತದೆ, ಈ ರೀತಿಯ ಘಟನೆ ಮರುಕಳಿಸದಂತೆ ಸಾಧ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದ ಎಂದಿದ್ದಾರೆ ಅವರು.












Click it and Unblock the Notifications