ವಿಡಿಯೋ: ನಿಮಿಷಕ್ಕೆ 240 ರಾಕೆಟ್ ಬಾಂಬ್ ಹಾರಿಸಿದ ಭಾರತೀಯ ಸೇನೆಯ ಬಿಎಂ-21
ನವದೆಹಲಿ, ಜೂನ್ 29: ಶತ್ರುಗಳ ಎದೆನಡುಗಿಸುವ ಆಯುಧವೊಂದರ ಪರೀಕ್ಷೆಯನ್ನು ಭಾರತೀಯ ಭೂ ಸೇನೆ ಇತ್ತೀಚೆಗಷ್ಟೆ ನಡೆಸಿ ಅದರ ವಿಡಿಯೋ ಬಿಡುಗಡೆ ಮಾಡಿದೆ.
ಬಿಎಂ-21 ಗ್ರಾಡ್ ಬ್ಯಾಟರಿ ಎಂಬ ಅತ್ಯಾಧುನಿಕ ರಾಕೆಟ್ ಬಾಂಬ್ ಲಾಂಚರ್ ಇದಾಗಿದ್ದು, ಅತ್ಯಂತ ಶಕ್ತಿ ಸಾಮರ್ಥ್ಯ ಮತ್ತು ನಿಖರತೆಯನ್ನು ಹೊಂದಿರುವ ಆಯುಧ ಇದಾಗಿದೆ.
ಇತ್ತೀಚೆಗಷ್ಟೆ ಸೇನೆಯು ಇದನ್ನು ನಾಸಿಕ್‌ನ ಡೊಲಾಲಿ ಎಂಬಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಕೇವಲ ಒಂದು ನಿಮಿಷಯದಲ್ಲಿ ಬರೋಬ್ಬರಿ 240 ರಾಕೆಟ್ ಬಾಂಬ್‌ಗಳನ್ನು ಅದು ಪುಂಖಾನುಪುಂಖವಾಗಿ ನಿಖರವಾದ ಗುರಿಗೆ ಎಸೆಯಲು ಯಶಸ್ವಿಯಾಗಿದೆ. ಆರು ಬಿಎಂ-21 ಗ್ರಾಡ್ ಬ್ಯಾಟರಿ ಲಾಂಚರ್‌ಗಳನ್ನು ಪರೀಕ್ಷಿಸಲಾಗಿದೆ.
ಪ್ರಯೋಗದ ವಿಡಿಯೋವಂತೂ ಶತ್ರುಗಳ ಎದೆ ನಡುಗಿಸುವಂತಿದೆ. ಸಾಲಾಗಿ ನಿಂತ ವಾಹನಗಳ ಬೆನ್ನಿನಿಂದ ಕಣ್ಣು ರೆಪ್ಪೆ ಮಿಟಿಸುವಷ್ಟರಲ್ಲಿ ಒಂದರ ಹಿಂದೆ ಒಂದು ಬೆಂಕಿ ಉಂಡೆಗಳು ಭಾರಿ ವೇಗದಲ್ಲಿ ಆಗಸಕ್ಕೆ ಚಿಮ್ಮಿ ಗುರಿ ತಲುಪಿ ಭಾರಿ ಸ್ಫೋಟವನ್ನು ಮಾಡುತ್ತಿವೆ.
|
45 ಕಿ.ಮೀ ದೂರದ ಗುರಿ ಹೊಡೆದುರುಳಿಸಬುದು
ಬಿಎಂ-21 ಗ್ರಾಡ್ ರಷ್ಯಾ ನಿರ್ಮಿತ ಯುದ್ಧೋಪಕರಣವಾಗಿದ್ದು, ಇದು 20 ರಿಂದ 45 ಕಿ.ಮೀಟರ್ ದೂರದ ಗುರಿಯನ್ನು ಸಹ ನಾಶ ಮಾಡಬಹುದಾದ ಸಾಮರ್ಥ್ಯವನ್ನು ಹೊಂದಿದೆ.

12.71 ಟನ್ ತೂಕದ ಲಾಂಚರ್
ಇದರ ತೂಕ 12.71 ಟನ್ ಆಗಿದ್ದು, ಮೂರು ಜನ ಸೈನಿಕರು ಕೂರುವ ಮತ್ತು ನಿಯಂತ್ರಿಸಲು ಸ್ಥಳಾವಕಾಶ ಒದಗಿಸಲಾಗಿದೆ. ಈ ರಾಕೆಟ್ ಬಾಂಬ್ ಲಾಂಚರ್ ಅನ್ನು ರಷ್ಯಾ, ಇರಾನ್, ಕತಾರ್, ವಿಯೆಟ್ನಾಂ ಮತ್ತು ಇನ್ನೂ ಕೆಲವು ದೇಶಗಳು ಬಳಸುತ್ತಿವೆ.

ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದ ಸೇನೆ
ಈ ಪ್ರಯೋಗವು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ಎಂದೇ ಹೇಳಲಾಗುತ್ತಿದೆ. ಈ ಪ್ರಯೋಗವಂತೂ ಪಾಕಿಸ್ತಾನಕ್ಕೆ ಚಿಂತೆಯ ಗೆರೆಗಳನ್ನು ಮೂಡಿಸಿದೆ. ಇದಾಗಲೇ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಏರ್ ಸ್ಟ್ರೈಕ್‌ನಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಈ ಪ್ರಯೋಗವು ಇನ್ನಷ್ಟು ತಲೆನೋವು ತಂದಿದೆ.

ರಷ್ಯಾದಿಂದ ಖರೀದಿಸಿರುವ ಉಪಕರಣ
ಭಾರತವು ರಷ್ಯಾದಿಂದ ಶಸ್ತಾಸ್ತ್ರ ಖರೀದಿಸುವ ಅತಿ ದೊಡ್ಡ ದೇಶವಾಗಿದೆ. ಅಮೆರಿಕದ ವಿರೋಧದ ನಡುವೆಯೂ ಭಾರತವು ರಷ್ಯಾದಿಂದ ಈ ಲಾಂಚರ್‌ಗಳನ್ನು ಖರೀದಿಸಿದೆ.
-
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ












Click it and Unblock the Notifications