ಭಾರತಕ್ಕೆ UNSCಯಲ್ಲಿ 8ನೇ ಬಾರಿ ತಾತ್ಕಾಲಿಕ ಸದಸ್ಯತ್ವ

ವಿಶ್ವಸಂಸ್ಥೆ, ಜೂನ್ 18: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವವನ್ನು ಭಾರತ ಮತ್ತೊಮ್ಮೆ ಪಡೆದುಕೊಂಡಿದೆ. ಎರಡು ವರ್ಷಗಳ ಸದಸ್ಯ ಸ್ಥಾನವನ್ನು ಮತ್ತೊಮ್ಮೆ ಪಡೆದುಕೊಳ್ಳುವ ನಿರೀಕ್ಷೆ ಹುಸಿಯಾಗಿಲ್ಲ. ಭಾರತ, ಮೆಕ್ಸಿಕೋ ಹಾಗೂ ಕೀನ್ಯಾ ದೇಶಗಳಿಗೆ ಈ ಬಾರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಲಭಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬ್ರಿಟನ್, ಚೀನಾ, ಫ್ರಾನ್ಸ್, ರಷ್ಯಾ ಹಾಗೂ ಅಮೆರಿಕ ಶಾಶ್ವತ ಸದಸ್ಯ ರಾಷ್ಟ್ರಗಳಾಗಿದ್ದು, 10 ತಾತ್ಕಾಲಿಕ ಸದಸ್ಯ ರಾಷ್ಟ್ರಗಳಿರಲಿವೆ. ತಾತ್ಕಾಲಿಕ ಸದಸ್ಯ ರಾಷ್ಟ್ರಗಳ ಆಯ್ಕೆಗಾಗಿ ಬುಧವಾರ ಮತದಾನ ನಡೆದು, ಭಾರತ ಅವಿರೋಧವಾಗಿ ಆಯ್ಕೆಯಾಗಿದೆ. ಆಯ್ಕೆಯಾದ ರಾಷ್ಟ್ರಕ್ಕೆ ಜನವರಿ 2021ರಿಂದ ಎರಡು ವರ್ಷಗಳ ಅವಧಿ ಸದಸ್ಯತ್ವ ಸಿಗಲಿದೆ. ಆಯ್ಕೆಯಾಗಲು 2/3 ಶಾಶ್ವತ ಸದಸ್ಯರ ಮತ ಅಥವಾ 129 ಮತಗಳು ಬೇಕಾಗುತ್ತದೆ.

1950-1951, 1967-1968, 1972-1973, 1977-1978, 1984-1985, 1991-1992 and 2011-2012 ನಂತರ ಮತ್ತೊಮ್ಮೆ ಆಯ್ಕೆಯಾಗುವ ಮೂಲಕ 8ನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವವನ್ನು ಭಾರತ ಪಡೆದುಕೊಂಡಿದೆ.

India wins UNSC non-permanent member seat

ವಿಶ್ವಸಂಸ್ಥೆಯ ಭದ್ರತಾ ಮಂಡಳಿ(UNSC)ಯಲ್ಲಿ ಭಾರತ ಕಾಯಂ ಸ್ಥಾನ ಪಡೆಯಲು ಬೇಕಾದ ಅಗತ್ಯ ಬೆಂಬಲವನ್ನು ಅಮೆರಿಕ ನೀಡಲಿದೆ ಎಂದು ಟ್ರಂಪ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಬೆಲ್ಜಿಯಂ, ಐವರಿ ಕೋಸ್ಟ್, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್, ದಕ್ಷಿಣ ಆಫ್ರಿಕಾ, ಡೊಮೊನಿಕ್ ರಿಪಬ್ಲಿಕ್, ಈಕ್ವೆಟೋರಿಯಲ್ ಗಿನಿ ತಾತ್ಕಾಲಿಕ ಸದಸ್ಯರಾಷ್ಟ್ರಗಳಾಗಿವೆ.

2021-22ರ ಅವಧಿಗೆ 5 ತಾತ್ಕಾಲಿಕ ಸ್ಥಾನಕ್ಕಾಗಿ ಜೂನ್ 2020ರಲ್ಲಿ ಚುನಾವಣೆ ನಡೆಸಲಾಗಿದೆ. ಒಟ್ಟು 193 ಸದಸ್ಯ ಬಲದಲ್ಲಿ 55 ಸದಸ್ಯರಾಷ್ಟ್ರಗಳ ಬೆಂಬಲವನ್ನು 2019ರ ಅಂತ್ಯಕ್ಕೆ ಭಾರತ ಪಡೆದುಕೊಂಡಿತ್ತು. ಈ ಹಿಂದೆ ಪಾಕಿಸ್ತಾನ ಕೂಡಾ ಭಾರತ ಪರ ವೋಟ್ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+