Construction Sector: ಭಾರತವು 2030ರಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸಲಿದೆ, ಹಾಲಿ ಎಷ್ಟಿದ್ದಾರೆ? ಅಂಕಿ ಸಂಖ್ಯೆ ತಿಳಿಯಿರಿ
ನವದೆಹಲಿ, ಆಗಸ್ಟ್ 04: ಭಾರತದ ಕಟ್ಟಡ ನಿರ್ಮಾಣ/ಕಾಮಗಾರಿ ಸೇರಿದಂತೆ ರಿಯಲ್ ಎಸ್ಟೇಟ್ ವಲಯವು ವಿಶ್ವದಲ್ಲಿ ಎರಡನೇ ಅತಿ ದೊಡ್ಡ ಉದ್ಯೋಗ ಸೃಷ್ಟಿಸುತ್ತಿವ ದೇಶವಾಗಿದೆ. ಇದರ ಪ್ರಮಾಣ 2023ರಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ನೈಟ್ ಫ್ರಾಂಕ್ ಇಂಡಿಯಾ ಮತ್ತು ರಾಯಲ್ ಇನ್‌ಸ್ಟಿಟ್ಯೂಷನ್ ಆಫ್ ಚಾರ್ಟರ್ಡ್ ಸರ್ವೇಯರ್‌ಗಳ (RICS) ಇತ್ತೀಚಿನ ವರದಿ ತಿಳಿಸಿದೆ.
ಪ್ರಸ್ತುತದಲ್ಲಿ ಈ ನಿರ್ಮಾಣ (Construction) ಕ್ಷೇತ್ರವು 7.1 ಕೋಟಿ (71 ಮಿಲಿಯನ್) ವ್ಯಕ್ತಿಗಳ ಉದ್ಯೋಗಿಗಳಿಗೆ ಕೆಲಸ ನೀಡಿದೆ. ಈ ಸಂಖ್ಯೆಯು 2030ರ ಹೊತ್ತಿಗೆ 10 ಕೋಟಿಗೆ ಅಂದರೆ 100 ಮಿಲಿಯನ್‌ಗೆ ಹೆಚ್ಚಾಗುವ ಸಾಧ್ಯತೆಗಳು ಇವೆ ಎಂದು ವರದಿ ಮಾಹಿತಿ ನೀಡಿದೆ.

ಭಾರತದ ರಿಯಲ್ ಎಸ್ಟೇಟ್ ವಲಯದಿಂದ ಉತ್ಪಾದನೆಯು 2030 ರ ವೇಳೆಗೆ ಒಂದು ಟ್ರಿಲಿಯನ್ ಯುಎಸ್ ಡಾಲರ್ (USD) ತಲುಪಲಿದೆ. ಇದು ಸದ್ಯ 650 ಶತಕೋಟಿಗಿಂತ ಯುಎಸ್ ಡಾಲರ್ (USD) ಗೆ ನಿರಂತರವಾಗಿ ಹೆಚ್ಚಳವಾಗಿರುವುದು ಅಧ್ಯಯನಗಳಿಂದ ತಿಳಿದು ಬಂದಿದೆ.
ನಿರ್ಮಾಣ ವಲಯದಲ್ಲಿ ನುರಿತ ಉದ್ಯೋಗಿಗಳು ಒಳಗೊಂಡಂತೆ RICS ಈ ವರದಿ ರಚಿಸಿದೆ. ನುರಿತ ಉದ್ಯೋಗಿಗಳ ಸಂಖ್ಯೆ, ಅವರು ಅಸ್ತಿತ್ವವನ್ನು ತಿಳಿಸುತ್ತದೆ. ಭಾರತ ದೇಶದ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಕ್ಷೇತ್ರಗಳು ಬೆಳೆಯುತ್ತಿದ್ದಂತೆ ನುರಿತ ಉದ್ಯೋಗಿಗಳ ಬೇಡಿಕೆಯು ಗಣನೀಯವಾಗಿ ಹೆಚ್ಚಾಗಲಿದೆ. ಇನ್ನೂ ನಿರ್ಮಾಣ ಉದ್ಯಮದಲ್ಲಿನ ತಾಂತ್ರಿಕ ಪ್ರಗತಿಗಳು ಉತ್ಪಾದಕತೆ ಹೆಚ್ಚಾಗಲು ಹಾಗೂ ಅದರಿಂದ ನುರಿತ ಕಾರ್ಮಿಕರ ಅಗತ್ಯತೆ ಏರಿಕೆ ಆಗಲು ಕಾರಣವಾಗಿದೆ.

ಹೆಚ್ಚು ಉದ್ಯೋಗ ಸೃಷ್ಟಿಸುವ 2ನೇ ದೊಡ್ಡ ದೇಶ ಭಾರತ
RICS ವರದಿ ತಿಳಿಸಿರುವಂತೆ ಭಾರತದಲ್ಲಿನ ನಿರ್ಮಾಣ/ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. 2023ರಲ್ಲಿ 71 ಮಿಲಿಯನ್ (7.1 ಕೋಟಿ) ಕಾರ್ಮಿಕರು ಕಟ್ಟಡ, ಮನೆ ಇನ್ನಿತರ ನಿರ್ಮಾಣ ಕಾಮಗಾರಿ ಕೆಲಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಉದ್ಯೋಗಿಗಳಲ್ಲಿ ಶೇಕಡಾ 81 ರಷ್ಟು ಕೌಶಲ್ಯರಹಿತರು ಮತ್ತು 19 ಶೇಕಡಾ ಮಾತ್ರ ನುರಿತ ಉದ್ಯೋಗಿ ಇದ್ದಾರೆ ಎಂದು ತಿಳಿಸಲಾಗಿದೆ.
ನುರಿತ ಉದ್ಯೋಗಿಗಳು, ಬೇಡಿಕೆಯಷ್ಟು ಡೆವಲಪರ್‌ಗಳು, ಕನ್‌ಸ್ಟ್ರಕ್ಷನ್ ಕಂಪನಿ ಕಂಪನಿಗಳು ಹಾಗೂ ಸಲಹಾ ಸಂಸ್ಥೆಗಳ ಬೇಡಿಕೆಯನ್ನು ಪೂರೈಸಲು, ಸರ್ಕಾರದ ಹೊಸ ಯೋಜನೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ತರಬೇತಿ ಸಂಸ್ಥೆಗಳ ಮೂಲಕ ಕೌಶಲ್ಯಪೂರ್ಣ ಮಾನವಶಕ್ತಿಯ ಪೂರೈಕೆ ಆಗಲಿದೆ ಎಂಬ ನಿರೀಕ್ಷೆ ಇದೆ.
ಕೌಶಲ್ಯಯುತರ ಸಂಖ್ಯೆ ಕಡಿಮೆ
ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕೌನ್ಸಿಲ್ (NSDC) ಹೇಳುವ ಪ್ರಕಾರ, ಒಟ್ಟಾರೆ ಉದ್ಯೋಗಿಗಳಲ್ಲಿ ಕೌಶಲ್ಯ ಮತ್ತು ಕೌಶಲ್ಯ ರಹಿತ ಶೇ. 87 ರಷ್ಟು ಮಂದಿ ರಿಯಲ್ ಎಸ್ಟೇಟ್ ವಲಯದಲ್ಲಿದ್ದಾರೆ. ಉಳಿದ 13 ರಷ್ಟು ಮಂದಿ ಮೂಲ ಸೌಕರ್ಯ ಕ್ಷೇತ್ರದಲ್ಲಿದ್ದಾರೆ ಎಂದು ತಿಳಿಸಿದೆ.
ಹಾಲಿ ಇರುವ 71 ಮಿಲಿಯನ್‌ನ ನಿರ್ಮಾಣ ಕಾಮಗಾರಿಯ ಉದ್ಯೋಗಿಗಳಲ್ಲಿ 4.4 ಮಿಲಿಯನ್‌ಗಳು ಎಂಜಿನಿಯರ್‌ಗಳು, ತಂತ್ರಜ್ಞರು, ಕ್ಲೆರಿಕಲ್ ಸಿಬ್ಬಂದಿ ಮತ್ತು ನುರಿತ ಉದ್ಯೋಗಿಗಳು ಇದ್ದಾರೆ. ಇನ್ನೂ 6.9 ಮಿಲಿಯನ್ ವೃತ್ತಿಪರ ತರಬೇತಿವುಳ್ಳ ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲ ಅಂಕಿ ಸಂಖ್ಯೆಗಳನ್ನು ನೋಡಿದರೆ ಸರ್ಕಾರ ಅಥವಾ ಸಂಬಂಧಿಸಿದ ಸಂಸ್ಥೆಗಳು ಕೌಶಲ್ಯಯು ಜನರ ಸಂಖ್ಯೆ ಹೆಚ್ಚಿಸುವ ಅಗತ್ಯತೆ ಇದೆ ಎಂದು ವರದಿ ತಿಳಿಸುತ್ತದೆ.












Click it and Unblock the Notifications