2019ರ ಮೊದಲ ದಿನ ಭಾರತದಲ್ಲಿ ಜನಿಸಿವೆ 69,944 ಮಕ್ಕಳು!

ನವದೆಹಲಿ, ಜನವರಿ 01: ಹೊಸ ವರ್ಷದ ಮೊದಲ ದಿನ ಭಾರತದಲ್ಲಿ 69,944 ಮಕ್ಕಳು ಜನಿಸಿದ್ದಾರೆ ಎಂದು ಯುನಿಸೆಫ್‌ ಅಂಕಿ-ಅಂಶ ನೀಡಿದೆ.

ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳು ಹುಟ್ಟಿದ ದೇಶ ಭಾರತವೇ ಆಗಿದೆ. ಚೀನಾ ಎರಡನೇ ಸ್ಥಾನದಲ್ಲಿದ್ದು ಹೊಸ ವರ್ಷದಂದು ಅಲ್ಲಿ 44,940 ಮಕ್ಕಳು ಜನಿಸಿದ್ದಾರೆ. ಮೂರನೇ ಸ್ಥಾನದಲ್ಲಿ ನೈಜೀರಿಯಾ ಇದ್ದು ಅಲ್ಲಿ 25,685 ಮಕ್ಕಳು ಜನಿಸಿದ್ದಾರೆ.

2018 ರ ಮೊದಲ ದಿನಕ್ಕಿಂತಲೂ ಹೆಚ್ಚು ಮಕ್ಕಳು ಈ ಬಾರಿ ಹುಟ್ಟಿವೆ ಎಂದು ಯುನಿಸೆಫ್‌ ಹೇಳಿದೆ. ಭಾರತದಲ್ಲಿ ಯುವ ಸಮುದಾಯ ಹೆಚ್ಚಿರುವ ಕಾರಣ ಹೆಚ್ಚು ಮಕ್ಕಳು ಭಾರತದಲ್ಲಿ ಹುಟ್ಟುತ್ತಿದ್ದಾರೆ ಎಂದು ಯುನಿಸೆಫ್‌ ಹೇಳುತ್ತಿದೆ.

India welcome 69,944 babies on New Year’s Day: UNICEF

2019 ರ ಮೊದಲ ದಿನ ವಿಶ್ವದಾದ್ಯಂತ 3,95,072 ಮಕ್ಕಳು ಜನಿಸಿದ್ದಾರೆ. ವಿಶ್ವದಾದ್ಯಂತ ಜನಿಸಿರುವ ಮಕ್ಕಳಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ಕಾಲುಭಾಗದಷ್ಟು ಮಕ್ಕಳು ಜನಿಸಿದ್ದಾರೆ.

ಭಾರತದಲ್ಲಿ 69,944, ಚೀನಾ 44,940 ಮಕ್ಕಳು, ಪಾಕಿಸ್ತಾನ 15,112, 8,428 ಮಕ್ಕಳು ಜನಿಸಿದ್ದಾರೆ. ಜಗತ್ತಿನಲ್ಲಿ ಹುಟ್ಟಿದ ಒಟ್ಟು ಮಕ್ಕಳಲ್ಲಿ ಶೇ 18 ಮಕ್ಕಳು ಭಾರತದಲ್ಲಿಯೇ ಹುಟ್ಟಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+