IMD Weather: ಹವಾಮಾನ ಬದಲಾವಣೆ, ಈ ಭಾಗಗಗಳಲ್ಲಿ ತೀವ್ರ ಚಳಿ ಮುನ್ಸೂಚನೆ, ಶೀತ ಅಲೆ

ನವದೆಹಲಿ: ಒಂದೆರಡು ಭಾಗಗಳಲ್ಲಿ ಮಳೆ ಆಗಿದ್ದು, ಬಿಟ್ಟರೆ ದೇಶದ ವಿವಿಧ ಭಾಗಗಳಲ್ಲಿ ಮುಂದಿನ ಐದು ದಿನಗಳಲ್ಲಿ ಶೀತ ಅಲೆ ಪ್ರಭಾವ ಹೆಚ್ಚಾಗಿರಲಿದೆ. ಹಲವೆಡೆ ದಟ್ಟ ಮಂಜು ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಹಾರದ ಪ್ರತ್ಯೇಕ ಸ್ಥಳಗಳಲ್ಲಿ ಶೀತ ವಾತಾವರಣ ತೀವ್ರಗೊಳ್ಳಲಿದೆ. ಜನರು ಆರೋಗ್ಯ ಕಾಳಜಿ ವಹಿಸಬೇಕಿದೆ.

ಮುಂದಿನ ಎರಡು ದಿನಬಿಹಾರ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ-ಲದಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್, ನಾಗಾಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಮಿಜೋರಾಂ ಮತ್ತು ತ್ರಿಪುರ, ಒಡಿಶಾ ಹಾಗೂ ಉತ್ತರಾಖಂಡ್‌ನ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟ ಮಂಜು ಆವರಿಸಲಿದೆ. ಮಬ್ಬು ವಾತಾವರಣ ಸಹಿತ ವ್ಯಾಪಕ ಚಳಿ ಕಂಡು ಬರಲಿದೆ. ಈ ಮಂಜು ರಸ್ತೆ ಸಂಚಾರ ಹಾಗೂ ವಾಯು ಸಂಚಾರದ ಮೇಲೆ ಪರಿಣಾಮ ಬೀರುವ ನಿರೀಕ್ಷೆ ಇದೆ.

India Weather Forecast Cold Conditions- Fog Continue in These Parts of India for Next 5 Days

ಡಿಸೆಂಬರ್ 27ರವರೆಗೆ ಮಧ್ಯಭಾರತ ಸೇರಿದಂತೆ ಕರ್ನಾಟಕ, ತೆಲಂಗಾಣ ಸೇರಿ ವಿವಿಧ ರಾಜ್ಯಗಳಲ್ಲಿ ಸಹ ಚಳಿ ಹೆಚ್ಚಾಗಲಿದೆ. ಹರಿಯಾಣ, ಚಂಡೀಗಢ ಮತ್ತು ದೆಹಲಿ, ಪಂಜಾಬ್ ಹಾಗೂ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ದಟ್ಟ ಮಂಜಿನ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಪ್ರದೇಶಗಳಲ್ಲಿ ತಾಪಮಾನದಲ್ಲಿ ಇನ್ನಷ್ಟು ಕುಸಿತವಾಗುವ ಲಕ್ಷಣಗಳು ಇವೆ. ಸೊಮಾಲಿಯಾ ಕರಾವಳಿ ಮತ್ತು ಪಕ್ಕದ ಸಮುದ್ರ ಪ್ರದೇಶಗಳು, ಕೊಮೊರಿನ್ ಪ್ರದೇಶ ಹಾಗೂ ಮನ್ನಾರ್ ಕೊಲ್ಲಿಯ ಕೆಲವು ಭಾಗಗಳಲ್ಲಿ ಗಂಟೆಗೆ 45 ಕಿಲೋ ಮೀಟರ್‌ನಿಂದ 55 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಐಎಂಡಿ ತಿಳಿಸಿದೆ.

ಹವಾಮಾನ ವೈಪರೀತ್ಯಗಳ ಅಪ್ಡೇಟ್ಸ್

ಹವಾಮಾನ ವೈಪರೀತ್ಯಗಳನ್ನು ನೋಡುವುದಾದರೆ ಬಂಗಾಳಕೊಲ್ಲಿ ಸಮುದ್ರ ಮೇಲ್ಮೈ ಮಟ್ಟದಿಂದ ಸುಮಾರು 5.8 ಕಿ.ಮೀ ಎತ್ತರದಲ್ಲಿ ಸುಳಿಗಾಳಿ ನಿರ್ಮಾಣವಾಗಿದೆ. ಅರಬ್ಬಿ ಸಮುದ್ರದ ಕಡೆಗೆ ಸಮುದ್ರ ಮಟ್ಟದಿಂದ 12.6 ಕಿ.ಮೀ ಎತ್ತರದಲ್ಲಿ, ಬಿರುಗಾಳಿ ಎದ್ದಿದೆ. ಇದು ಉತ್ತರ ಭಾರತದ ಮೇಲೆ ಸಕ್ರಿಯವಾಗಿದೆ. ಇದರ ಪರಿಣಾಮವಾಗಿ ಉತ್ತರ ಭಾರತದ ಹವಾಮಾನದಲ್ಲಿ ಬದಲಾವಣೆಗಳು ಆಗಲಿವೆ. ಜಮ್ಮು ಕಾಶ್ಮೀರ ಭಾಗದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಉಳಿದಂತೆ ದಟ್ಟು ಮಂಜು, ಚಳಿ ಆವರಿಸಲಿದೆ.

ಚಂಡಮಾರುತ ಪ್ರಸರಣ

ಕೊಮೊರಿನ್ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪ್ರಸರಣ ನಿರ್ಮಾಣವಾಗಿದೆ. ಇದರ ಪ್ರಭಾವ ದಕ್ಷಿಣ ಭಾರತದ ಕರಾವಳಿ ಭಾಗಗಳಲ್ಲಿ ತಂಪು ವಾತಾವರಣ ಉಂಟಾಗಲಿದೆ. ಇದರೊಂದಿಗೆ ಹಗಲು ಹೊತ್ತು ದೇಶಾದ್ಯಂತ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+