IMD Rain Alert: ತಗ್ಗಿದ ಮುಂಗಾರು, ಈ ಭಾಗಗಳಲ್ಲಿ ಅಕ್ಟೋಬರ್ 14ರವರೆಗೆ ಭಾರೀ ಮಳೆ ಎಚ್ಚರಿಕೆ

India Weather Alert: ಮುಂದಿನ 2-3 ದಿನಗಳಲ್ಲಿ ನೈಋತ್ಯ ಮಾನ್ಸೂನ್ (Monsoon Rain) ಮತ್ತಷ್ಟು ಹಿಂತೆಗೆದುಕೊಳ್ಳಲು ಪರಿಸ್ಥಿತಿ ಇದೆ. ವಾತಾವರಣದಲ್ಲಿನ ಬದಲಾವಣೆಗಳ ಕಾರಣದಿಂದ ಜೋರು ಮಳೆ ಆಗಿದ್ದ ಪ್ರದೇಶಗಳಲ್ಲಿ ಬಿಸಿಲಿನ ದರ್ಶನವಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ಕೊನೆಯಾಗಲು ದಿನಗಣನೆ ಶುರುವಾಗಿದೆ. ಹಿಂಗಾರು ಮಳೆ ಕೆಲವು ಭಾಗಗಳಲ್ಲಿ ಅಬ್ಬರಿಸುವ ಮುನ್ಸೂಚನೆ ಸಹ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

ಇನ್ಣು ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಮುಂಗಾರು ಮಳೆ ತಗ್ಗಲಿದೆ. ಅರಬ್ಬಿ ಸಮುದ್ರದ ಪಶ್ಚಿಮ-ಮಧ್ಯ ಭಾಗದಲ್ಲಿ "ಶಕ್ತಿ' ಚಂಡಮಾರುತದ ಬಿರುಗಾಳಿ ತೀವ್ರಗೊಂಡಿದೆ. ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ. ಅದು ಸಮುದ್ರ ಮಟ್ಟಕ್ಕಿಂತ 5.8 ಕಿ.ಮೀ ಎತ್ತರದವರೆಗೆ ವಿಸ್ತರಿಸಿದೆ. ಮಧ್ಯ ಅಸ್ಸಾಂ, ದಕ್ಷಿಣ ಬಾಂಗ್ಲಾದೇಶ ಮತ್ತು ಆಂಧ್ರ ಪ್ರದೇಶದ ಕರಾವಳಿಗಳಲ್ಲಿ ಮೇಲ್ಮಟ್ಟದ ವಾಯು ಚಂಡಮಾರುತದ ಪರಿಚಲನೆಗಳು ಮುಂದುವರಿದಿವೆ ಎಂದು ಶನಿವಾರ ಹವಾಮಾನ ತಜ್ಞರು ತಿಳಿಸಿದ್ದಾರೆ.

India Weather Alert Many parts of South India will Face heavy Rain Till Oct 14th

ಆಗ್ನೇಯ ಅರಬ್ಬಿ ಸಮುದ್ರ ಹಾಗೂ ಕೇರಳ ಕರಾವಳಿಯ ಮೇಲೆ 4.5 ರಿಂದ 5.8 ಕಿ.ಮೀ ಎತ್ತರದ ವಾಯು ಚಂಡಮಾರುತದ ಪ್ರಸರಣ ಇದೆ. ಹರಿಯಾಣ ಮತ್ತು ಉತ್ತರ ಪ್ರದೇಶದ ಭಾಗಗಳಲ್ಲಿ ಪಶ್ಚಿಮದ ಅವಾಂತರ ಮುಂದುವರಿದಿದೆ. ತಮಿಳುನಾಡಿನ ಉತ್ತರ ಕರಾವಳಿಯ ಮೇಲಿನ ವಾಯು ಚಂಡಮಾರುತದ ಚಲನೆ ಸ್ವಲ್ಪ ಕಡಿಮೆ ಆಗಿದೆ ಎಂದು ವರದಿ ಆಗಿದೆ. ಇದೆಲ್ಲ ಹವಾಮಾನ ಬದಲಾವಣೆಗಳು ಮತ್ತು ತೀವ್ರತೆಯಿಂದಾಗಿ ಹಲವೆಡೆ ಉತ್ತಮ ಮಳೆ ಎಚ್ಚರಿಕೆ ನೀಡಲಾಗಿದೆ.

ದಕ್ಷಿಣ ಭಾರತದಲ್ಲಿ ಭಾರೀ ಮಳೆ ಎಚ್ಚರಿಕೆ

ಅಕ್ಟೋಬರ್ 13ರ ವರೆಗೆ ತಮಿಳುನಾಡು, ದಕ್ಷಿಣ ಒಳನಾಡು ಕರ್ನಾಟಕ, ಕರಾವಳಿ ಆಂಧ್ರಪ್ರದೇಶ, ಯಾಣಂ, ಕೇರಳ ಹಾಗೂ ಮಾಹೆ ಪ್ರದೇಶಗಳಲ್ಲಿ ಹಗುರದಿಂದ ಮಧ್ಯಮ ಮಟ್ಟದ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 11ರಂದು ಉತ್ತರ ತಮಿಳುನಾಡು, ಕೇರಳ ಹಾಗೂ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯ ಸಾಧ್ಯತೆಯೂ ಇದೆ. ಅದೇ ದಿನ ಕರಾವಳಿ ಆಂಧ್ರಪ್ರದೇಶ ಮತ್ತು ಯಾಣಂ ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಸಹಿ ಮಳೆ ನಿರೀಕ್ಷೆ ಇದೆ.

ಪೂರ್ವ -ಮಧ್ಯ ಭಾರತದ ಭಾಗಗಳಲ್ಲಿ ಜೋರು ಮಳೆ

ಒಡಿಶಾ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢ ರಾಜ್ಯಗಳ ಕೆಲವು ಭಾಗಗಳಲ್ಲಿ ಅಕ್ಟೋಬರ್ 11 ಮತ್ತು 12ರಂದು ಹಗುರದಿಂದ ಮಧ್ಯಮ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಿಂಚು ಮತ್ತು ಬಿರುಗಾಳಿ (ಗಂಟೆಗೆ 30-40 ಕಿ.ಮೀ ವೇಗದಲ್ಲಿ) ಸಹ ಬೀಸುವ ಸಾಧ್ಯತೆ ಇದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಹಾಗೂ ತ್ರಿಪುರ ರಾಜ್ಯಗಳಲ್ಲಿ ಅಕ್ಟೋಬರ್ 11ರಂದು ಕೆಲವೆಡೆ ಹಗುರದಿಂದ ಸಾಧಾರಣ ಮಳೆ ಸಾಧ್ಯತೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+