India TV-CNX Survey: ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿ ಎಂದ ಶೇ.61 ಮತದಾರರು, ಸಮೀಕ್ಷೆ ಅಂಕಿ ಸಂಖ್ಯೆ

ನವದೆಹಲಿ, ಅಕ್ಟೋಬರ್ 04: ಲೋಕಸಭೆ ಚುನಾವಣೆ 2024 ಸಮೀಸುತ್ತಿದ್ದು, ಭಾರತದ ಮುಂದಿನ ಪ್ರಧಾನಮಂತ್ರಿ ಯಾರಾಗಲಿದ್ದಾರೆ ಎಂಬುದರ ಮೇಲೆ ಸಾಕಷ್ಟು ಸಮೀಕ್ಷೆಗಳು ನಡೆಯುತ್ತಲೇ ಇವೆ. ಇದೀಗ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಂಗ್ರಹಿಸಿದ ಅಭಿಪ್ರಾಯ (Survey) ಸಂಗ್ರಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೈಕಿ ಯಾರ ಮೇಲೆ ಹೆಚ್ಚು ಒಲವಿದೆ ಎಂಬುದು ಬಹಿರಂಗವಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗಗಳು (OBC) ಹಾಗೂ ದಲಿತ ಮತದಾರರು ಬಿಜೆಪಿ ರಾಷ್ಟ್ರ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿ ಆಗಲು ಬಯಸಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದ್ದಾರೆ. ಈ ಇಬ್ಬರು ಉಭಯ ನಾಯಕರ ಕುರಿತು ಅಭಿಪ್ರಾಯಗಳ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಇರುವುದನ್ನು ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ವರದಿ ತಿಳಿಸಿದೆ.

India TV-CNX Survey: 61pc Voters Like To Narendra Modi as Next PM, Rahul Gandhi Hot 21pc

ಇತರೆ ಹಿಂದುಳಿದ ವರ್ಗಗಳು (OBC) ಮತದಾರರು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುತ್ತಿದ್ದಾರೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ರಾಹುಲ್ ಗಾಂಧಿ ಅವರು ನಂತರದ ಎರಡನೇ ಸ್ಥಾನದಲ್ಲಿದ್ದೂ ಸಹಿತ ನರೇಂದ್ರ ಮೋದಿಗಿಂತಲೂ ಶೇಕಡಾ 15ರಷ್ಟು ದೂರದಲ್ಲಿದ್ದಾರೆ ಎಂದು ಅಂಕಿ ಸಂಖ್ಯೆಗಳು ಮಾಹಿತಿ ನೀಡಿವೆ.

ಸಮೀಕ್ಷೆಯ ಪ್ರಕಾರ ನೋಡುವುದಾದರೆ, ದಲಿತರು ಶೇಕಡಾ 58 ರಷ್ಟು ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಮಂತ್ರಿಗಳಾಲಿ ಎನ್ನುತ್ತಾರೆ. ಶೇಕಡಾ 20 ರಷ್ಟು ದಲಿತ ಜನರು ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಲು ಬಯಸಿದ್ದಾರೆ.

ಬಹುತೇಕ ಓಬಿಸಿ ಮತದಾರರು ಮೋದಿ ಪರ

ಇತರೆ ಹಿಂದುಳಿದ ವರ್ಗಗಳ ಜನರಲ್ಲಿ ಶೇಕಡಾ 64ರಷ್ಟು ಮಂದಿ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ನೋಡಲು ಬಯಸಿದ್ದಾರೆ. ಶೇಕಡಾ 15ರಷ್ಟು ಮಂದಿ ಮಾತ್ರವೇ ರಾಹುಲ್ ಗಾಂಧಿ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

India TV-CNX Survey: 61pc Voters Like To Narendra Modi as Next PM, Rahul Gandhi Hot 21pc

ಇತರ ಆಯ್ಕೆಗಳ ಪೈಕಿ, ಶೇಕಡಾ 5 ರಷ್ಟು ಒಬಿಸಿ ಮತದಾರರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಮುಂದಿನ ಪ್ರಧಾನಿಯಾಗಿ ನೋಡಲು ಬಯಸುತ್ತಾರೆ ಆದರೆ ಕೇವಲ 3 ಪ್ರತಿಶತದಷ್ಟು ಜನರು ನಿತೀಶ್ ಕುಮಾರ್ ಅವರೊಂದಿಗೆ ಹೋಗಬಹುದು.

ಮಾಯಾವತಿ, ಖರ್ಗೆ ಪರ ಮತದಾರರ ಸಂಖ್ಯೆ?

ದಲಿತರಲ್ಲಿ ಶೇ.10 ರಷ್ಟು ಮಂದಿ ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಮತ್ತು ಯುಪಿ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಪ್ರಧಾನಿ ಆಗಬೇಕೆಂದು ಹೇಳಿದ್ದಾರೆ. ಅದರಲ್ಲಿಯೇ ಕೇವಲ ಶೇಕಡಾ 2 ರಷ್ಟು ಮತದಾರರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿ ಪ್ರಧಾನಿ ಆಗಲಿ ಎಂದ ಬಯಸಿದ್ದಾರೆ.

ಸಮೀಕ್ಷೆಯ ಒಟ್ಟು ಅಂಶ ಗಮನಿಸಿದರೆ ಮುಂದಿನ ಚುನಾವಣೆಯಲ್ಲಿ ಶೇಕಡಾ 61ರಷ್ಟು ಮತದಾರರು ನರೇಂದ್ರ ಮೋದಿ ಅವರನ್ನು ಪ್ರಧಾನಿ ಆಗುವಂತೆ ಬಯಸುತ್ತಿರುವುದು ಕಂಡು ಬಂದಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಶೇಕಡಾ 21 ರಷ್ಟು ಜನ ರಾಹುಲ್ ಗಾಂಧಿಯನ್ನು ಬಯಸಿದ್ದಾರೆ. ಶೇಕಡಾ ಮೂರಷ್ಟು ಜನರು ಮಮತಾ ಬ್ಯಾನರ್ಜಿ ಹಾಗೂ ಎಎಪಿ ನಾಯಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪಿಎಂ ಆಗಲದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶೇಕಡಾ 2 ರಷ್ಟು ಜನರು ನಿತೀಶ್ ಕುಮಾರ್ ಹಾಗೂ ಮಾಯಾವತಿ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಹಾರದ ಜಾತಿ ಗಣತಿ ದತ್ತಾಂಶ ಬಿಡುಗಡೆ ಬಳಿಕ ಭಾರತದ ವಿವಿಧ 12 ರಾಜ್ಯಗಳ 48 ಲೋಕಸಭಾ ಸ್ಥಾನಗಳಲ್ಲಿ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ನಡೆಸಿ ಅಭಿಪ್ರಾಯ ದಾಖಲಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+