ಇಂಡಿಯಾ ಟುಡೆ ಸಮೀಕ್ಷೆ: ಲೋಕಸಭೆ ಚುನಾವಣೆ ಯಾವ ಪಕ್ಷಕ್ಕೆ ಗೆಲುವು?

Recommended Video

      Lok Sabha Election 2019 : ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಗೆಲುವು? ಇಂಡಿಯಾ ಟುಡೇ ಸಮೀಕ್ಷೆ ತಿಳಿಸಿದೆ

      ನವದೆಹಲಿ, ಜನವರಿ 24: ಲೋಕಸಭೆ ಚುನಾವಣೆ 2019 ರ ಬಗ್ಗೆ ಇಂಡಿಯಾ ಟುಡೆಯು 'ಮೂಡ್‌ ಆಫ್ ದಿ ನೇಶನ್' ಸಮೀಕ್ಷೆ ನಡೆಸಿದ್ದು, ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸೀಟು ಗಳಿಸುತ್ತದೆ, ಗೆಲುವು ಯಾರಿಗೆ ಎಂದು ಅಂದಾಜಿಸಿದೆ.

      ಹಲವು ಕ್ಷೇತ್ರಗಳಲ್ಲಿ 1200 ಜನರನ್ನು ಸಂದರ್ಶಿಸಿ ಈ ಸಮೀಕ್ಷೆ ತಯಾರಾಗಿದ್ದು, ಸಮೀಕ್ಷೆ ಪ್ರಕಾರ 543 ಲೋಕಸಭಾ ಕ್ಷೇತ್ರಗಳಲ್ಲಿ ಎನ್‌ಡಿಎಗೆ 281 ಸೀಟು ಲಭಿಸಲಿದೆ ಆಮೂಲಕ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವ ಹಾದಿಗೆ ಹತ್ತಿರದಲ್ಲಿದೆ.

      ಕಾಂಗ್ರೆಸ್‌ ನೃತೃತ್ವದ ಯುಪಿಎಗೆ 122 ಸೀಟುಗಳು ಲಭಿಸಲಿದ್ದರೆ, ಕಾಂಗ್ರೆಸ್ ಹೊರತಾದ ಮಹಾಘಟಬಂಧನ್‌ಗೆ 140 ಸೀಟುಗಳು ಲಭಿಸಲಿವೆ. ಸಮೀಕ್ಷೆಯ ಫಲಿತಾಂಶವನ್ನು ಗಮನಿಸುವುದಾದರೆ ಮಹಾಘಟಬಂಧನ್‌ ಮತ್ತು ಕಾಂಗ್ರೆಸ್‌ನ ಸೀಟುಗಳು ಸ್ವಲ್ಪವೇ ಹೆಚ್ಚಾದರೂ ಎನ್‌ಡಿಎಗೆ ಅಧಿಕಾರ ಹಿಡಿಯುವ ಅಧಿಕಾರ ತಪ್ಪುವ ಸಾಧ್ಯತೆ ಇದೆ.

      ಮತ ಹಂಚಿಕೆ ಯಾರಿಗೆ ಎಷ್ಟು?

      ಮತ ಹಂಚಿಕೆ ಯಾರಿಗೆ ಎಷ್ಟು?

      ಸಮೀಕ್ಷೆ ಪ್ರಕಾರ ಎನ್‌ಡಿಎಗೆ 36% ಮತಗಳು ಲಭಿಸಲಿವೆ. ಯುಪಿಎಗೆ 31% ಮತಗಳು ಲಭಿಸಿದರೆ, ಮಹಾಘಟಬಂಧನ್‌ಗೆ 33% ಮತಗಳು ಲಭಿಸಲಿವೆ.

      ಬಿಜೆಪಿ ಜನಪ್ರಿಯತೆಯಲ್ಲಿ ಇಳಿಕೆ

      ಬಿಜೆಪಿ ಜನಪ್ರಿಯತೆಯಲ್ಲಿ ಇಳಿಕೆ

      ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿಯ ಜನಪ್ರಿಯತೆಯಲ್ಲಿ ಭಾರಿ ಇಳಿಕೆ ಆಗಿದೆ ಎನ್ನುತ್ತಿದೆ ಮೂಡ್ ಆಫ್ ನೇಶನ್ ಸಮೀಕ್ಷೆ. ಮೋದಿ ಆಡಳಿತದ ಮಧ್ಯಭಾಗದಲ್ಲಿ 42% ಇದ್ದ ಜನಪ್ರಿಯತೆಯು ಈ ಚುನಾವಣೆ ಹೊತ್ತಿಗೆ 30% ಇಳಿದಿದೆ. ಕಳೆದ ಚುನಾವಣೆಯಲ್ಲಿ 20% ರಷ್ಟಿದ್ದ ಕಾಂಗ್ರೆಸ್‌ ಜನಪ್ರಿಯತೆ ಈ ಬಾರಿ ಏರಿಕೆ ಆಗಿದೆ.

      ಕಳೆದ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸೀಟು?

      ಕಳೆದ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸೀಟು?

      ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯು 543 ರಲ್ಲಿ 336 ಸೀಟುಗಳನ್ನು ಗೆದ್ದು ಭಾರಿ ಬಹುಮತದಿಂದ ಅಧಿಕಾರ ಹಿಡಿದಿತ್ತು. ಆದರೆ ಈ ಬಾರಿ ಅದು ಇಳಿಕೆ ಆಗುವ ಭೀತಿ ಇದೆ. ಆದರೂ ಸಹ ಎನ್‌ಡಿಎಯು ಗೆಲುವಿನ ಸನಿಹದಲ್ಲಿಯೇ ಇರಲಿದೆ. ಯುಪಿಎಯು ಕಳೆದ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿ ಕೇವಲ 60 ಕ್ಷೇತ್ರಗಳಲ್ಲಷ್ಟೆ ಗೆದ್ದಿತ್ತು. ಕಾಂಗ್ರೆಸ್‌ ಕೇವಲ 44 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಇದು ಏರಿಕೆ ಆಗಲಿದೆ.

      ಮಹಾಘಟಬಂಧನ್‌ ಪ್ರಮುಖ ಪಾತ್ರ

      ಮಹಾಘಟಬಂಧನ್‌ ಪ್ರಮುಖ ಪಾತ್ರ

      ಸಮೀಕ್ಷೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಾಘಟಬಂಧನ್‌ ಬಿಜೆಪಿಗೆ ಪೆಟ್ಟು ಕೊಡುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರಗಳಲ್ಲಿ, ಕರ್ನಾಟಕ, ರಾಜಸ್ಥಾನಗಳಲ್ಲಿ ಬಿಜೆಪಿಗೆ ಮಹಾಘಟಬಂಧನ್‌ ಭಾರಿ ಪೆಟ್ಟು ನೀಡಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+