Exit Poll Result 2024: India Today Axis My India ಸಮೀಕ್ಷೆಯಲ್ಲಿ ಯಾರಿಗೆ ಜಯ?
ನವದೆಹಲಿ, ಜೂನ್ 01: ಲೋಕಸಭೆ ಚುನಾವಣೆ 2024ರ ಮತದಾನ ಶನಿವಾರ ಮುಕ್ತಾಯವಾಗಿದೆ. ಜೂನ್ 4ರ ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂತಿಮ ಹಂತದ ಮತದಾನ ಮುಕ್ತಾಯಗೊಂಡ ಬಳಿಕ ವಿವಿಧ ರಾಷ್ಟ್ರೀಯ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿವೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 272.
India Today-Axis My India ಲೋಕಸಭೆ ಚುನಾವಣೆ 2024ರ ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದೆ. ಈ ಬಾರಿಯ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟು ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ಮಾಹಿತಿ ಲಭ್ಯವಾಗಿದೆ.

ದೇಶದಲ್ಲಿ ಒಟ್ಟು 7 ಹಂತದಲ್ಲಿ ಲೋಕಸಭೆ ಚುನಾವಣೆ 2024 ನಡೆಯಿತು. ಮೊದಲ ಹಂತದ ಮತದಾನ ಏಪ್ರಿಲ್ 19, ಏಪ್ರಿಲ್ 26ರಂದು 2ನೇ ಹಂತ, ಮೇ 7ರಂದು 3ನೇ ಹಂತ, ಮೇ 13ರಂದು 4ನೇ ಹಂತ, ಮೇ 20ರಂದು 5ನೇ ಹಂತ, ಮೇ 25ರಂದು 6ನೇ ಹಂತ ಮತ್ತು ಜೂನ್ 1ರಂದು 7ನೇ ಹಂತದ ಮತದಾನ ಮುಕ್ತಾಯಗೊಂಡಿದೆ.
ಮೊದಲ ಹಂತದಲ್ಲಿ 102, 2ನೇ ಹಂತದಲ್ಲಿ 88, 3ನೇ ಹಂತದಲ್ಲಿ 94, 4ನೇ ಹಂತದಲ್ಲಿ 96, 5ನೇ ಹಂತದಲ್ಲಿ 49, 6ನೇ ಹಂತದಲ್ಲಿ 58 ಮತ್ತು 7ನೇ ಹಂತದಲ್ಲಿ 57 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ಚುನಾವಣೋತ್ತರ ಸಮೀಕ್ಷೆ ಫಲಿತಾಂಶ: India Today Axis My India ಚುನಾವಣೋತ್ತರ ಸಮೀಕ್ಷೆ ನಡೆಸುವಾಗ 43 ದಿನಗಳಲ್ಲಿ, 22,288 ಗ್ರಾಮ/ನಗರಗಳಲ್ಲಿ 5.8 ಲಕ್ಷ ಅಭಿಪ್ರಾಯಗಳನ್ನು ಸಂಗ್ರಹ ಮಾಡಿದೆ. 912 ಜನರು, 152 ತಂಡಗಳಾಗಿ 3607 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ಕೈಗೊಂಡಿದ್ದಾರೆ.
ಚುನಾವಣೋತ್ತರ ಸಮೀಕ್ಷೆಯ ಅಂತಿಮ ಫಲಿತಾಂಶದ ಪ್ರಕಾರ ಎನ್‌ಡಿಎ ಮೈತ್ರಿಕೂಟ 361-401, ಇಂಡಿಯಾ ಮೈತ್ರಿಕೂಟ 131-166, ಇತರರು 08-20 ಸೀಟುಗಳಲ್ಲಿ ಗೆಲುವು ಸಾಧಿಸಲಿದೆ.
ಈ ಬಾರಿಯ ಲೋಕಸಭೆ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 2014, 2019ರ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಎರಡು ಬಾರಿ ಅಧಿಕಾರ ನಡೆಸಿದೆ. ಈ ಬಾರಿ 400ಕ್ಕೂ ಅಧಿಕ ಕೇತ್ರಗಳಲ್ಲಿ ಗೆಲ್ಲುವ ಮೂಲಕ 3ನೇ ಅವಧಿಗೆ ಸರ್ಕಾರ ರಚನೆ ಮಾಡುತ್ತೇವೆ ಎಂಬ ವಿಶ್ವಾಸದಲ್ಲಿದೆ.
ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಎದುರಿಸಲು ಕಾಂಗ್ರೆಸ್ ನೇತೃತ್ವದಲ್ಲಿ 26 ಪಕ್ಷಗಳನ್ನು ಸೇರಿಸಿಕೊಂಡು 'ಇಂಡಿಯಾ' ಮೈತ್ರಿಕೂಟ ರಚಿಸಲಾಗಿದೆ. ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಂಡು ವಿವಿಧ ಪಕ್ಷಗಳ ಜೊತೆ ಚುನಾವಣೆ ಎದುರಿಸಿದೆ.
* India Today Axis My India ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕರ್ನಾಟಕದ 28 ಸೀಟುಗಳ ಪೈಕಿ ಬಿಜೆಪಿ 20-22, ಜೆಡಿಎಸ್ 3, ಕಾಂಗ್ರೆಸ್ 3-5 ಸೀಟುಗಳಲ್ಲಿ ಗೆಲುವು ಸಾಧಿಸಲಿದ್ದಾರೆ.
* ರಾಜಸ್ಥಾನದಲ್ಲಿ 25 ಕ್ಷೇತ್ರಗಳ ಪೈಕಿ ಎನ್‌ಡಿಎ 16-19, ಇಂಡಿಯಾ 5-7, ಇತರರು 1-2 ಸ್ಥಾನಗಳನ್ನು ಪಡೆಯಲಿದ್ದಾರೆ.
* ಛತ್ತೀಸ್‌ಗಢ್‌ದ 11 ಕ್ಷೇತ್ರಗಳ ಪೈಕಿ ಎನ್‌ಡಿಎ 10-11, ಇಂಡಿಯಾ 0-1 ಸ್ಥಾನಗಳನ್ನುಗಳಿಸಲಿದೆ.
* ಮಧ್ಯ ಪ್ರದೇಶ ರಾಜ್ಯದ 29 ಸೀಟುಗಳ ಪೈಕಿ. ಎನ್‌ಡಿಎ 28-29, ಇಂಡಿಯಾ 0-1 ಸ್ಥಾನಗಳಲ್ಲಿ ಜಯಗಳಿಸಲಿದೆ.
*ಕೇರಳ ರಾಜ್ಯದ 20 ಸೀಟುಗಳ ಪೈಕಿ ಎನ್‌ಡಿಎ ಮೈತ್ರಿಕೂಟ 2-3, ಯುಡಿಎಫ್ 17-18 ಮತ್ತು ಎಲ್‌ಡಿಎಫ್ 0-1 ಸ್ಥಾನಗಳಲ್ಲಿ ಜಯಗಳಿಸಲಿದೆ.
* ತಮಿಳುನಾಡು ರಾಜ್ಯದ 39 ಸೀಟುಗಳ ಪೈಕಿ ಇಂಡಿಯಾ ಮೈತ್ರಿಕೂಟ 2-4, ಎಐಎಡಿಎಂಕೆ 0-2, ಇಂಡಿಯಾ ಮೈತ್ರಿಕೂಟ 33-37 ಸ್ಥಾನಗಳಲ್ಲಿಗಳಿಸಲಿದೆ.
* ಗುಜರಾತ್ ರಾಜ್ಯದ 26 ಸೀಟುಗಳ ಪೈಕಿ ಎನ್‌ಡಿಎ 25-26, ಇಂಡಿಯಾ 0-1 ಸ್ಥಾನಗಳಲ್ಲಿ ಜಯಗಳಿಸಲಿದೆ.
ಚುನಾವಣೋತ್ತರ ಸಮೀಕ್ಷೆಯ ಪ್ರಕಾರ 10.15ರ ಮಾಹಿತಿಯಂತೆ ಎನ್‌ಡಿಎ 294-329 ಸೀಟು, ಇಂಡಿಯಾ ಮೈತ್ರಿಕೂಟ 123-154 ಸ್ಥಾನಗಳಲ್ಲಿ ಜಯಗಳಿಸಲಿದೆ.












Click it and Unblock the Notifications