ಈ 5 ದೇಶಗಳ ಪ್ರಯಾಣಿಕರಿಗೆ ಭಾರತದಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ

ನವದೆಹಲಿ, ಡಿಸೆಂಬರ್ 28: ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್, ಥೈಲ್ಯಾಂಡ್ ಮತ್ತು ಸಿಂಗಾಪುರದಿಂದ ಆಗಮಿಸುವ ಪ್ರಯಾಣಿಕರು ಭಾರತದಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಎಲ್ಲಾ ದೇಶಗಳಲ್ಲಿ ಕೋವಿಡ್‌ ಸೋಂಕು ಹೆಚ್ಚಾಗಿ ಎಂದು ಕಂಡುಬಂದಿದೆ.

ಈ ವಿಚಾರವಾಗಿ ಕೇಂದ್ರ ಸರ್ಕಾರ ವಿದೇಶಿ ಪ್ರಯಾಣಿಕರ ಮೇಲೆ ಕಣ್ಗಾವಲು ಹೆಚ್ಚಿಸಿದೆ.

ಕಳೆದ ಎರಡು ದಿನಗಳಲ್ಲಿ ಭಾರತಕ್ಕೆ ಆಗಮಿಸಿದ 39 ವಿದೇಶಿ ಪ್ರಯಾಣಿಕರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು 'ಎನ್‌ಡಿಟಿವಿ' ವರದಿ ಮಾಡಿದೆ.

India to make negative Covid test mandatory for travellers from these 5 countries: Report

ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಭಾರತಕ್ಕೆ ಆಗಮಿಸಿದ ಮೂವತ್ತೊಂಬತ್ತು ಜನರಿಗೆ ಕೋವಿಡ್‌ ಇರುವುದಾಗಿ ತಿಳಿದುಬಂದಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ನಾಳೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ಕೋವಿಡ್ ಉಲ್ಬಣಗೊಂಡ ನಂತರ ಹೊಸ ಪ್ರೋಟೋಕಾಲ್ ಅಡಿಯಲ್ಲಿ 6,000 ಜನರನ್ನು ಪರೀಕ್ಷಿಸಲಾಯಿತು. ಅಂತಾರಾಷ್ಟ್ರೀಯ ವಿಭಾಗದಲ್ಲಿ ಆಗಮಿಸುವ ತಲಾ ಇಬ್ಬರು ಪ್ರಯಾಣಿಕರಿಗೆ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ.

ಇಲ್ಲಿಯವರೆಗೆ, ದೇಶದಲ್ಲಿ ಕೋವಿಡ್ ವೈರಸ್‌ನ 200 ತಳಿಗಳು ಪತ್ತೆಯಾಗಿವೆ. ಚೀನಾದಲ್ಲಿ ಹಾನಿಯನ್ನುಂಟು ಮಾಡುವ ನಾಲ್ಕು ರೂಪಾಂತರಗಳಲ್ಲಿ ಒಂದಾದ BF 7 ಸ್ಟ್ರೈನ್ ಅನ್ನು ಸಹ ಪ್ರತ್ಯೇಕಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಬಳಸಲಾಗುವ ಲಸಿಕೆಗಳು ರೂಪಾಂತರದ ವಿರುದ್ಧ ಪರಿಣಾಮಕಾರಿಗಿವೆ ಎಂದು ಪರಿಗಣಿಸಲಾಗಿದೆ.

ಚೀನಾದಲ್ಲಿ ಕೊರೊನಾ ವೈರಸ್‌ನ ನಾಲ್ಕು ರೂಪಾಂತರಗಳು ಕಾಣಿಸಿಕೊಂಡಿವೆ.

India to make negative Covid test mandatory for travellers from these 5 countries: Report

ಭಾರತವು ಹೈಬ್ರಿಡ್ ಇಮ್ಯುನಿಟಿಯಿಂದ ಲಾಭ ಪಡೆಯುತ್ತಿದೆ. ಲಸಿಕೆಗಳ ಮೂಲಕ ಹೆಚ್ಚಿರುವ ರೋಗನಿರೋಧಕ ಶಕ್ತಿ ಮೊದಲ, ಎರಡನೆಯ ಮತ್ತು ಮೂರನೇ ಅಲೆಗಳ ಮೂಲಕ ನೈಸರ್ಗಿಕ ಸೋಂಕಿನ ಸಂಯೋಜನೆಯಿಂದ ಭಾರತದಲ್ಲಿ ಕೋವಿಡ್‌ ಪರಿಸ್ಥಿತಿ ಅಷ್ಟೇನೂ ಗಂಭೀರವಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

'ಚೀನಾದಲ್ಲಿ ಮೂರರಿಂದ ನಾಲ್ಕು ಡೋಸ್‌ಗಳ ಹೊರತಾಗಿಯೂ ಅವರು ಸ್ವೀಕರಿಸಿದ ಲಸಿಕೆ ಬಹುಶಃ ಕಡಿಮೆ ಪರಿಣಾಮಕಾರಿಯಾಗಿದೆ' ಎಂದು ತಜ್ಞರು ಹೇಳಿದ್ದಾರೆ.

ಕೋವಿಡ್ ಉಲ್ಬಣಗೊಳ್ಳುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಕಡ್ಡಾಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಾಂಡವಿಯಾ ಅವರು ನಿನ್ನೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಅಣಕು ಡ್ರಿಲ್ ಅನ್ನು ಪರಿಶೀಲಿಸಿದರು. ಹಾಸಿಗೆಗಳು, ವೆಂಟಿಲೇಟರ್‌ಗಳು, ಆಮ್ಲಜನಕ, ತುರ್ತು ಔಷಧಗಳು ಮತ್ತು ಆರೋಗ್ಯ ವೃತ್ತಿಪರರ ಸನ್ನದ್ಧತೆಯನ್ನು ಪರಿಶೀಲಿಸುವಂತೆ ಸರ್ಕಾರ ನಿರ್ದೇಶಿಸಿದೆ.

'ದೇಶದಲ್ಲಿ ಕೋವಿಡ್ ಉಲ್ಬಣವಾಗದಂತೆ ಖಚಿತಪಡಿಸಿಕೊಳ್ಳಲು, ಜಾಗರೂಕರಾಗಿರಿ ಎಂದು ಪ್ರಧಾನಿ ಮೋದಿ ಕೇಳಿದ್ದಾರೆ. ಕೋವಿಡ್ ಪ್ರಕರಣಗಳು ಹೆಚ್ಚಾಗದಂತೆ ತಡೆಯಲು ಸರ್ಕಾರವೂ ತಯಾರಿ ನಡೆಸುತ್ತಿದೆ' ಎಂದು ಮಾಂಡವಿಯಾ ಹೇಳಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿನೋಮ್‌ ಸಿಕ್ವೆನ್ಸಿಂಗ್‌ ಪರೀಕ್ಷೆ ಹೆಚ್ಚಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ. ವಿದೇಶದಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡುವುದನ್ನು ಕಡ್ಡಾಯಗೊಳಿಸಿದೆ.

ಭಾರತಕ್ಕೆ ಆಗಮಿಸುವ ಕನಿಷ್ಠ ಐದು ರಾಷ್ಟ್ರಗಳ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ನಡೆಸಲಾಗುತ್ತಿರುವ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+