ನೌಕಾಪಡೆಯ ವಿರುದ್ಧ ಟ್ರಾನ್ಸ್ ಜೆಂಡರ್ ಕಾನೂನು ಹೋರಾಟ
ಲಿಂಗ ಪರಿವರ್ತನೆಗೊಂಡಿದ್ದಕ್ಕೆ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ನೌಕಾಪಡೆ ವಿರುದ್ಧ ಕಾನೂನು ಸಮರ. ನೌಕಾಪಡೆಯ ಇಂಜಿನಿಯರ್ ಶಾಬಿ (ಮೊದಲ ಹೆಸರು ಎಂ.ಕೆ. ಗಿರಿ) ಹೇಳಿಕೆ.
ನವದೆಹಲಿ, ಆಗಸ್ಟ್ 30: ಲಿಂಗ್ ಪರಿವರ್ತನೆ ಮಾಡಿಸಿಕೊಂಡಿದ್ದಕ್ಕಾಗಿ ತಮ್ಮನ್ನು ಸೇವೆಯಿಂದ ತೆಗೆದುಹಾಕಲು ನಿರ್ಧರಿಸಿರುವ ಭಾರತೀಯ ನೌಕಾಪಡೆಯ ವಿರುದ್ಧ ಕಾನೂನು ಸಮರ ಸಾರುವುದಾಗಿ ನೌಕಾಪಡೆಯಲ್ಲಿ ಹಡಗು ನಿರ್ಮಾಣ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಶಾಬಿ (ಮೊದಲ ಹೆಸರು ಎಂ.ಕೆ. ಗಿರಿ) ತಿಳಿಸಿದ್ದಾರೆ.
ಹುಟ್ಟಿನಿಂದ ಗಂಡಾಗಿ ಬೆಳೆದು ಯೌವ್ವನಕ್ಕೆ ಕಾಲಿಡುವ ಹೊತ್ತಿನಲ್ಲಿ ಮಾನಸಿಕವಾಗಿ ಹೆಣ್ಣಿನ ಗುಣಲಕ್ಷಣಗಳು ಮೈದಳೆದಿದ್ದರಿಂದಾಗಿ ತಾವು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದಿರುವುದಾಗಿ ಹೇಳಿದ್ದಾರೆ ಅವರು.

ವೈದ್ಯರು, 'ಜೆಂಡರ್ ಐಡೆಂಟಿಟಿ ಡಿಸಾರ್ಡರ್' ಎಂಬ ಸಮಸ್ಯೆಯನ್ನು ತಮ್ಮಲ್ಲಿ ಇರುವುದಾಗಿ ಹೇಳಿದ್ದು ಆ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ, ತಾವು ಲಿಂಗ ಪರಿವರ್ತನೆಗೆ ಮುಂದಾಗಿದ್ದಾರೆ ಅವರು ತಿಳಿಸಿದ್ದಾರೆ.
ಆದರೆ, ಲಿಂಗ ಪರಿವರ್ತನೆಗೊಂಡು ಪುನಃ ಕರ್ತವ್ಯಕ್ಕೆ ಹಾಜರಾದಾಗ, ತಮ್ಮನ್ನು ವಿಚಿತ್ರವಾಗಿ ನೋಡಲಾಯಿತು ಎಂದು ವ್ಯಥೆ ತೋಡಿಕೊಂಡಿರುವ ಅವರು, ಇಂಥ ಸಂದರ್ಭದಲ್ಲೇ ಈಗ ತಮ್ಮನ್ನು ಕೆಲಸದಿಂದ ತೆಗೆದುಹಾಕಲು ನೌಕಾಪಡೆ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಈ ಹಿನ್ನೆಲೆಯಲ್ಲಿ ತಾವು ಕಾನೂನೂ ಹೋರಾಟ ನಡೆಸುವುದಾಗಿ ಅವರು ತಿಳಿಸಿದರು.












Click it and Unblock the Notifications