• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊದಲ ಖಾಸಗಿ ರಾಕೆಟ್ ವಿಕ್ರಮ್‌ ಎಸ್‌

|
Google Oneindia Kannada News

ಬೆಂಗಳೂರು, ನವೆಂಬರ್‌ 18: ಭಾರತದಲ್ಲಿ ಮೊದಲು ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ವಿಕ್ರಮ್ ಎಸ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ತನ್ನ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಿದೆ.

ನಾಲ್ಕು ವರ್ಷ ವಯಸ್ಸಿನ ಸ್ಟಾರ್ಟಪ್ ಸ್ಕೈರೂಟ್ ಏರೋಸ್ಪೇಸ್ ತನ್ನ ವಿಕ್ರಮ್ ಎಸ್ ರಾಕೆಟ್‌ನ ಮೊದಲ ಉಡಾವಣೆ ಮಾಡಲು ಡೆಕ್‌ಗಳನ್ನು ತೆರವುಗೊಳಿಸಲಾಗಿದೆ. ಇದು ದೇಶದ ಬಾಹ್ಯಾಕಾಶ ಉದ್ಯಮಕ್ಕೆ ಖಾಸಗಿ ವಲಯದ ಪ್ರವೇಶದ ಬೆಳವಣಿಗೆಯನ್ನು ಗುರುತಿಸುತ್ತದೆ. ಇದು ಆರಂಭದಿಂಲೂ ಸರ್ಕಾರಿ ಸಂಸ್ಥೆ ಇಸ್ರೋ ಪ್ರಾಬಲ್ಯ ಹೊಂದಿದೆ.

ಇಸ್ರೋ ಸಹಯೋಗದೊಂದಿಗೆ 'ಅಗ್ನಿಕುಲ್' ರಾಕೆಟ್ ಉಡಾವಣೆ? ಇಸ್ರೋ ಸಹಯೋಗದೊಂದಿಗೆ 'ಅಗ್ನಿಕುಲ್' ರಾಕೆಟ್ ಉಡಾವಣೆ?

2020ರಲ್ಲಿ ಕೇಂದ್ರ ಸರ್ಕಾರವು ಖಾಸಗಿಯವರಿಗೆ ಬಾಹ್ಯಾಕಾಶವನ್ನು ಮುಕ್ತಗೊಳಿಸಿದ ನಂತರ ಭಾರತದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅವಕಾಶ ಪಡೆದ ಮೊದಲ ಕಂಪೆನಿ ಸ್ಕೈ ರೂಟ್‌ ಏರೋಸ್ಪೇಸ್‌ ಆಗಿದೆ. ಈಗ ಮೊದಲ ವಿಕ್ರಮ್‌ ಎಸ್‌ ರಾಕೆಟ್‌ನ ಉಡಾವಣೆಯನ್ನು ಬೆಳಗ್ಗೆ 11.30ಕ್ಕೆ ನಿಗದಿಪಡಿಸಲಾಗಿದೆ. ಈ ಹಿಂದೆ ಉಡಾವಣಾ ದಿನಾಂಕವನ್ನು ನಿಗದಿಪಡಿಸಲಾಗಿತ್ತು.

ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ನಂತರ ವಿಕ್ರಮ್ ಎಸ್ 81 ಕಿಮೀ ಎತ್ತರಕ್ಕೆ ಹಾರಲಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ, ದಿವಂಗತ ವಿಕ್ರಮ್ ಸಾರಾಭಾಯಿಂದ ಅವರಿಗೆ ಗೌರವಾರ್ಥವಾಗಿ ಉಡಾವಣಾ ವಾಹನವನ್ನು ಮೀಸಲಿರಿಸಲಾಗಿದೆ. 'ಪ್ರಾರಂಭ' (ಪ್ರಾರಂಭ) ಶೀರ್ಷಿಕೆಯ ಮಿಷನ್ ರಾಕೆಟ್‌ ಎರಡು ದೇಶೀಯ ಗ್ರಾಹಕರು ಮತ್ತು ವಿದೇಶಿ ಗ್ರಾಹಕರಿಗೆ ಸೇರಿದ ಮೂರು ಪೇಲೋಡ್‌ಗಳನ್ನು ಹೊತ್ತೊಯ್ಯಲಿದೆ.

6 ಮೀಟರ್‌ ಎತ್ತರವುಳ್ಳ ವಿಕ್ರಮ್‌ ಎಸ್‌ ರಾಕೆಟ್‌ ವಿಶ್ವದ ಮೊದಲ ಸಂಪೂರ್ಣ ಸಂಯೋಜಿತ ರಾಕೆಟ್‌ಗಳಲ್ಲಿ ಒಂದಾಗಿದೆ. ಇದು ಉಡಾವಣಾ ವಾಹನದ ಸ್ಪಿನ್ ಸ್ಥಿರತೆಗಾಗಿ 3-ಡಿ ಮುದ್ರಿತ ಘನ ಥ್ರಸ್ಟರ್‌ಗಳನ್ನು ಹೊಂದಿದೆ ಎಂದು ಸ್ಕೈರೂಟ್ ಕಾರ್ಯಕಾರಿಯೊಬ್ಬರು ಹೇಳಿದ್ದಾರೆ. ರಾಕೆಟ್‌ನ ಉಡಾವಣಾ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಜಡತ್ವ ಮಾಪನ, ಗ್ಲೋಬಲ್‌ ಪ್ರೊಸಿಷನಿಂಗ್‌ ಸಿಸ್ಟಮ್‌, ಆನ್‌ ಬೋರ್ಡ್‌ ಕ್ಯಾಮಾರ, ಡೇಟಾ ಸ್ವಾಧೀನ ಮತ್ತು ವಿದ್ಯುತ್‌ ವ್ಯವಸ್ಥೆಗಳಂತಹ ವಿಕ್ರಮ್‌ ಸರಣಿಯಲ್ಲಿ ಏವಿಯನಿಕ್ಸ್‌ ಸಿಸ್ಟಮ್‌ಗಳಂತಹ ವ್ಯವಸ್ಥೆ ಹೊಂದಿದೆ.

ಭಾರತದ ಬಾಹ್ಯಾಕಾಶ ನಿಯಂತ್ರಕ ಇನ್ ಸ್ಪೇಸ್ ಬುಧವಾರ ಸ್ಕೈರೂಟ್‌ನ ವಿಕ್ರಮ್ ಎಸ್ ಉಪ ಕಕ್ಷೆಯ ವಾಹನವನ್ನು ಉಡಾವಣೆಗೆ ಹಾರಿಸಲಿದೆ. ಭಾರತದಲ್ಲಿ ಇದು ಖಾಸಗಿ ಕ್ಷೇತ್ರದ ಬಹುದೊಡ್ಡ ಹೆಜ್ಜೆಯಾಗಿದೆ. ಹೀಗಾಗಿ ರಾಕೆಟ್ ಉಡಾವಣೆಗಾಗಿ ಅಧಿಕಾರ ಪಡೆದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಸ್ಕೈರೂಟ್‌ಗೆ ಅಭಿನಂದನೆಗಳು" ಎಂದು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದ ಅಧ್ಯಕ್ಷ ಪವನ್ ಗೋಯೆಂಕಾ ಹೇಳಿದ್ದಾರೆ.

ಭಾರತದ ಮೊದಲ ಖಾಸಗಿ ರಾಕೆಟ್‌

ಭಾರತದ ಮೊದಲ ಖಾಸಗಿ ರಾಕೆಟ್‌

ವಿಕ್ರಮ್ ಎಸ್ ಸಬ್‌ಆರ್ಬಿಟಲ್ ರಾಕೆಟ್‌ ಚೆನ್ನೈ ಮೂಲದ ಸ್ಟಾರ್ಟ್ ಅಪ್ ಸ್ಪೇಸ್‌ಕಿಡ್ಜ್, ಆಂಧ್ರಪ್ರದೇಶ ಮೂಲದ ಎನ್ ಸ್ಪೇಸ್‌ ಟೆಕ್ ಮತ್ತು ಅರ್ಮೇನಿಯನ್ ಬಾಜೂಮ್‌ಕ್ಯೂ ಸ್ಪೇಸ್ ರಿಸರ್ಚ್ ಲ್ಯಾಬ್‌ನ ಮೂರು ಪೇಲೋಡ್‌ಗಳನ್ನು ಹೊತ್ತೊಯ್ಯುತ್ತದೆ. ಇಸ್ರೋದ ಮಾರ್ಗದರ್ಶನದಲ್ಲಿ ಶ್ರೀಹರಿಕೋಟಾದಿಂದ ಸ್ಕೈರೂಟ್‌ ಏರೋಸ್ಪೇಸ್‌ ಅಭಿವೃದ್ಧಿಪಡಿಸಿದ ಮೊದಲ ಖಾಸಗಿ ರಾಕೆಟ್‌ ಅನ್ನು ಅನ್ನು ಉಡಾವಣೆ ಮಾಡುವ ಮೂಲಕ ಭಾರತವು ಇತಿಹಾಸವನ್ನು ಬರೆಯಲು ಸಿದ್ಧವಾಗಿದೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

102 ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ

102 ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ

ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಗಳು ಸ್ಟಾರ್ಟ್ ಅಪ್‌ಗಳ ಸಾಮರ್ಥ್ಯವನ್ನು ಅನಾವರಣಗೊಳಿಸಿವೆ. ಇದು ಕಡಿಮೆ ಅವಧಿಯಲ್ಲಿ ಸುಮಾರು 102 ಸ್ಟಾರ್ಟ್‌ಅಪ್‌ಗಳು ಬಾಹ್ಯಾಕಾಶ ನಿರ್ವಹಣೆ, ನ್ಯಾನೊ ಉಪಗ್ರಹ, ಉಡಾವಣಾ ವಾಹನ, ನೆಲದ ವ್ಯವಸ್ಥೆಗಳು ಮತ್ತು ಸಂಶೋಧನೆಯ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಇಸ್ರೋ ಅಧ್ಯಕ್ಷದಿಂದ ಪ್ರಾರಂಭ್‌ ಅನಾವರಣ

ಇಸ್ರೋ ಅಧ್ಯಕ್ಷದಿಂದ ಪ್ರಾರಂಭ್‌ ಅನಾವರಣ

ಸಾಮಾಜಿಕ ಮಾಧ್ಯಮದಲ್ಲಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಕೈರೂಟ್ ಏರೋಸ್ಪೇಸ್, ​ಖಾಸಗಿ ಬಾಹ್ಯಾಕಾಶಕ್ಕೆ ಭಾರತದ ಇತಿಹಾಸವನ್ನು ಸೃಷ್ಟಿಸಲು ಸಿದ್ಧವಾಗಿರುವ ನಮ್ಮ ಮಿಷನ್ ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಗೆ ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದೆ. ಇನ್‌ಸ್ಪೇಸ್‌ ತ್ರಾಂತ್ರಿಕ ಉಡಾವಣೆಗೆ ಅನುಮತಿಯ ನಂತರ ನವೆಂಬರ್‌ ಮೊದಲ ವಾರ ಬೆಂಗಳೂರಿನಲ್ಲಿ ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಅವರು ಪ್ರಾರಂಭ ಖಾಸಗಿ ರಾಕೆಟ್ ಅನ್ನು ಅನಾವರಣಗೊಳಿಸಿದ್ದರು.

ಶ್ರೀಹರಿಕೋಟಾದಿಂದ ಉಡಾವಣೆ

ಶ್ರೀಹರಿಕೋಟಾದಿಂದ ಉಡಾವಣೆ

ಸ್ಕೈರೂಟ್ ಏರೋಸ್ಪೇಸ್ ಸಹ ಸಂಸ್ಥಾಪಕ ಪವನ್ ಕೆ. ಚಂದನ, ನಮ್ಮ ತಂಡದಿಂದ ತಿಂಗಳುಗಳ ನಿದ್ದೆಯಿಲ್ಲದ ರಾತ್ರಿಗಳು ಮತ್ತು ನಿಖರವಾದ ಸಿದ್ಧತೆಗಳ ನಂತರ ಶ್ರೀಹರಿಕೋಟಾದ ಸುಂದರ ದ್ವೀಪದಿಂದ ನಮ್ಮ ಮೊದಲ ಉಡಾವಣಾ ಮಿಷನ್ ಪ್ರಾರಂಭ್ ಅನ್ನು ಘೋಷಿಸಲು ತುಂಬಾ ರೋಮಾಂಚನವಾಯಿತು ಎಂದು ಹೇಳಿದರು.

English summary
India's first privately developed rocket Vikram S will be launched by the Indian Space Research Organization (ISRO) on Friday from its space station at Sriharikota in Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X