ಭಾರತದಲ್ಲಿ ಮತ್ತೆ 54,366 ಕೊರೊನಾ ಸೋಂಕಿತರು ಪತ್ತೆ
ನವದೆಹಲಿ, ಅಕ್ಟೋಬರ್ 23: ಭಾರತದಲ್ಲಿ ಇಂದು 54,366 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಒಟ್ಟು 77,61,312 ಪ್ರಕರಣಗಳಿವೆ.
ಒಂದೇ ದಿನದಲ್ಲಿ 690 ಮಂದಿ ಮೃತಪಟ್ಟಿದ್ದು, ಒಟ್ಟು ಸಾವನ್ನಪ್ಪಿದ್ದವರ ಸಂಖ್ಯೆ 1,17,306ಕ್ಕೆ ತಲುಪಿದೆ.

6,95,509 ಸಕ್ರಿಯ ಪ್ರಕರಣಗಳಿವೆ.69,48,497 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುರುವಾರ ಹೊಸದಾಗಿ 55,838 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು, ಒಂದೇ ದಿನದಲ್ಲಿ 702 ಮಂದಿ ಸಾವನ್ನಪ್ಪಿದ್ದರು.
ಇನ್ನು 77,61,312 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 73,979 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ದೇಶದಲ್ಲಿ ಒಟ್ಟಾರೆ 6,95,509 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ತಿಳಿದುಬಂದಿದೆ.
ಇದರೊಂದಿಗೆ ದೇಶದಲ್ಲಿ ಪ್ರಸ್ತುತ 6,95,509 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 14,42,722 ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ನಡೆಸಲಾಗಿದ್ದು, ಇದರೊಂದಿಗೆ ದೇಶದಲ್ಲಿ ಈ ವರೆಗೂ 10,01,13,085 ಕೊವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ.












Click it and Unblock the Notifications