ಭಾರತ; 24 ಗಂಟೆಯಲ್ಲಿ 36,011 ಹೊಸ ಕೋವಿಡ್ ಪ್ರಕರಣ

ನವದೆಹಲಿ, ಡಿಸೆಂಬರ್ 6: ಭಾರತದಲ್ಲಿ 24 ಗಂಟೆಯಲ್ಲಿ 36,011 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 96,44,222ಕ್ಕೆ ಏರಿಕೆಯಾಗಿದೆ.

ಕೇಂದ್ರ ಗೃಹ ಸಚಿವಾಲಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ ದೇಶದಲ್ಲಿ 482 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ ದೇಶದಲ್ಲಿ ಮೃಪಟ್ಟವರ ಸಂಖ್ಯೆ 1,40,182.

24 ಗಂಟೆಯಲ್ಲಿ ದೇಶದಲ್ಲಿ 41,970 ಜನರು ಗುಣಮುಖರಾಗಿದ್ದಾರೆ. ಇದುವರೆಗೂ 91,00,792 ಜನರು ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,03,248.

India Reported 36,011 New COVID 19 Case

ದೇಶದಲ್ಲಿ ಡಿಸೆಂಬರ್ 5ರ ತನಕ 14,69,86,575 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಶನಿವಾರ 11,01,063 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಹೇಳಿದೆ.

ಯಾವ ರಾಜ್ಯದಲ್ಲಿ ಎಷ್ಟು? : ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಶನಿವಾರ ರಾಜ್ಯದಲ್ಲಿ 4,922 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 18,47,509ಕ್ಕೆ ಏರಿಕೆಯಾಗಿದೆ.

ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿದೆ. ಶನಿವಾರ 1325 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 8,91,685. ಸಕ್ರಿಯ ಪ್ರಕರಣಗಳು 24,959.

ಆಂಧ್ರ ಪ್ರದೇಶದಲ್ಲಿ ಶನಿವಾರ ಹೊಸದಾಗಿ 630 ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 8,71,305 ಆಗಿದ್ದು, ರಾಜ್ಯ ಒಟ್ಟು ಸೋಂಕಿತರ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದೆ.

ತಮಿಳುನಾಡು 7,88,920, ಕೇರಳ 6,31,616, ದೆಹಲಿ 5,89,544, ಉತ್ತರ ಪ್ರದೇಶ 5,53,012, ಪಶ್ಚಿಮ ಬಂಗಾಳದಲ್ಲಿ 4,99,697 ಕೋವಿಡ್ ಪ್ರಕರಣಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+