60 ಕೋಟಿ ಕೊರೊನಾ ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಭಾರತ ಸಿದ್ಧ

ನವದೆಹಲಿ, ಡಿಸೆಂಬರ್ 12: 60 ಕೋಟಿ ಕೊರೊನಾ ಲಸಿಕೆ ಸಂಗ್ರಹ ಹಾಗೂ ವಿತರಣೆಗೆ ಭಾರತ ಸಿದ್ಧವಾಗಿದೆ.

3 ರಿಂದ 8 ತಿಂಗಳಲ್ಲಿ ಕೊವಿಡ್ ಲಸಿಕೆಯನ್ನು ಸಂಗ್ರಹಿಸಿಡುವುದು ಹಾಗೂ ಅದರ ವಿತರಣೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ.ಮೈನಸ್ 2 ರಿಂದ 8 ಡಿಗ್ರಿ ಸೆಲ್ಸಿಯಸ್‌ ವರೆಗಿನ ತಾಪಮಾನದ ಶೀಥಲೀಕರಣ ಘಟಕವನ್ನು ಸಿದ್ಧಪಡಿಸಿದೆ ಎಂದು ವಿಕೆ ಪೌಲ್ ತಿಳಿಸಿದ್ದಾರೆ.

ದೇಶದ ದೊಡ್ಡ ಚುನಾವಣಾ ಕಾರ್ಯತಂತ್ರದ ವ್ಯವಸ್ಥೆಯನ್ನು ಬಳಸಿಕೊಂಡು ಲಸಿಕೆ ವಿತರಿಸಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

India Ready For 60 Crore Covid-19 Vaccine Shots In 6-8 Months

ಸೆರಂ, ಭಾರತ್, ಝೈಡಸ್ ಹಾಗೂ ಸ್ಪುಟ್ನಿಕ್ ಲಸಿಕೆಗಳಿಗೆ ಸಾಮಾನ್ಯ ಶೀಥಲೀಕರಣ ವ್ಯವಸ್ಥೆ ಸಾಕಾಗುತ್ತದೆ. ಈ ಲಸಿಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಶೀಘ್ರದಲ್ಲಿ ಡಿಜಿಸಿಐನಿಂದ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ದೊರೆಯುವ ಬಗ್ಗೆ ಸರ್ಕಾರ ನಿರೀಕ್ಷೆಯಲ್ಲಿದೆ.

ಭಾರತದಲ್ಲಿ ವರ್ಷಕ್ಕೆ 10 ಕೋಟಿ ಡೋಸ್ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದಿಸಲು ಔಷಧ ಕಂಪನಿ ಹೆಟೆರೊ ಕಳೆದ ತಿಂಗಳು ರಷ್ಯಾದ ಆರ್‌ಡಿಐಎಫ್ ಜತೆ ಒಪ್ಪಂದ ಮಾಡಿಕೊಂಡಿದೆ.

ದೇಶದಲ್ಲಿ ಲಸಿಕೆ ಉತ್ಪಾದನೆ ವಿಚಾರದಲ್ಲಿ ಮುಂಚೂಣಿಯಲ್ಲಿರುವ ನಾಲ್ಕು ಸಂಸ್ಥೆಗಳು ಮಾಡಿರುವ ಮನವಿಯಲ್ಲಿರುವ ಅಂಶಗಳನ್ನು ಈ ಸಿದ್ಧತೆಗಳು ಒಳಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+