HMPV: ಚೀನಾದಲ್ಲಿ ಹೊಸ ವೈರಸ್; ನಾವು ಸಜ್ಜಾಗಿದ್ದೆವೆ ಎಂದ ಭಾರತ

ಜಗತ್ತಿಗೆ ಕೋವಿಡ್-19 ಎನ್ನುವ ವೈರಸ್ ಕೊಟ್ಟು ಜಗತ್ತನ್ನೇ ಕಷ್ಟಕ್ಕೆ ಸಿಲುಕುವಂತೆ ಮಾಡಿದ್ದ ಚೀನಾದಲ್ಲಿ ಇದೀಗ ಹೊಸ ವೈರಸ್ ಕಾಣಿಸಿಕೊಂಡಿದ್ದು ಚೀನಾದಲ್ಲಿ ತುರ್ತು ಸ್ಥಿರತಿ ಉಂಟಾಗುವಂತೆ ಮಾಡಿದೆ. ಚೀನಾದ ಪರಿಸ್ಥಿತಿ ನೋಡಿ ಇತರೆ ದೇಶಗಳು ಕೂಡ ಆತಂಕಗೊಂಡಿವೆ. ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ ಭಾರತದಲ್ಲಿ ಕೂಡ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಎಲ್ಲಾ ಸಿದ್ದತೆ ಮಾಡಿಕೊಂಡಿದೆ.

ಚೀನಾದಲ್ಲಿ ಕಾಣಿಸಿಕೊಂಡ ಎಚ್‌ಎಂಪಿವಿ (ಮಾನವ ಮೆಟಾಪ್‌ನ್ಯೂಮೋವೈರಸ್) ಹರಡುತ್ತಿದ್ದು ಭಾರತೀಯರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ. ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ನಿಭಾಯಿಸಲು ನಾವು ಸಿದ್ದವಾಗಿದ್ದೇನೆ, ಚೀನಾದಲ್ಲಿ ಇರುವ ಪರಿಸ್ಥಿತಿ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ.

india prepared handling hmpv situation china

ಕಳೆದ ಕೆಲವು ವಾರಗಳಲ್ಲಿ ಚೀನಾದಲ್ಲಿ ಉಸಿರಾಟದ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿರುವ ನಡುವೆ, ದೆಹಲಿಯಲ್ಲಿ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO), ವಿಪತ್ತು ನಿರ್ವಹಣೆ (DM) ಕೋಶ, ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮ (IDSP), ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ತುರ್ತು ವೈದ್ಯಕೀಯ ಪರಿಹಾರ (EMR) ನ ಹಲವಾರು ತಜ್ಞರು ದೆಹಲಿಯ ಏಮ್ಸ್ ಸೇರಿದಂತೆ ಹಲವು ಆಸ್ಪತ್ರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಆತಂಕಪಡುವ ಅಗತ್ಯವಿಲ್ಲ

ಎಚ್‌ಎಂಪಿವಿ ಬಗ್ಗೆ ಸಭೆ ನಡೆದ ಬಳಿಕ ಪ್ರತಿಕ್ರಿಯೆ ನೀಡಿ ಸಚಿವಾಲಯ, ಚೀನಾದಲ್ಲಿ ಈಗ ಇರುವ ಪರಿಸ್ಥಿತಿ ವಿಶೇಷವೇನಲ್ಲ, ಈ ಕಾಲದಲ್ಲಿ ಅಲ್ಲಿ ಉಸಿರಾಟ ಆರೋಗ್ಯ ಸಮಸ್ಯೆ ಸಾಮಾನ್ಯ ಎನ್ನುವ ಅಭಿಪ್ರಾಯಕ್ಕೆ ಬರಲಾಗಿದೆ. ಇನ್‌ಫ್ಲುಯೆನ್ಸ ವೈರಸ್, ಆರ್ ಎಸ್‌ವಿ, ಎಚ್‌ಎಂಪಿವಿ ವೈರಸ್‌ಗಳು ಸಾಮಾನ್ಯ ಎಂದು ಸಚಿವಾಲಯ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+