ಪಾಕಿಸ್ತಾನದ ಮೇಲೆ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಮಾನ ತೆರಳಲ್ಲ

ನವದೆಹಲಿ, ಜೂನ್ 12: ಕಿರ್ಗಿಸ್ತಾನದ ಬಿಷ್ಕೆಕ್ ನಲ್ಲಿ ನಡೆಯಲಿರುವ ಶಾಂಘೈ ಕೋ ಆಪರೇಟಿವ್ ಆರ್ಗನೈಸೇಷನ್ ಪ್ರಾದೇಶಿಕ ಸಭೆಗೆ ಬುಧವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ತೆರಳುತ್ತಿದ್ದು, ಅವರ ವಿಮಾನವು ಪಾಕಿಸ್ತಾನದ ಮೇಲೆ ತೆರಳುತ್ತಿಲ್ಲ ಎಂದು ವಿದೇಶಾಂಗ ಸಚಿವಾಲಯ ಬುಧವಾರ ಹೇಳಿದೆ.

ಪಾಕಿಸ್ತಾನದ ವಾಯು ಗಡಿಯಲ್ಲಿ ತೆರಳಲು ಈಗಾಗಲೇ 'ತಾತ್ವಿಕ ಒಪ್ಪಿಗೆ' ಸಿಕ್ಕಾಗಿತ್ತು. ಹಾಗಿದ್ದರೆ ಬಿಷ್ಕೆಕ್ ಗೆ ಪ್ರಧಾನಿ ಮೋದಿ ಅವರ ವಿಮಾನ ಯಾವ ಮಾರ್ಗದಲ್ಲಿ ತೆರಳುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರರು ಮಾತನಾಡಿ, ಭಾರತ ಸರಕಾರದ ಬಳಿ ಬಿಷ್ಕೆಕ್ ಗೆ ತೆರಳುವುದಕ್ಕೆ ಎರಡು ಆಯ್ಕೆಗಳಿದ್ದವು. ಒಮನ್, ಇರಾನ್ ಹಾಗೂ ಮಧ್ಯ ಏಷ್ಯಾ ದೇಶಗಳ ಮೂಲಕ ಬಿಷ್ಕೆಕ್ ಗೆ ತೆರಳಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಭಾರತದ ವಾಯು ಸೇನೆಯು ಬಾಲಾಕೋಟ್ ನಲ್ಲಿ ಜೈಷ್ ಇ ಮೊಹ್ಮದ್ ಉಗ್ರ ನೆಲೆ ಮೇಲೆ ದಾಳಿ ನಡೆಸಿದ ನಂತರ ಪಾಕಿಸ್ತಾನದ ವಾಯು ಗಡಿಯನ್ನು ಫೆಬ್ರವರಿ ಇಪ್ಪತ್ತಾರರಂದು ಬಂದ್ ಮಾಡಲಾಗಿತ್ತು. ಆ ನಂತರ ಹನ್ನೊಂದರ ಪೈಕಿ ಎರಡು ಮಾರ್ಗ ಮಾತ್ರ ತೆರೆದಿದ್ದು, ಅದು ಕೂಡ ದಕ್ಷಿಣ ಪಾಕಿಸ್ತಾನದ ಮೂಲಕ ಮಾತ್ರ ತೆರೆದಿದೆ.

India PM Modi flight will not fly on Pakistan while going to SCO

ಬಿಷ್ಕೆಕ್ ಗೆ ತೆರಳುವುದಕ್ಕೆ ಪಾಕಿಸ್ತಾನದ ಅನುಮತಿಯನ್ನು ಭಾರತ ಕೋರಿತ್ತು. ಅದಕ್ಕೆ ಪಾಕ್ ಕೂಡ ತಾತ್ವಿಕ ಒಪ್ಪಿಗೆ ನೀಡಿದ್ದಾಗಿ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಇನ್ನು ಎಸ್ ಸಿಒನಲ್ಲಿ ಪಾಕಿಸ್ತಾನದ ಇಮ್ರಾನ್ ಖಾನ್ ಕೂಡ ಭಾಗಿ ಆಗುತ್ತಿದ್ದರೂ ಮೋದಿ ಅವರು ಇಮ್ರಾನ್ ರನ್ನು ಭೇಟಿ ಆಗುತ್ತಿಲ್ಲ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಪಾಕಿಸ್ತಾನದ ವಾಯು ಸೀಮೆಯು ಬಂದ್ ಮಾಡಿರುವುದರಿಂದ ಏರ್ ಇಂಡಿಯಾ, ಇಂಡಿಗೋ ವಿಮಾನಗಳ ಹಾರಾಟಕ್ಕೆ ತೊಂದರೆಯಾಗಿದೆ. ಇನ್ನು ಈ ರೀತಿಯ ಭಾಗಶಃ ನಿಷೇಧವನ್ನು ಭಾರತ ಕಡೆಯ ಪಾಕಿಸ್ತಾನದ ಪೂರ್ವ ಗಡಿಯಲ್ಲಿ ಜೂನ್ ಹದಿನಾಲ್ಕರ ತನಕ ವಿಸ್ತರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+