ಅಗಲಿದ ನಕ್ಷತ್ರ ಸ್ಟೀಫನ್ ಹಾಕಿಂಗ್ ಗೆ ಕಂಬನಿ ಮಿಡಿದ ಗಣ್ಯರು

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 14: ವಿಜ್ಞಾನ ಕ್ಷೇತ್ರದ ದೈತ್ಯ ಪ್ರತಿಭೆ ಸ್ಟೀಫನ್ ಹಾಕಿಂಗ್ ನಿಧನರಾದ ಸುದ್ದಿ ಕೇಳಿ ವಿಶ್ವದ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದಾರೆ. ದೈಹಿಕ ನ್ಯೂನತೆಯನ್ನೆಲ್ಲ ಮೀರಿ ಮನೋಬಲದಿಂದ ಬದುಕುಳಿದ ಸ್ಟೀಫನ್ ಹಾಕಿಂಗ್ ಭೌತಶಾಸ್ತ್ರ ವಿಜ್ಞಾನಿಯಾಗಿ ಹತ್ತು, ಹಲವು ಸಂಶೋಧನೆಗಳನ್ನು ಮಾಡಿದವರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

1963 ರಲ್ಲೇ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರಾಸಿಸ್ (ಅಥವಾ ALS)ಎಂಬ ನರಸಂಬಂಧೀ ಕಾಯಿಲೆ ತುತ್ತಾಗಿ, ಬದುಕುಳಿಯುವುದೇ ಅನುಮಾನ ಎಂದುಕೊಂಡಿದ್ದ ಹಾಕಿಂಗ್ ಗೆ ಮಾತನಾಡುವುದಕ್ಕೂ ಆಗುತ್ತಿರಲಿಲ್ಲ. ಧ್ವನಿ ಸಂವೇದನಾ ಯಂತ್ರದ ಮೂಲಕವೇ ಸಂವಹನ ನಡೆಸುತ್ತಿದ್ದ ಅವರು 76 ವರ್ಷಗಳ ಕಾಲ ಬದುಕಿ, 40 ವರ್ಷಗಳ ಕಾಲ ವಿಜ್ಞಾನ ಕ್ಷೇತ್ರಕ್ಕೆ ಅನಂತ ಕೊಡುಗೆ ನೀಡಿದ್ದಾರೆ.

ವಿಜ್ಞಾನ ಮಾಂತ್ರಿಕ ಸ್ಟೀಫನ್ ಹಾಕಿಂಗ್ ಬಗ್ಗೆ ಕುತೂಹಲದ 5 ಸಂಗತಿ

ಅವರ ಅಗಲಿಕೆಗೆ ದೇಶದ ನಾನಾ ಗಣ್ಯರು ಕಂಬನಿ ಮಿಡಿದಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿ, ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ರಾಮನಾಥ್ ಕೋವಿಂದ್

"ಸ್ಟೀಫನ್ ಹಾಕಿಂಗ್ ಅವರ ನಿಧನದ ಸುದ್ದಿ ಕೇಳಿ ಬೆಸರವಾಯಿತು. ಅವರ ಅಪ್ರತಿಮ ಬುದ್ಧಿಮತ್ತೆ ಈ ವಿಶ್ವ, ಮತ್ತು ಬ್ರಹ್ಮಾಂಡದ ಬಗೆಗಿನ ನಮ್ಮ ಕುತೂಹಲವನ್ನು ಕೊಂಚ ತಣ್ಣಗಾಗಿಸಿದೆ. ಅವರ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವ ಹಲವು ಪೀಳಿಗೆಗಳಿಗೆ ಆದರ್ಶವಾಗಿ ಉಳಿಯುತ್ತದೆ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ನರೇಂದ್ರ ಮೋದಿ

"ಪ್ರೊ. ಸ್ಟೀಫನ್ ಹಾಕಿಂಗ್ ಒಬ್ಬ ಅತ್ಯುತ್ತಮ ವಿಜ್ಞಾನಿ. ಅವರ ಸ್ಥಿರತೆ, ಪ್ರತಿಭೆ ಈ ಜಗತ್ತಿಗೆ ಸ್ಫೂರ್ತಿಯಾಗಿ ಉಳಿಯುತ್ತದೆ. ಅವರ ಅಗಲಿಕೆ ತುಂಬಲಾರದ ನಷ್ಟ. ಅವರ ಅಮೋಘ ಕೆಲಸಗಳು ಈ ಜಗತ್ತನ್ನು ಸುಂದರವಾಗಿಸಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಡಾ. ಜಿ. ಪರಮೇಶ್ವರ್

"ನನ್ನ ಗುರಿ ಸರಳ. ಈ ಬ್ರಹ್ಮಾಂಡವನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳುವುದು. ಅದು ಯಾಕೆ ಹೀಗಿದೆ ಮತ್ತು ಅದು ಯಾಕೆ ಅಸ್ತಿತ್ವದಲ್ಲಿದೆ ಎಂಬುದನ್ನು ತಿಳಿದುಕೊಳ್ಳುವುದು" ಎಂದಿದ್ದ ಸ್ಟೀಫನ್ ಹಾಕಿಂಗ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು ನಕ್ಷತ್ರದಂಥ ವಿಜ್ಞಾನಿಗೆ ನನ್ನ ಸಂತಾಪಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.

ಬಿ ಎಸ್ ಯಡಿಯೂರಪ್ಪ

"ಮೌನವಾಗಿರುವ ಜನರ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ! ವಿಶ್ವಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ನಿಧನದ ಸುದ್ದಿ ಕೇಳಿ ತೀವ್ರ ನೋವಾಯಿತು. ವಿಶ್ವದ ನಿಗೂಢತೆ, ಖಗೋಳ, ಕಪ್ಪು ರಂಧ್ರಗಳ ಬಗ್ಗೆ ಸಾಕಷ್ಟು ಸಂಶೋದನೆ ಮಾಡಿದ ಅವರ ಬದುಕು ಒಂದು ದಂತಕಥೆ. ಅವರ ಪರಂಪರೆ ಎಂದಿಗೂ ಜೀವಂತವಾಗಿರುತ್ತದೆ. ಅವರಿಗೆ ನನ್ನ ಶ್ರದ್ಧಾಂಜಲಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಸದ್ಗುರು

"ದೈನಿಕ ನ್ಯೂನತೆಗಳು ಯಶಸ್ಸಿನ ಅಡ್ಡಿಗಳಲ್ಲ, ಅವು ಯಶಸ್ಸಿಗೆ ಮೈಲಿಗಲ್ಲುಗಳು ಎಂಬುದನ್ನು ಸಾಬೀತುಪಡಿಸಿದ ಸ್ಟಿಫನ್ ಹಾಕಿಂಗ್ ಇನ್ನಿಲ್ಲ. ಅವರ ಪರಂಪರೆ ಮತ್ತು ಕೆಲಸಗಳು ಶತಮಾನಗಳಿಗೂ ಹೆಚ್ಚು ಕಾಲ ನೆನಪಿನಲ್ಲುಳಿಯುತ್ತದೆ. ಇದು ಒಂದು ಯುಗದ ಅಂತ್ಯ" ಎಂದು ಅಧಾತ್ಮ ಗುರು, ದಿಶಾ ಸಂಸ್ಥೆಯ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
President Ram Nath Kovind and Prime Minister Narendra Modi and many others on Wednesday expressed grief over the death of eminent British theoretical physicist Professor Stephen Hawking who died at the age of 76.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ