Railway-Highway Projects: ಕಳೆದ 9 ವರ್ಷದಲ್ಲಿ ಈ ರಾಜ್ಯಗಳಲ್ಲಾದ ರಸ್ತೆ-ರೈಲ್ವೆ ಅಭಿವೃದ್ಧಿ ಅಪ್ಡೇಟ್ ಕೊಟ್ಟ ಕೇಂದ್ರ

ನವದೆಹಲಿ ಡಿಸೆಂಬರ್ 08: ಭಾರತದ ಈಶಾನ್ಯ ರಾಜ್ಯಗಳಲ್ಲಿ ರೈಲ್ವೆ ಯೋಜನೆ ಮತ್ತು ಹೆದ್ದಾರಿ ಯೋಜನೆಗಳು ಜಾರಿಯಲ್ಲಿವೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಭಾಗದಲ್ಲಿ ಸಾರಿಗೆ ಮೂಲ ಸೌಕರ್ಯಗಳು ಅಭಿವೃದ್ಧಿ ಆಗುತ್ತಿವೆ.

ಈಶಾನ್ಯ ರಾಜ್ಯಗಳ ಪ್ರದೇಶಗಳಲ್ಲಿ 81,941 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ 1,909 ಕಿಮೀ ಉದ್ದದ ರೈಲ್ವೆ ಯೋಜನೆಗಳು ಅಭಿವೃದ್ಧಿಗೊಳ್ಳುತ್ತಿವೆ. ಇದರೊಂದಿಗೆ ಕಳೆದ ಒಂಬತ್ತು ವರ್ಷಗಳಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಒಟ್ಟು 4,950 ಕಿಮೀ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಅಭಿವೃದ್ಧಿಪಡಿಸಿದೆ ಕೆಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

India Northeastern State Got Rs 81941 cr Worth Railway Projects, 4950 km Highway project: Krishan Reddy

ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ ಒಂಬತ್ತು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಕುರಿತು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ ಉತ್ತರಿಸಿದ್ದಾರೆ. ಲಿಖಿತವಾಗಿ ರೈಲ್ವೆ ಮತ್ತು ಹೆದ್ದಾರಿ ಅಭಿವೃದ್ಧಿ ಬಗ್ಗೆ ತಿಳಿಸಿದರು.

ರೈಲ್ವೆ ಜಾಲ, ಹೆದ್ದಾರಿ ಅಭಿವೃದ್ಧಿ

ಇದೇ ವರ್ಷ 2023ರ ಏಪ್ರಿಲ್‌ಗೆ ಅನ್ವಯವಾಗುವಂತೆ 19 ರೈಲ್ವೆ ಮೂಲ ಸೌಕರ್ಯ ಯೋಜನೆಗಳು, ಈಶಾನ್ಯ ರಾಜ್ಯಗಳಲ್ಲಿ ಚಾಲ್ತಿಯಲ್ಲಿವೆ. ಒಟ್ಟು 1909 ಕಿಮೀ ಉದ್ದವನ್ನು ಅಂದಾಜು 81,941 ಕೋಟಿ ರೂ.ನಲ್ಲಿ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಅಗತ್ಯ ಅನುಮೋದನೆ ಸಹಿತ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

India Northeastern State Got Rs 81941 cr Worth Railway Projects, 4950 km Highway project: Krishan Reddy

ಈ ರೈಲ್ವೆ ಯೋಜನೆ ಪೈಕಿ 482 ಕಿಮೀ ಉದ್ದಕ್ಕೆ ಮಾರ್ಚ್ 2023 ರವರೆಗೆ 37,713 ಕೋಟಿ ರೂಪಾಯಿ ಹಣ ವೆಚ್ಚ ಮಾಡಲಾಗಿದೆ. 2014-23 ರ ಅವಧಿಯಲ್ಲಿ ಕೇಂದ್ರ ಸರ್ಕಾರ ಒಟ್ಟು 1,618 ಕಿಮೀ ರೈಲ್ವೆ ಜಾಲ ಅಭಿವೃದ್ಧಿ ಪಡಿಸಿದೆ. ಇದರಲ್ಲಿ 377 ಕಿಮೀ ಹೊಸ ಮಾರ್ಗ ನಿರ್ಮಾಣವಾದರೆ, 972 ಕಿಮೀ ಗೇಜ್ ಪರಿವರ್ತನೆ ಮಾಡಲಾಗಿದೆ. ಜೊತೆಗೆ 269 ಕಿಮೀ ವಿಸ್ತರಣೆ ಮಾಡಲಾಗಿದೆ ಎಂದು ಸಚಿವಾಲಯ ಪ್ರಕಟಣೆ ತಿಳಿಸಿದೆ.

ಹೆಚ್ಚುವರಿ ಯೋಜನೆಗಳ ಮಾಹಿತಿ

2014ರಿಂದ 2023 ರವರೆಗಿನ ಈ ಒಂಬತ್ತು ವರ್ಷಗಳಲ್ಲಿ ಭಾರತದ ಈಶಾನ್ಯ ರಾಜ್ಯಗಳಲ್ಲಿ 41,459 ಕೋಟಿ ರೂಪಾಯಿಯಲ್ಲಿ ಒಟ್ಟು 4,950 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಜಾಲ ನಿರ್ಮಿಸಲಾಗಿದೆ ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಇದಷ್ಟೇ ಅಲ್ಲದೇ ಈಶಾನ್ಯ ರಾಜ್ಯಗಳ ವ್ಯಾಪ್ತಿಯಲ್ಲಿ 'ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆ' (NESIDS) ಮತ್ತು 'ಈಶಾನ್ಯ ರಸ್ತೆ ವಲಯ ಅಭಿವೃದ್ಧಿ ಯೋಜನೆ' (NERSDS) ಅಡಿಯಲ್ಲಿ 77 ರಸ್ತೆ ಯೋಜನೆಗಳಿಗಾಗಿ ಒಟ್ಟು 3372.58 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ.

ಸಾರಿಗೆ ಅಭಿವೃದ್ಧಿಯಿಂದ ಸಾಕಷ್ಟು ಪ್ರಯೋಜನ

ಸಾರಿಗೆ ಮೂಲ ಸೌಕರ್ಯ ಅಭಿವೃದ್ಧಿ ಮಾಡುವ ಮೂಲಕ ದೇಶದಲ್ಲಿ ಈಶಾನ್ಯ ರಾಜ್ಯಗಳನ್ನು ಮುಖ್ಯ ವಾಹಿನಿಯೊಂದಿಗೆ ಏಕೀಕರಣಗೊಳಿಸುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದೆ. ಅಗತ್ಯ ಸರಕುಗಳು ಮತ್ತು ಕೃಷಿ ಉತ್ಪನ್ನಗಳ ತ್ವರಿತ ಚಲನೆಗೆ ಈ ಸಾರಿಗೆ ಅಭಿವೃದ್ಧಿ ಅನುಕೂಲವಾಗಲಿದೆ.

ರಸ್ತೆ, ರೈಲ್ವೆ ಅಭಿವೃದ್ಧಿಯಿಂದ ವ್ಯಾಪಾರ ವಹೀವಾಟು ಹೆಚ್ಚುತ್ತದೆ. ಜನರಿಗೆ ಉದ್ಯೋಗಾವಕಾಶಗಳ ಹೆಚ್ಚಳವಾಗುತ್ತದೆ. ಅಲ್ಲದ ಈ ಭಾಗದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಪ್ರವಾಸೋದ್ಯಮ ಉದ್ಯಮದ ಅಭಿವೃದ್ಧಿಗೆ ವೇಗ ದೊರೆಯುತ್ತದೆ. ಕೈಗಾರಿಕೆಗಳ ಬೆಳವಣಿಗೆಗೂ ಪೂರಕವಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+