ಇಥಿಯೋಪಿಯಾ ತೆರಳುವ ಭಾರತೀಯರಿಗೆ ಎಚ್ಚರಿಕೆ ನೀಡಿದ ಸರಕಾರ

ನವದೆಹಲಿ, ಜೂನ್ 21: ಇಥಿಯೋಪಿಯಾದ ರಾಜಧಾನಿ ಅಡಿಸ್ ಅಬಾಬದಲ್ಲಿ ಈಚೆಗೆ ವಲಸಿಗರು ಹಾಗೂ ವಿದೇಶೀಯರ ಮೇಲೆ ದಾಳಿ ಪ್ರಮಾಣ ಹೆಚ್ಚಾಗಿದ್ದು, ಆಫ್ರಿಕಾದ ದೇಶಗಳಿಗೆ ತೆರಳುವ ಭಾರತೀಯ ನಾಗರಿಕರು ಎಚ್ಚರಿಕೆಯಿಂದ ಇರಬೇಕು ಹಾಗೂ ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳಬೇಕು ಎಂದು ಶುಕ್ರವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಎಚ್ಚರಿಕೆ ನೀಡಿದೆ.

ದುಬಾರಿ ಹಾಗೂ ಬೆಲೆಬಾಳುವ ವಸ್ತುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದಾಗಲೀ ಕತ್ತಲೆಯ ಪ್ರದೇಶಗಳಲ್ಲಿ ಸಂಚರಿಸುವುದಾಗಲೀ ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ.

ವಲಸಿಗರು ಹಾಗೂ ವಿದೇಶಿಯರ ಮೇಲೆ ಅಡಿಸ್ ಅಬಾಬ ಸೇರಿ ದೇಶದ ವಿವಿಧೆಡೆ ದಾಳಿಗಳು ನಡೆದಿವೆ. ಆದ್ದರಿಂದ ಇಥಿಯೋಪಿಯಾದಲ್ಲಿ ವಾಸ ಇರುವವರು ಹಾಗೂ ಅಲ್ಲಿಗೆ ಭೇಟಿ ನೀಡುವ ಭಾರತೀಯರು ದುಬಾರಿ- ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಹಾಗೂ ಸಾರ್ವಜನಿಕವಾಗಿ ಕಾಣುವಂತೆ ಹಾಕಿಕೊಂಡು ತಿರುಗುವುದು ಮಾಡಬಾರದು ಹಾಗೂ ಕತ್ತಲೆ ಪ್ರದೇಶದಲ್ಲಿ ಸುತ್ತಾಡಬಾರದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

India MEA issued advisory notice to Indians who traveled to Ethiopia

ಅಡಿಸ್ ಅಬಾಬದಲ್ಲಿ ಇರುವ ಭಾರತ್ ರಾಯಭಾರ ಕಚೇರಿಯನ್ನು 00251 911506852 ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎನ್ನಲಾಗಿದೆ. ಸ್ಥಳೀಯ ವರದಿಗಳ ಪ್ರಕಾರ ಇಥಿಯೋಪಿಯಾದಲ್ಲಿ ವಾಸ ಇರುವ ವಿದೇಶೀಯರ ಮೇಲೆ ದಾಳಿ ಹೆಚ್ಚಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+