Donald Trump: ಡೊನಾಲ್ಡ್ ಟ್ರಂಪ್ ಬಿಟ್ಟ ತೆರಿಗೆ ಬಾಣದಿಂದ ಭಾರತ ಬಚಾವ್?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಅವಾಂತರ ಕಂಡು ಈಗಾಗಲೇ ಭಾರತದ ಷೇರುಪೇಟೆ ನಡುಗಿ ಹೋಗಿತ್ತು. ಡೊನಾಲ್ಡ್ ಟ್ರಂಪ್ ತೆರಿಗೆ ಬದಲಾವಣೆ ಮಾಡಿ, ಅಮೆರಿಕ ಜೊತೆಗೆ ವ್ಯಾಪಾರ ಸಂಬಂಧ ಹೊಂದಿರುವ ದೇಶಗಳ ವಿರುದ್ಧ ಭಾರಿ ದೊಡ್ಡ ಪ್ರಮಾಣದ ಟ್ಯಾಕ್ಸ್ ಹಾಕಲು ಮುಂದಾಗಿದ್ದರು. ಇದರಿಂದ ಭಾರತೀಯ ಷೇರು ಮಾರುಕಟ್ಟೆ ಸೇರಿದಂತೆ, ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಸಂಚಲನ ಸೃಷ್ಟಿಯಾಗಿತ್ತು. ಆದರೆ ಇದೀಗ ಭಾರತದ ಷೇರ ಮಾರುಕಟ್ಟೆ ಸುಧಾರಿಸಿಕೊಂಡಿದೆ.

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡು ಇನ್ನೂ 3 ತಿಂಗಳು ಕೂಡ ಮುಗಿದಿಲ್ಲ, ಆದರೂ ಈಗಾಗಲೇ ನೂರಾರು ಕಂಪ್ಲೆಂಟ್‌ಗಳು ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಕೇಳಿಬಂದ ಹಿನ್ನೆಲೆ ಜಾಗತಿಕ ಮಟ್ಟದಲ್ಲಿ ದೊಡ್ಡ ಗಲಾಟೆ ನಡೆಯುತ್ತಿದೆ. ಹೀಗೆ, ಭಾರತದ ಜೊತೆಗೆ ಕೂಡ ಟ್ರಂಪ್ ಅವರ ಟ್ಯಾಕ್ಸ್ ಬಾಣದಿಂದ ಕಿರಿಕ್ ಶುರುವಾಗಿತ್ತು. ಇದು ಷೇರು ಮಾರುಕಟ್ಟೆ ಹೂಡಿಕೆದಾರರ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರಿತ್ತು. ಆದರೆ ಎಲ್ಲಾ ಗಾಯ ಮಾಯವಾಗುತ್ತಿದ್ದು, ಒಂದೇ ದಿನ ಭಾರತದ ಷೇರು ಮಾರುಕಟ್ಟೆ ದೊಡ್ಡ ಪ್ರಮಾಣದ ಚೇತರಿಕೆ ಕಂಡಿದೆ.

India Leads in Recovery from Trump Tariff Losses

ಒಂದೇ ದಿನ ಹೂಡಿಕೆದಾರರ ಜೇಬು ಫುಲ್!

ಭಾರತೀಯ ಷೇರು ಮಾರುಕಟ್ಟೆ ಇಂದು ಬೆಳಗ್ಗೆಯಿಂದಲೇ ದೊಡ್ಡ ಪ್ರಮಾಣದ ಚೇತರಿಕೆಯನ್ನ ಕಂಡಿದ್ದು, ಪ್ರಮುಖ ಸೂಚ್ಯಂಕಗಳು ಇಂದು ಭಾರಿ ದೊಡ್ಡ ಏರಿಕೆ ಕಂಡಿವೆ. ಇಂದು ಒಂದೇ ದಿನ ಸೆನ್ಸೆಕ್ಸ್ ಬರೋಬ್ಬರಿ 1500ಕ್ಕೂ ಹೆಚ್ಚು ಅಂಕ ಗಳಿಸಿದ್ದು, 76700ರ ಗಡಿಯನ್ನು ದಾಟಿದೆ. ಇದರ ಜೊತೆಗೆ ನಿಫ್ಟಿ-50 ಬರೋಬ್ಬರಿ 521 ಅಂಕ ಗರಿಷ್ಠ ಏರಿಕೆಯನ್ನ ಕಂಡು, 23,349ರ ಗಡಿ ದಾಟಿದೆ. ಇದು ಹೂಡಿಕೆದಾರರಿಗೆ ಉಂಟಾಗಿದ್ದ ನಷ್ಟವನ್ನ ಸರಿ ದಾರಿಗೆ ತಂದಿದೆ. ಹಾಗೇ ಬ್ಯಾಂಕ್ ನಿಫ್ಟಿ, ಮಿಡ್‌ಕ್ಯಾಪ್ ನಿಫ್ಟಿ ಕೂಡ ಚೇತರಿಕೆ ಕಂಡಿದ್ದು ಹೂಡಿಕೆ ಮಾಡಿದ್ದವರಿಗೆ ಸಿಕ್ಕಾಪಟ್ಟೆ ಲಾಭ ಆಗಿದೆ.

ಭರ್ಜರಿ ಸುದ್ದಿ ಕೊಟ್ಟ ಟ್ರಂಪ್!

ಭಾರತ ನಮ್ಮ ಕಾರುಗಳ ಮೇಲೆ ಅತಿ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದು ಇದೇ ಕಾರಣಕ್ಕೆ ನಾವು ಕೂಡ ಹೆಚ್ಚಿನ ತೆರಿಗೆ ಹಾಕುತ್ತಿದ್ದೇವೆ ಅಂತಾ ಅಮೆರಿಕ ತನ್ನ ನಿರ್ಧಾರ ಸಮರ್ಥನೆ ಮಾಡಿತ್ತು. ಹಾಗೇ ಏಪ್ರಿಲ್ 2 ರಿಂದ ಜಾರಿಗೆ ಬರುವಂತೆ ಹೊಸ ತೆರಿಗೆ ನೀತಿ ಘೋಷಣೆ ಮಾಡಿ, ಆತಂಕವನ್ನ ಕೂಡ ಹುಟ್ಟು ಹಾಕಿದ್ದರು ಡೊನಾಲ್ಡ್ ಟ್ರಂಪ್. ಭಾರತ ಮಾತ್ರವಲ್ಲದೆ ಚೀನಾ ಕೂಡ ಟ್ರಂಪ್ ಅವರ ನಿರ್ಧಾರದಿಂದ ದೊಡ್ಡ ನಷ್ಟ ಅನುಭವಿಸುವ ಆತಂಕದಲ್ಲಿ ಇತ್ತು. ಆದರೆ, ಅಮೆರಿಕ ಇದೀಗ ತೆರಿಗೆ ಹೇರಿಕೆಯನ್ನು ಮುಂದೂಡಿಕೆ ಮಾಡಿದ್ದು, ಭಾರತೀಯ ಷೇರು ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+